ದಮ್ಮಾಮ್ :ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ದಮ್ಮಾಂ ಈಷ್ಟರ್ನ್ ಝೋನ್ ವತಿಯಿಂದ ಬೃಹತ್ ಇಫ್ತಾರ್ ಕೂಟ ದಿನಾಂಕ 7 , ಫೆಬ್ರವರಿ 2025 ಶುಕ್ರವಾರ ಜುಬೈಲ್ ನಲ್ಲಿ ಜರಗಿತು. ಕೆಎಂವೈಎ ದಮ್ಮಾಂ ಘಟಕದ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭವು ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರ ಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡಿತು.
ಮುಹಮ್ಮದ್ ಅಮಾನುದ್ದೀನ್ ಪವಿತ್ರ ಖುರ್ ಆನ್ ನ ಸೂರ: ಅರ್ರಹ್ಮಾನ್ ಪಠಿಸಿದರು.
ಇಸ್ಮಾಯೀಲ್ ಕಾಟಿಪಳ್ಳ ರಮಳಾನ್ ಸಂದೇಶ ನೀಡಿದರು.
ಕಳೆದ 36 ವರ್ಷಗಳಿಂದ ಸಮುದಾಯದ, ಜಮಾಅತ್ ನ ಏಳಿಗೆಗಾಗಿ, ಅಭಿವೃಧ್ಧಿಗೋಸ್ಕರ ದುಡಿಯುತ್ತಿರುವ ಕೆಎಂವೈಎ ಮುಂದಕ್ಕೆ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವನ್ನು ಹಮ್ಮಿಕೊಂಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಜಮಾಅತ್ ನ ಅರ್ಹರಿಗೆ ರಮಳಾನ್ ಕಿಟ್ ವಿತರಿಸಲು ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಣಂಬೂರು ಮುಸ್ಲಿಂ ಜಮಾಅತ್ ಮುಹ್ಯಿದ್ದೀನ್ ಜುಮ್ಅ ಮಸೀದಿ ಅಧ್ಯಕ್ಷ ಹಾಜಿ ಎಸ್. ರಹ್ಮತುಲ್ಲಾಹ್, ಕೆಎಂವೈಎ ಮಾಜಿ ಅಧ್ಯಕ್ಷರುಗಳಾದ ಎಸ್.ಅಬ್ದುಲ್ ಅಝೀಝ್ ಮತ್ತು ಎಸ್. ಅಬ್ದುರ್ರಹೀಂ ಹಾಗೂ ಊರಿನಿಂದ ಆಗಮಿಸಿದ ಅಬ್ದುರ್ರಝ್ಝಾಖ್ ಕಂಡಕ್ಟರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಕಾಣಿಕೆಯಾಗಿ ಪವಿತ್ರ ಗ್ರಂಥ ಖುರ್ ಆನನ್ನು ನೀಡಿ ಗೌರವಿಸಲಾಯಿತು.
ಜಮಾಅತ್ ಅಧ್ಯಕ್ಷರು ಮಾತನಾಡುತ್ತಾ ಜಮಾಅತ್ ಅಧೀನದ ಅಲ್ ಮದ್ರಸತುನ್ನೂರಿಯ್ಯ ನೂತನ ಕಟ್ಟಡ ನಿರ್ಮಾಣ ದ ಕಾರ್ಯಕ್ಕೆ ತಾವುಗಳೆಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು. ಜಮಾಅತ್ ನ ಸರ್ವ ಅಭಿವೃಧ್ಧಿ ಕಾರ್ಯಗಳಲ್ಲಿ ಕೆಎಂವೈಎ ಯ ಪಾತ್ರ ಶ್ಲಾಘನೀಯ ಹಾಗೂ ಸರ್ವ ಸದಸ್ಯರ ಆಫಿಯತ್ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಅಲ್ಲಾಹನ ಅನುಗ್ರಹ ಸದಾ ಕಾಲ ವರ್ಷಿಸುತ್ತಿರಲಿ ಎಂದು ಹಾರೈಸಿದರು.
ಅಬ್ದುರ್ರಹೀಂ ರವರು ಮಾತನಾಡಿ ಕೆಎಂವೈಎ ಯ ಅಭಿವೃಧ್ಧಿಗೋಸ್ಕರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಭಿನ್ನವಿಸಿದರು.
ಬೃಹತ್ ಇಫ್ತಾರ್ ಕೂಟ ಕ್ಕೆ ಆಗಮಿಸಿ, ಸಹಕರಿಸಿ ಯಶಸ್ವಿಗೊಳಿಸಿದ ಪ್ರತಿಯೊಬ್ಬ ಸದಸ್ಯರಿಗೂ ಕೆಎಂವೈಎ ನೂತನ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ಕೃತಜ್ಞತೆ ಸಲ್ಲಿಸಿದರು.
ಗೌರವಾಧ್ಯಕ್ಷ ಮುಸ್ಥಫ ಇಬ್ರಾಹೀಂ,
ಕೋಶಾಧಿಕಾರಿ ತಾಜುದ್ದೀನ್,
ಮಾಜಿ ಅಧ್ಯಕ್ಷರುಗಳಾದ ಪಿ.ಎ. ರಹ್ಮಾನ್, ಪಿ.ಎ. ಮುಹಮ್ಮದ್ ಬಶೀರ್, ನಝೀರ್ ಗುಲಾಂ, ನೌಶಾದ್ ರಶೀದ್, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ದಮ್ಮಾಂ, ಅಲ್ ಖೋಬರ್, ಅಲ್ ಹಸ್ಸಾ , ಜುಬೈಲ್ ವ್ಯಾಪ್ತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.
ಪ್ರಾರಂಭದಲ್ಲಿ ಇಸ್ಮಾಯೀಲ್ ಕಾಟಿಪಳ್ಳರವರು ಸ್ವಾಗತಿಸಿದರು ಕೊನೆಯಲ್ಲಿ ಶರ್ ವಾನ್ ಇಬ್ನ್ ಮುಹ್ಯಿದ್ದೀನ್ ಧನ್ಯವಾದ ಗೈದರು.