janadhvani

Kannada Online News Paper

ಡಿಕೆಯಸ್ಸಿ ತುಖ್ಬಾ ಘಟಕದ ವತಿಯಿಂದ ಗ್ರಾಂಡ್ ಇಫ್ತಾರ್ ಮೀಟ್

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ದಮ್ಮಾಂ ವಲಯ ಅಧೀನಕ್ಕೊಳಪಟ್ಟ ತುಖ್ಬ ಘಟಕದಲ್ಲಿ 30 ನೇ ಗ್ರಾಂಡ್ ಇಫ್ತಾರ್ ಕೂಟ 6, ಮಾರ್ಚ್ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ ಬಹಳ ವಿಜೃಂಭಣೆಯಿಂದ ನೆರವೇರಿತು.

ಡಿಕೆಯಸ್ಸಿ ತುಖ್ಬಾ ಘಟಕದ ನೂತನ ಅಧ್ಯಕ್ಷರಾದ ಅಬೂಬಕ್ಕರ್ ಹಂಡೇಲ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳರವರು ಸಮಾರಂಭಕ್ಕೆ ಚಾಲನೆ ನೀಡಿದರು.ಪರಿಶುದ್ಧ ರಮಳಾನ್ ನ ಪ್ರಾಮುಖ್ಯತೆ ಮತ್ತು ಪವಿತ್ರ ಖುರ್ ಆನ್ ನ ಶ್ರೇಷ್ಠತೆಯನ್ನು ಸೂರ: ಅಲ್ ಬಖರ ದ ಆಯತ್ ನಂಬ್ರ: 183 ರಿಂದ 185 ನ್ನು ಪಠಿಸುವ ಮೂಲಕ ವಿವರಿಸಿದರು.

ತುಖ್ಬ ಘಟಕದ ಡೆವಲಪ್ ಮೆಂಟ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಮೂಳೂರು ಡಿಕೆಯಸ್ಸಿಯ ಮುಂದಿನ ಅಭಿವೃಧ್ಧಿಗೋಸ್ಕರ ನಮ್ಮ ಮುಂದಿರುವ ಪ್ರಮುಖ ಪಾತ್ರದ ಬಗ್ಗೆ ವಿವರಿಸಿದರು.
ಮರ್ಕಝ್ ಸಖಾಫತಿಸ್ಸುನ್ನಿಯ್ಯ: ಕಾರಂದೂರು, ಕೇರಳ ಇದರ ವಿದ್ಯಾರ್ಥಿ ಅರ್ ಮಾನ್ ಅಬ್ದುಲ್ ಹಮೀದ್ ಡಿಕೆಯಸ್ಸಿಯಿಂದ ನಮಗಿರುವ ಅನುಕೂಲತೆಗಳೇನು ಎಂಬುದನ್ನು ಹದೀಸ್ ನ ಅಡಿಸ್ಥಾನದಲ್ಲಿ ನುಡಿದರು.ಮುಖ್ಯ ಸಲಹೆಗಾರ ಶಂಸುದ್ದೀನ್ ಮೂಳೂರು, ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಚ್ಚಿಲ, ಸದಸ್ಯರಾದ
ಅಬ್ದುರ್ರಹ್ಮಾನ್ ಮೂಳೂರು, ಅಸ್ಲಂ ಎರ್ಮಾಳ್,ರಿಯಾಝ್ ಮಣಿಪುರ, ಆಸಿಫ್ ಉಚ್ಚಿಲ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ದಮ್ಮಾಂ ಝೋನ್ ಮಾಜಿ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ,
ಹಣಕಾಸು ಕಾರ್ಯದರ್ಶಿ ಅಬ್ದುಲ್ ಕರೀಂ ಪಾಣೆಮಂಗಳೂರು, ಸ್ಥಾಪಕ ಸದಸ್ಯ ಎನ್. ಎಸ್. ಅಬ್ದುಲ್ಲ ಮಂಜನಾಡಿ, ತುಖ್ಬ ಘಟಕ ಉಸ್ತುವಾರಿ ಅಬ್ದುರ್ರಶೀದ್ ಬೆಳ್ಳಾರೆ,ದಮ್ಮಾಂ ಘಟಕದಿಂದ ಅಬೂಬಕ್ಕರ್ ಅಜಿಲಮೊಗರು ಮತ್ತು ಉಮರಬ್ಬ ಮರವೂರು, ಅಲ್ ಖೋಬರ್ ಘಟಕದ ಅಧ್ಯಕ್ಷ ಇರ್ಶಾದ್ ಅಬ್ದುರ್ರಹ್ಮಾನ್ ಪುತ್ತೂರು, ಮಾಜಿ ಅಧ್ಯಕ್ಷ ಅಶ್ರಫ್ ಚಿಕ್ಕ ಮಗಳೂರು, ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು, ಸದಸ್ಯರಾದ ಅಬ್ದುಲ್ ಹಮೀದ್ ಸುಳ್ಯ ಹಾಜರಿದ್ದರು.

ಹಣಕಾಸು ಕಾರ್ಯದರ್ಶಿ ಮುಹಮ್ಮದ್ ಹನೀಫ್ ಜೆಪ್ಪು ರವರು ಊಟೋಪಚಾರದ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಮೆಚ್ಚುಗೆ ಪಡೆದರು.
ಸ್ನಾಕ್ಸ್ ಮತ್ತು ಪಾಯಸದ ವ್ಯವಸ್ಥೆ ಮಾಡಿದ ಅಬ್ಬು ಬಜಗೋಳಿ ಹಾಗು ರುಚಿಕರವಾದ ಊಟ ತಯಾರಿಸಿದ ಅಶ್ರಫ್ ಹಾಗು ಹಸೀಬ್ ಮೂಳೂರು ಮತ್ತು ಫಲಹಾರಗಳ ವ್ಯವಸ್ಥೆ ಮಾಡಿದ ಶರೀಫ್, ಮತ್ತು ಸಂಶೀರ್ ಅರಫಾ, ಹುಸೈನ್,ಅಬ್ದುಲ್ಲತೀಫ್ ಕಿನ್ನಿಗೋಳಿ,ಶಾಕಿರ್, ನೌಫಲ್,ಫರಾಜ್ ರವರಿಗೆ ಕೃತಜ್ಞತೆಗಳನ್ನು ಅರ್ಪಿಸಲಾಯಿತು.
ಅಬ್ದುಲ್ ಹಮೀದ್ ಉಳ್ಳಾಲ ರವರ ನೇತೃತ್ವದಲ್ಲಿ ತರಾವೀಹ್ ನಮಾಝ್ ಏರ್ಪಡಿಸಲಾಗಿತ್ತು.
ಸಮಾರಂಭದ ಕೊನೆಯಲ್ಲಿ ಡಿಕೆಯಸ್ಸಿ ತುಖ್ಬ ಘಟಕ ನೂತನ ಪ್ರಧಾನ ಕಾರ್ಯದರ್ಶಿ ಸಲೀಮ್ ಉಪ್ಪಿನಂಗಡಿ ಧನ್ಯವಾದಗೈದರು.