ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಇದರ ಸಮಿತಿ ಪುನರ್ರಚನಾ ಸಭೆಯು ದಿನಾಂಕ 28.02.2025 ರಂದು ಪ್ರೆಸ್ಟೇಜ್ ಹಾಲ್ ಪುತ್ತೂರಿನಲ್ಲಿ ಝೋನ್ ಅಧ್ಯಕ್ಷರಾದ ಕೆ. ಬಿ. ಕಾಸಿಂ ಹಾಜಿ ಮಿತ್ತೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಜಂಇಯ್ಯತುಲ್ ಉಲಮಾ ನೇತಾರರಾದ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರುರವರು ಉದ್ಘಾಟಿಸಿದರು. ಝೋನ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ವರದಿ ಹಾಗೂ ಕೋಶಾಧಿಕಾರಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್ ರವರು ಲೆಕ್ಕಪತ್ರ ಸಭೆಗೆ ಮಂಡಿಸಿದರು. ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯಲ್ಲಿ ಅಂಗೀಕರಿಸಿ, ಸಮಿತಿಯನ್ನು ವಿಸರ್ಜಿಸಲಾಯಿತು.
ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕಾರ್ಯದರ್ಶಿಯಲ್ಲೊರ್ವರಾದ ಅಬ್ದುಲ್ ಹಮೀದ್ ಸುಣ್ಣಮೂಲೆಯವರು ಸಭೆಯ ನೇತೃತ್ವ ವಹಿಸಿ, 2025-27 ನೇ ಸಾಲಿಗೆ 29 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಿದರು.ನೂತನ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಪ್ರಧಾನ ಕಾರ್ಯದರ್ಶಿಯಾಗಿ ಸತತ ಎರಡನೇ ಬಾರಿಗೆ ಇಕ್ಬಾಲ್ ಬಪ್ಪಳಿಗೆ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ದಅ್ವಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ, ಮಾಧ್ಯಮ ಕಾರ್ಯದರ್ಶಿಯಾಗಿ ಮುಹಮ್ಮದ್ ಹಬೀಬ್ ಶೇರಾ, ಇಸಾಬಾ ಕಾರ್ಯದರ್ಶಿಯಾಗಿ ನಝೀರ್ ಪಾಟ್ರಕೋಡಿ, ಸಹಾಯ್ ಕಾರ್ಯದರ್ಶಿಯಾಗಿ ಉಸ್ಮಾನ್ ಹಾಜಿ ಕಬಕ, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಯೂಸುಫ್ ಹಾಜಿ ಗೌಸಿಯಾ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಉಸ್ತಾದ್ ಬನ್ನೂರು, ಸಮಿತಿ ಸದಸ್ಯರಾಗಿ ಕೆ. ಬಿ. ಕಾಸಿಂ ಹಾಜಿ ಮಿತ್ತೂರು, ಇಝ್ಝುದ್ದೀನ್ ಮುಸ್ಲಿಯಾರ್ ಮಾಡನ್ನೂರು, ಆದಂ ಹಾಜಿ ಈಶ್ವರಮಂಗಳ, ಉಮರ್ ಹಾಜಿ ಕಬಕ, ಇಸ್ಮಾಯಿಲ್ ಹಾಜಿ ಹಸನ್ ನಗರ, ಅಬ್ದುಲ್ ಕುಂಞಿ ಕೊಡಿಪ್ಪಾಡಿ, ಅಬೂಬಕ್ಕರ್ ಮುಸ್ಲಿಯಾರ್ ಕುಂಬ್ರ, ಮುಹಮ್ಮದ್ ಕೆಜಿಎನ್, ಹಂಝ ಲತೀಫಿ ಮಾಡಾವು, ಮೂಸಾ ಕುಂಞಿ ಅಮ್ಚಿನಡ್ಕ, ಹುಸೈನ್ ಮುಸ್ಲಿಯಾರ್ ಮಾಡಾವು, ಯೂಸುಫ್ ಹಾಜಿ ಸೂರಿಕುಮೇರ್, ಹಾಜಿ ಅಬ್ದುಲ್ ರಝಾಕ್ ಫಲಾಹ್ ಕಲ್ಲಡ್ಕ, ಮುಹಮ್ಮದ್ ಮದನಿ ಇರ್ದೆ, ಮೂಸಾ ಮದನಿ ರೆಂಜ, ಮೂಸಾ ಚೇಲಡ್ಕ, ಇಬ್ರಾಹಿಂ ಸಂಪ್ಯ, ಆದಂ ಹಾಜಿ ಪಡೀಲ್, ಮಜೀದ್ ಬನ್ನೂರು, ಇಸ್ಮಾಯಿಲ್ ಹಾಜಿ ಬನ್ನೂರುರವನ್ನು ಆರಿಸಲಾಯಿತು.
ಜಿಲ್ಲಾ ಕೌನ್ಸಿಲರುಗಳಾಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಯೂಸುಫ್ ಸಯೀದ್ ಪುತ್ತೂರು, ಕೆ. ಬಿ. ಕಾಸಿಂ ಹಾಜಿ ಮಿತ್ತೂರು, ಯೂಸುಫ್ ಹಾಜಿ ಗೌಸಿಯಾ, ಅಬ್ದುಲ್ ಅಝೀಝ್ ನೂರಾನಿ, ಮಜೀದ್ ಬನ್ನೂರು, ಯೂಸುಫ್ ಹಾಜಿ ಸೂರಿಕುಮೇರ್, ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ, ಹಂಝ ಲತೀಫಿ ಮಾಡಾವು, ಆದಂ ಹಾಜಿ ಪಡೀಲ್, ಯೂಸುಫ್ ವಳಂಗಾಜೆ, ಅಬ್ದುರ್ರಹ್ಮಾನ್ ಕಬಕ, ಅಬ್ದುಲ್ಲಾ ಉಸ್ತಾದ್ ಬನ್ನೂರು, ಮುಹಮ್ಮದ್ ಕೆಜಿಎನ್, ಕೆ. ಎಚ್. ಇಸ್ಮಾಯಿಲ್, ಉಸ್ಮಾನ್ ಮುಸ್ಲಿಯಾರ್ ಕುಂಬ್ರ ಹಾಗೂ ಯೂಸುಫ್ ದರ್ಭೆರವರು ಆಯ್ಕೆಗೊಂಡರು.
ನಿರ್ಗಮನ ಅಧ್ಯಕ್ಷ ಕೆ. ಬಿ. ಕಾಸಿಂ ಹಾಜಿ ಮಿತ್ತೂರುರವರು ಮಾತನಾಡಿದರು. ಪುತ್ತೂರು ಝೋನ್ ಉಸ್ತುವಾರಿ ಹನೀಫ್ ಹಾಜಿ ಇಂದ್ರಾಜೆ ಆಯ್ಕೆಪ್ರಕ್ರಿಯೆಯಲ್ಲಿ ಸಹಕರಿಸಿದರು. ಮೇಲ್ವಚಾರಕರಾಗಿ ಆಗಮಿಸಿದ ದ. ಕ. ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ ನಡೆದ ಸದಸ್ಯತ್ವ ಡಾಟಾ ಎಂಟ್ರಿಯಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯು ಅತ್ಯಧಿಕ ಸದಸ್ಯರನ್ನು ಸೇರ್ಪಡಿಸಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ, ಸಹಕರಿಸಿದ ಎಲ್ಲಾ ಯುನಿಟ್, ಸರ್ಕಲ್, ಝೋನ್ ನಾಯಕರಿಗೆ ಕೃತಜ್ಞತೆ ಸಲ್ಲಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಎಸ್‌ವೈಎಸ್ ಝೋನ್ ನಾಯಕರಾದ ಶಾಹುಲ್ ಹಮೀದ್ ತಾಜ್, ಮಜೀದ್ ಪಾಟ್ರಕೋಡಿ ಮೊದಲಾವರು ಉಪಸ್ಥಿತರಿದ್ದರು. ಝೋನ್ ವ್ಯಾಪ್ತಿಯ ಏಳು ಸರ್ಕಳುಗಳ ಝೋನ್ ಕೌನ್ಸಿಲರುಗಳು ಭಾಗವಹಿಸಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುಲ್ಲಾ ಉಸ್ತಾದ್ ಬನ್ನೂರುರವರು ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ಧನ್ಯವಾದಗೈದರು.
ವರದಿ : ಮುಹಮ್ಮದ್ ಹಬೀಬ್ ಶೇರಾ
(ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್)