janadhvani

Kannada Online News Paper

ವಿಶ್ವದ ಅತಿದೊಡ್ಡ ಇಫ್ತಾರ್ ಕೂಟ: ಮಕ್ಕಾದ ಹರಮ್‌ ಮಸೀದಿಯಲ್ಲಿ

ಅಂದಾಜಿನ ಪ್ರಕಾರ ಪ್ರತಿದಿನ ಎಂಟು ಲಕ್ಷದಿಂದ ಹದಿನೈದು ಲಕ್ಷ ವಿಶ್ವಾಸಿಗಳು ಇಲ್ಲಿಗೆ ಆಗಮಿಸುತ್ತಾರೆ.

ರಿಯಾದ್: ವಿಶ್ವದ ಅತಿದೊಡ್ಡ ಇಫ್ತಾರ್ ಕೂಟ ಮಕ್ಕಾದ ಹರಮ್‌ ಮಸೀದಿಯಲ್ಲಾಗಿದೆ. ರಂಜಾನ್ ಮೊದಲ ರಾತ್ರಿಗಳಲ್ಲೇ ಹರಮ್ ತುಂಬಿರುತ್ತದೆ. ಪವಿತ್ರ ಖುರ್ ಅವತೀರ್ಣಗೊಂಡ ಮಾಸವಾದ್ದರಿಂದ ವಿಶ್ವಾಸಿಗಳು ಒಂದು ತಿಂಗಳ ಕಾಲ ಉಪವಾಸ ಆಚರಿಸಿ ಅಲ್ಲಾಹನ ಮೊರೆ ಹೋಗುತ್ತಾರೆ. ಮಕ್ಕಾವು ವಿಶ್ವದ ಅತಿ ದೊಡ್ಡ ಇಫ್ತಾರ್ ಕೂಟವನ್ನೂ ಹೊಂದಿದೆ. ಅಂದಾಜಿನ ಪ್ರಕಾರ ಪ್ರತಿದಿನ ಎಂಟು ಲಕ್ಷದಿಂದ ಹದಿನೈದು ಲಕ್ಷ ವಿಶ್ವಾಸಿಗಳು ಇಲ್ಲಿಗೆ ಆಗಮಿಸುತ್ತಾರೆ.

ಹರಮ್‌ನಲ್ಲಿ ಹಜ್‌ಗಿಂತ ಹೆಚ್ಚು ಜನನಿಬಿಡ ಸಮಯವಾಗಿದೆ ರಂಜಾನ್. ಪ್ರತಿ ಒಳ್ಳೆಯ ಕಾರ್ಯಕ್ಕೂ ವಿಶ್ವಾಸಿಗಳು ಹರಮ್‌ನಲ್ಲಿ ಅಲ್ಲಾಹನ ಪ್ರಸನ್ನತೆಯನ್ನು ಅಧಿಕವಾಗಿ ಪಡೆಯುತ್ತಾರೆ. ಮದೀನಾ ಕೂಡ ತುಂಬಾ ಜನದಟ್ಟಣೆಯಿಂದ ಕೂಡಿದೆ.

ಹರಮ್ ಪ್ರಾಂತ್ಯದಲ್ಲಿ ಮಸ್ಜಿದ್ ಅಲ್-ಹರಾಮ್ ಜೊತೆಗೆ ಅನೇಕ ಮಸೀದಿಗಳಿವೆ. ಹರಮ್‌ನಲ್ಲಿರುವ ಯಾವುದೇ ಮಸೀದಿಯು ಹರಮ್‌ನಂತೆಯೇ ಅದೇ ಪುಣ್ಯವನ್ನು ಹೊಂದಿದೆ ಎಂಬುದಾಗಿದೆ ಧಾರ್ಮಿಕ ಪಾಠ. ಜನಸಂದಣಿಯನ್ನು ತಪ್ಪಿಸಲು ಹರಮ್ ಪ್ರದೇಶದ ವಿವಿಧ ಮಸೀದಿಗಳನ್ನು ಬಳಸಬಹುದು ಎಂದು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.