janadhvani

Kannada Online News Paper

ಮಕ್ಕಾ ಮದೀನಾ ಹರಮ್‌ನಲ್ಲಿ ಇಅ್ ತಿಕಾಫ್‌: ಮಾರ್ಚ್ 5 ರಂದು ನೋಂದಣಿ ಆರಂಭ

ಇಡೀ ಸಮಯವನ್ನು ಮಸೀದಿಯಲ್ಲಿ ಪ್ರಾರ್ಥನೆಯೊಂದಿಗೆ ಕಳೆಯುವುದು ಇದರ ವಿಧಾನವಾಗಿದೆ

ರಿಯಾದ್: ಮಕ್ಕಾ ಮದೀನಾ ಹರಮ್‌ನಲ್ಲಿ ಇಅ್ ತಿಕಾಫ್‌ಗಾಗಿ ನೋಂದಣಿ ಮಾರ್ಚ್ 5 ರಂದು ಪ್ರಾರಂಭವಾಗಲಿದೆ. ರಂಜಾನ್‌ನ 20 ರಿಂದ 30ರ ವರೆಗೆ ಇಅ್ ತಿಕಾಫ್ ಕೂರಲು ನೋಂದಣಿ ಮೂಲಕ ಅನುಮತಿ ಲಭಿಸಲಿದೆ. ಮಾರ್ಚ್ 5 ರ ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಹರಮ್ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್ alharamain.gov.sa ಮೂಲಕ ಇಲ್ಲವೇ ಅಬ್ಶೀರ್ ಮೂಲಕ ಇಅ್ ತಿಕಾಫ್‌ಗಾಗಿ ನೋಂದಣಿ ಪೂರ್ಣಗೊಳಿಸಬೇಕು. ನೋಂದಣಿಯು ನಿರ್ದಿಷ್ಟ ಸಂಖ್ಯೆಗೆ ಸೀಮಿತವಾಗಿರುತ್ತದೆ.

ರಂಜಾನಿನ ಕರ್ಮಗಳಿಗೆ ಅತ್ಯಂತ ಪುಣ್ಯದಾಯಕವಾದ ದಿನಗಳಾಗಿವೆ ಕೊನೆಯ ಹತ್ತು ಹಗಲು ಮತ್ತು ರಾತ್ರಿಗಳು. ಈ ದಿನಗಳಲ್ಲಿ, ವಿಶ್ವಾಸಿಗಳು ಮಕ್ಕಾದಲ್ಲಿನ ಮಸ್ಜಿದ್ ಅಲ್-ಹರಾಮ್ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಇಅ್ ತಿಕಾಫ್ ಕೂರಲು ಪ್ರಯತ್ನಿಸುತ್ತಾರೆ. ಇಡೀ ಸಮಯವನ್ನು ಮಸೀದಿಯಲ್ಲಿ ಪ್ರಾರ್ಥನೆಯೊಂದಿಗೆ ಕಳೆಯುವುದು ಇದರ ವಿಧಾನವಾಗಿದೆ. 18 ವರ್ಷ ಪೂರ್ತಿಯಾದ ವಿಶ್ವಾಸಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯಗಳಿವೆ. ರಂಜಾನ್ 20 ರಿಂದ ಎರಡೂ ಹರಮ್‌ಗಳಲ್ಲಿ ಇಅ್ ತಿಕಾಫ್ ಪ್ರಾರಂಭವಾಗಲಿದೆ.

ನೋಂದಾಯಿಸುವ ವಿದೇಶೀಯರು ಮಾನ್ಯತೆಯಿರುವ ಇಖಾಮಾವನ್ನು ಹೊಂದಿರಬೇಕು. ಅನುಮತಿ ಪಡೆದವರಿಗೆ ಉಪವಾಸ ಕೊಠಡಿ, ಭೋಜನ, ಲಾಕರ್ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಸೌಲಭ್ಯ ಸಿಗಲಿದೆ. ಮುಂಚಿತವಾಗಿ ಪರವಾನಗಿ ಪಡೆದವರಿಗೆ ಮಾತ್ರ ಇಅ್ ತಿಕಾಫ್‌ಗಾಗಿ ಅನುಮತಿ ನೀಡಲಾಗುತ್ತದೆ.