ಪುತ್ತೂರು :ಎಸ್ ವೈಎಸ್ ಪುತ್ತೂರು ಝೋನ್ ಸಮಿತಿ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಮರ್ಹೂಮ್ ಹಾಫಿಳ್ ಮಸ್ಊದ್ ಸಖಾಫಿ ಉಸ್ತಾದರ ಅನುಸ್ಮರಣೆ ಸಂಗಮ ನಡೆಯಿತು.
ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಅಲ್ ಹಿಕಮಿ ಕರ್ನೂರು ರವರ ನಾಯಕತ್ವದಲ್ಲಿ ನಡೆದ ಅನುಸ್ಮರಣಾ ಸಂಗಮವನ್ನು ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ರವರು ಉದ್ಘಾಟಿಸಿ ಅನುಸ್ಮರಣಾ ಭಾಷಣ ಮಾಡಿದರು.ದಅವಾ ವಿಭಾಗದ ಚೇರ್ಮನ್ ಹೈದರ್ ಸಖಾಫಿ ಬುಡೋಳಿ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು.
ಸಂಗಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್, ಕೋಶಾಧಿಕಾರಿ ಶಾಹುಲ್ ಹಮೀದ್ ಕಬಕ, ಸಂಘಟನಾ ವಿಭಾಗದ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಿಮಮಿ ರೆಂಜ, ಸಾಂತ್ವನ,ಇಸಾಬಾ ಚೇರ್ಮನ್ ಅಬ್ದುಲ್ಲ ಕಾವು, ಸೋಷಿಯಲ್ ಕಲ್ಚರಲ್ ಕಾರ್ಯದರ್ಶಿ ಖಾಸಿಂ ಪೇರಲ್ತಡ್ಕ, ಕಬಕ ಸರ್ಕಲ್ ಅಧ್ಯಕ್ಷ ಸಿದ್ದೀಕ್ ಹಾಜಿ, ಮಾಡಾವು ಸರ್ಕಲ್ ಅಧ್ಯಕ್ಷ ಬದ್ರುಲ್ ಮುನೀರ್ ಹನೀಫಿ, ಅಬ್ದುಲ್ ಕರೀಂ ಹಾಜಿ ಕಾವೇರಿ, ಶಮೀರ್ ಕೊಡಿಪ್ಪಾಡಿ, ಉಮರ್ ಸಅದಿ ಈಶ್ವರಮಂಗಲ, ಶರೀಫ್ ಪಿಎಚ್ ಬಡಗನ್ನೂರು, ಜಲೀಲ್ ಮುಸ್ಲಿಯಾರ್ ಕೋಡಾಜೆ, ಅಶ್ರಫ್ ಅಜ್ಜಿಕಲ್ಲು, ಸಾಜಿದ್ ಪಾಟ್ರಕೋಡಿ, ಮಜೀದ್ ಪಿಟ್ರಕೋಡಿ, ಫಾರೂಕ್ ಬನ್ನೂರು , ಅಬ್ದುಲ್ ರಹೀಮ್ ಕೆಮ್ಮಾಯಿ ಮೊದಲಾದವರು ಉಪಸ್ಥಿತರಿದ್ದರು,