ಬುರೈದ : ಬೆಳ್ತಂಗಡಿ ತಾಲೂಕು ನಾವೂರು ನಿವಾಸಿ ಬುರೈದದಲ್ಲಿ ಉದ್ಯೋಗದಲ್ಲಿರುವ ಹೈದರ್ ಎಂಬವರ 2 ವರ್ಷ ಪ್ರಾಯದ ಗಂಡು ಮಗು ಮುಹಮ್ಮದ್ ಅಬ್ಯಾನ್ ಆದಿತ್ಯವಾರ ಅಲ್ಲಾಹುವಿನ ಅನುಲಂಘನೀಯ ವಿಧಿಗೆ ವಿದೇಯವಾಗಿ ಬುರೈದ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ
ಮರಣ ಹೊಂದಿತು.
ತಕ್ಷಣ ಊರಿನಿಂದ ಮೃತರ ಬಂಧುಗಳು KCF ಅಲ್ ಕಸೀಮ್ ಝೋನ್ ನಾಯಕರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ನಾಯಕರಾದ ಯಾಕೂಬ್ ಸಖಾಫಿ , ತಾಜುದ್ದೀನ್ ಕೆಮ್ಮಾರ , ಅಬ್ದುಲ್ ಖಾದರ್ ಕಣ್ಣಂಗಾರ್ , ಸಮಾಜ ಸೇವಕ ಲತೀಫ್ ಶೇರಿ ನೇತೃತ್ವದ ತಂಡವು ತಕ್ಷಣ ಆಸ್ಪತ್ರೆಗೆ ತೆರಳಿ ಮೃತ ಮಗುವಿನ ತಂದೆ , ಹಾಗೂ ಕುಟುಂಬಸ್ಥರನ್ನು ಕಂಡು ಸಾಂತ್ವನವನ್ನು ಹೇಳಿ , ಮಗುವಿನ ದಫನ ಕಾರ್ಯಕ್ಕೆ ಬೇಕಾಗುವ ಎಲ್ಲಾ ದಾಖಲೆ ಪತ್ರವನ್ನು KCF ಅಲ್ ಕಸೀಮ್ ಸಾಂತ್ವನ ಇಲಾಖೆ ನೇತೃತ್ವವು ತಕ್ಷಣ ಸರಿ ಪಡಿಸಿ 4-03-2025 ನೇ ಮಂಗಳವಾರ ಸಂಜೆ ಬುರೈದ ಹಯ್ಯಲ್ ಕಲೀಜ್ ಮಸೀದಿ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.
ಮೃತ ಮಗುವಿನ ಕುಟುಂಬಸ್ಥರು, KCF ಕಾರ್ಯಕರ್ತರು , ಮಂಗಳೂರು ಮೂಲದ ಪ್ರವಾಸಿ ಸಹೋದರರು ದಫನ ಕಾರ್ಯದಲ್ಲಿ ಪಾಲ್ಗೊಂಡರು.
ಸಾಂತ್ವನ ಇಲಾಖೆ
ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಅಲ್ ಕಸೀಮ್ ಝೋನ್