janadhvani

Kannada Online News Paper

ಡಿಕೆಯಸ್ಸಿ ಹಫರ್ ಅಲ್ ಬಾತಿನ್- ನೂತನ ಸಾರಥ್ಯ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯದ ಅಧೀನಕ್ಕೋಳಪಟ್ಟ ಹಪರ್ ಅಲ್ ಬಾತಿನ್ ಘಟಕದ 30ನೇ ವಾರ್ಷಿಕ ಮಹಾಸಭೆ 20 ಫೆಬ್ರವರಿ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ ಅಧ್ಯಕ್ಷ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು.

ಸಿರಾಜ್ ಕುಂತೂರ್ ರವರು ಕಾರ್ಯಕ್ರಮ ನಿರೂಪಿಸಿದರು. ಸಭೆಯು ಬಶೀರ್ ಸಅದಿ ಉಸ್ತಾದ್ ರವರ ದುಆ ದೊಂದಿಗೆ ಆರಂಭಗೊಂಡಿತು. ಅಬ್ದುಲ್ಲಾ ಸುಲೈಮಾನ್ ಸೂರಿಂಜೆಯವರು ಖಿರಾಅತ್ ಪಠಿಸಿದರು.
ಸುಲೈಮಾನ್ ಸುಣ್ಣಮೂಳೆಯವರು ಸಭೆಗೆ ಬಂದವರನ್ನು ಆದರದಿಂದ ಸ್ವಾಗತಿಸಿದರು.
ಸಿದ್ದೀಖ್ ಕನ್ಯಾನರವರು ಅಲ್ಲಾಹನ ಪರಿಶುದ್ಧ ನಾಮದಿಂದ ಸಮಾರಂಭವನ್ನು ಉದ್ಘಾಟಿಸಿದರು.
ಇಖ್ಬಾಲ್ ಮರ್ದಾಳ ರವರು ವಾರ್ಷಿಕ ವರದಿ ವಾಚಿಸಿದರು.

ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮುಂಜೆಯವರು 2024-25ರ ಸಾಲಿನ D.K.S.C ಗ್ಲೋಬಲ್ ವರದಿ ಮತ್ತು ವಾರ್ಷಿಕ ಪ್ರವರ್ತನ ವರದಿ ಮಂಡಿಸಿ ಅನುಮೋದನೆಯನ್ನು ಪಡೆದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರು ಡಿಕೆಯಸ್ಸಿಯ ಅಭಿವೃದ್ಧಿಗಾಗಿ ಇನ್ನೂ ಮುಂದಕ್ಕೂ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಅಗತ್ಯವಿದೆ. ತಾವುಗಳೆಲ್ಲರೂ ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ಹಿತವಚನ ನೀಡಿದರು.

ಡಿಕೆಯಸ್ಸಿ ಕೇಂದ್ರ ಸಮಿತಿ ಮತ್ತು ದಮ್ಮಾಮ್ ವಲಯದ ಸಲಹೆಗಾರರಾದ ಸುಲೈಮಾನ್ ಮಿಲನ್ ಸೂರಿಂಜೆಯವರ ನೇತೃತ್ವದಲ್ಲಿ 2025-26ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ:
ಸಿರಾಜ್ ಕುಂತೂರ್

ಪ್ರಧಾನ ಕಾರ್ಯದರ್ಶಿಯಾಗಿ:
ಇಖ್ಬಾಲ್ ಮರ್ದಾಳ

ಹಣಕಾಸು ಕಾರ್ಯದರ್ಶಿಯಾಗಿ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರು ಆಯ್ಕೆಗೊಂಡರು.

ಸಹ ಹಣಕಾಸು ಕಾರ್ಯದರ್ಶಿ: ಅಕ್ಬರ್ ಯಡೂರ್

ಸಂವಹನಾ ಕಾರ್ಯದರ್ಶಿ: ಬಾಸೀಲ್ ಸರಲೀಕಟ್ಟೆ

ಡೆವಲಪ್ಮೆಂಟ್ ಚೆಯರ್ಮಾನ್: ಅಬ್ದುಲ್ ಹಮೀದ್ ಯಡೂರ್

ಉಪಾಧ್ಯಕ್ಷರಾಗಿ: ಸಾದಿಖ್ ಅಹ್ಮದ್ ಸಾಗರ್,
ಹಸನ್ ಆರಗ
ರಫೀಖ್ ಅಹ್ಮದ್ ಪುತ್ತೂರು

ಕಾರ್ಯದರ್ಶಿಗಳಾಗಿ: ಸುಲೈಮಾನ್ ಸುಣ್ಣಮೂಳೆ, ಮುಹಮ್ಮದ್ ಅಮ್ಮುಂಜೆ

ಮುಖ್ಯ ಸಲಹೆಗರರಾಗಿ: ಉಸ್ತಾದ್ ನಜೀಮ್ ಮದನಿ

ಸಲಹೆಗರರಾಗಿ:
ಮಖ್ಬೂಲ್ ಕುದ್ರೋಳಿ

ಲೆಕ್ಕ ಪರಿಶೋದಕರಾಗಿ:
ಹೈದರ್ ಮರ್ದಾಳರವರು ಆಯ್ಕೆಗೊಂಡರು.

ಕಾರ್ಯಕಾರಿ ಸದಸ್ಯರಾಗಿ: ತೌಸಿಫ್ ಮರ್ದಾಳ,ಅಹ್ಮದ್ ಶಾಹ್, ಅಸ್ಲಂ ಎರ್ಮಾಲ್, ಸಿದ್ದೀಖ್ ಕನ್ಯಾನ,ಅಬ್ದು ರ್ರಹ್ಮಾನ್ ಪುತ್ತೂರು, ಅಬ್ಬುರಶೀದ್ ಕುಂಜಾಲ್,ಸಿರಾಜ್ ಶನಿವಾರಸಂತೆ,ಅಬ್ದುಲ್ ಖಾದರ್ ಬಜಾಲ್, ಶಫೀಖ್ ನಂದಾವರ ಮತ್ತು ರಿಯಾಝ್ ಉಳ್ಳಾಲರವರು ಆಯ್ಕೆಗೊಂಡರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಲೈಮಾನ್ ಸೂರಿಂಜೆಯವರು ಪದಾಧಿಕಾರಿಗಳ ಕರ್ತವ್ಯದ ಬಗ್ಗೆ ವಿವರಿಸಿ, ಡಿಕೆಯಸ್ಸಿಯ ಮಹತ್ವದ ಬಗ್ಗೆ ಸಭೆಯಲ್ಲಿ ಸದಸ್ಯರ ಮನದಟ್ಟುವ ರೂಪದಲ್ಲಿ ಸವಿಸ್ತಾರವಾಗಿ ವಿವರಿಸಿದರು.

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸಿರಾಜ್ ಕುಂತೂರ್ ರವರು ಮಾತನಾಡಿ ಡಿಕೆಯಸ್ಸಿ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿರಿ ಎಂದು ವಿನಂತಿಸಿದರು.
ಸಾದಿಖ್ ಅಹ್ಮದ್ ಸಾಗರ್ ರವರು ಧನ್ಯವಾದಗೈದರು.
ಕೊನೆಯಲ್ಲಿ ಕಫ್ಫಾರತುಲ್ ಮಜ್ಲಿಸ್ ಮತ್ತು ನಬಿ ಕರೀಮ್ (ಸ. ಅ) ರವರ ಮೇಲಿನ ಸ್ವಲಾತ್ ನೊಂದಿಗೆ ಅಂದಿನ ಸಭೆಯನ್ನು ಕೊನೆಗೊಳಿಸಲಾಯಿತು.