janadhvani

Kannada Online News Paper

ಉಪ್ಪಿನಂಗಡಿ: ಎಸ್ ವೈ ಎಸ್ ಕೊಪ್ಪಳ ಶಾಖೆ ಅಸ್ತಿತ್ವಕ್ಕೆ

ಉಪ್ಪಿನಂಗಡಿ ಮಠ ಕೊಪ್ಪಳದಲ್ಲಿ ಎಸ್ ವೈ ಎಸ್ ನ ನೂತನ ಸಮಿತಿಯನ್ನು ರಶೀದ್ ಮುಸ್ಲಿಯರ್ ಕೊಪ್ಪಳ ಇವರ ನೀವಾಸದಲ್ಲಿ,ಉಪ್ಪಿನಂಗಡಿ ಎಸ್ ವೈ ಎಸ್ ಸರ್ಕಲ್ ಅಧ್ಯಕ್ಷರಾದ ಸಿರಾಜ್ ಸಖಾಫಿ ಪೀಚಾಲರ್ ಅವರ ಅದ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಕೆ ಎಮ್ ಜೆ ಉಪ್ಪಿನಂಗಡಿ ಸರ್ಕಲ್ ಪ್ರ. ಕಾರ್ಯದರ್ಶಿ ಅಬ್ದುಲ್ ರಝಾಖ್ ಸಖಾಫಿ ಕೊಪ್ಪಳ, ಕೆ ಎಮ್ ಜೆ ಉಪ್ಪಿನಂಗಡಿ ಸರ್ಕಲ್ ಕೋಶಾಧಿಕಾರಿ ಆದಂ ಕೊಪ್ಪಳ, ಉಪ್ಪಿನಂಗಡಿ ಎಸ್ ವೈ ಎಸ್ ಸರ್ಕಲ್ ಕೋಶಾಧಿಕಾರಿ ಬಾವುಂಞಿ ಮಠ ಉಪಸ್ಥಿತರಿದ್ದರು.
ಎಸ್ ವೈಸ್ ಎಸ್ ನ ಕುರಿತು ಸಿರಾಜ್ ಸಖಾಫಿ ಮತ್ತು ರಝಾಕ್ ಸಖಾಫಿ ತರಗತಿ ನಡೆಸಿ ಕೊಟ್ಟರು.

ನೂತನ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರು: ಮನ್ಸೂರು ಜೆ ಸಿ ಬಿ ಕೊಪ್ಪಳ
ಪ್ರ.ಕಾರ್ಯದರ್ಶಿ : ರಶೀದ್ ಕೆ ಝೆಡ್ ಆರ್
ಕೋಶಾಧಿಕಾರಿ: ರಹ್ಮಾನ್ ಟೈಲರ್ ಕೊಪ್ಪಳ
ಉಪಾಧ್ಯಕ್ಷರು: ಮುಸ್ತಾಪ ಕೊಪ್ಪಳ
ಇಸಾಬ : ಹನೀಫ್ ಕೊಪ್ಪಳ
ದಅವಾ ಕಾರ್ಯದರ್ಶಿ: ಕೈಸ್ ಜೆ ಸಿ ಬಿ ಕೊಪ್ಪಳ
ಸ್ವಾಂತನ ಕಾರ್ಯದರ್ಶಿ: ಜಾಬೀರ್ ಟೈಲರ್ ಕೊಪ್ಪಳ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಫೆ.26 ಬುಧವಾರ ದಂದು ನಡೆಯುವ ಸಮಿತಿಯ ಪ್ರಥಮ ಸಭೆಯಲ್ಲಿ ಮಲ್ಹರತುಲ್ ಬದ್ರಿಯಾ ಹಾಗೂ ಅಬ್ದುಲ್ ರಶೀದ್ ಸಖಾಫಿ (ಕೆಂದ್ರ ಜುಮಾ ಮಸೀದಿ ಮಜೂರ್ ಉಡುಪಿ) ಇವರಿಂದ ರಮಳಾನ್ ಪೂರ್ವತಯಾರಿ ತರಗತಿ ನಡೆಸುವುದಾಗಿ ತಿರ್ಮಾನಿಸಲಾಯಿತು.