ಮನಾಮ: ಕೆಸಿಎಫ್ ಬಹರೈನ್ ನೋರ್ತ್ ಝೋನ್ ಇದರ ಆಶ್ರಯದಲ್ಲಿ ನಡೆದ ಕೆಸಿಎಫ್ ಡೇ ಸ್ನೇಹ ಸಮ್ಮಿಲನ – 2025 ಕಾರ್ಯಕ್ರಮವು ಸಾರ್ ವಿಲ್ಲಾದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕೆಸಿಎಫ್ ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರು ಪ್ಲಾಗ್ ಶೋ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬುದೆಯ್ಯ ಸೆಕ್ಟರ್ ಅಧ್ಯಕ್ಷರಾದ ಹೈದರ್ ಸಅದಿ ಉಸ್ತಾದ್ ದುಆ ಗೈದರು. ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಮನ್ಸೂರ್ ಬೆಳ್ಮ ಅಧ್ಯಕ್ಷತೆ ವಹಿಸಿದರು. ನಂತರ ಕೆಸಿಎಫ್’ನ ಘೋಷ ವಾಕ್ಯದೊಂದಿಗೆ ಮೆರವಣಿಗೆ ನಡೆಯಿತು.
ಪ್ರತಿಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸ್ವಾಗತ ಸಮಿತಿ ಚೇರ್ಮಾನ್ ಹನೀಫ್ ಉಸ್ತಾದರು ವಹಿಸಿದರು. ಕಾರ್ಯಕ್ರಮದ ಮುನ್ನುಡಿಯಾಗಿ ಅಹ್ಮದ್ ಉಸ್ತಾದರು ಮಾತನಾಡಿದರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲ್ಲೂರು ಅಸಾಸ್ ಎಜುಕೇಷನ್ ಸಂಸ್ಥೆಯ ಚೇರ್ಮಾನ್ ಬಹು. ಎಂ.ಪಿ.ಎಂ. ಅಬೂರಾಫೀ ಅಶ್ರಫ್ ಸಅದಿ ಉಸ್ತಾದರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಸಂಘಟನಾ ತರಬೇತಿ ನಡೆಯಿತು.
ಸಂಘಟನೆಯಲ್ಲಿ ಕಾರ್ಯಾಚರಿಸುವಾಗ ನಮಗೆ ಅಲ್ಲಾಹುವಿನ ಸಹಾಯ ಇರುತ್ತದೆ. ಆದುದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಸಂಘಟನೆಯಲ್ಲಿ ಕಾರ್ಯಾಚರಿಸಬೇಕೆಂದು ಅವರು ಕರೆ ನೀಡಿದರು.
ಕೆಸಿಎಫ್ ನೋರ್ತ್ ಝೋನ್ ಹಾಗೂ ಸೌತ್ ಝೋನ್ ಎರಡು ತಂಡಗಳ ನಡುವೆ ಆಕರ್ಷಣೀಯವಾಗಿ ನಡೆದ ಎರಡು ಆಟೋಟ ಸ್ಪರ್ಧೆಯಲ್ಲಿ ನೋರ್ತ್ ಝೋನ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಸ್ವಾಗತ ಸಮಿತಿ ಚೇರ್ಮಾನ್ ಹನೀಫ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹು. ಅಶ್ರಫ್ ಸಅದಿ ಉಸ್ತಾದರು ದುಆ ಗೈದರು. ಅಹ್ಮದ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ಹಾಗೂ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇತ್ತೀಚೆಗೆ ಕೆಸಿಎಫ್ ಐಸಿಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಖಲಂದರ್ ಉಸ್ತಾದರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನ್ಯ, ಅಬ್ದುಲ್ ರಝಾಕ್ ಆನೆಕಲ್, ಹಾರಿಸ್ ಒಕ್ಕೆತ್ತೂರು, ಹನೀಫ್ ಜಿ.ಕೆರೆ, ಹಾಗೂ ಮೂಸ ಪೈಂಬಚ್ಚಾಲ್ ರವರನ್ನು ಸನ್ಮಾನಿಸಲಾಯಿತು. ಕ್ಯಾಬಿನೆಟ್ ನಾಯಕರಾದ ಮುಹಾಝ್ ಉಜಿರೆ, ಸೂಫಿ ಪೈಂಬಚ್ಚಾಲ್, ಮನ್ಸೂರ್ ಬೆಳ್ಮ, ಅಶ್ರಫ್ ರೆಂಜಾಡಿ, ಲತೀಫ್ ಪೆರೋಲಿ, ಸುಹೈಲ್ ಬಿಸಿ ರೋಡ್, ಇಕ್ಬಾಲ್ ಮಂಜನಾಡಿ, ತೌಫೀಖ್ ಬೆಳ್ತಂಗಡಿ, ಸೆಯ್ಯಿದ್ ಪೆರ್ಲ ಹಾಗೂ ಸ್ವಾಗತ ಸಮಿತಿ ಕನ್ವೀನರ್ ಸಮದ್ ಮಾದಾಪುರ ಉಪಸ್ಥಿತರಿದ್ದರು. ರಾಷ್ಟ್ರೀಯ, ಝೋನಲ್, ಸೆಕ್ಟರುಗಳ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ರಶೀದ್ ಈಶ್ವರಮಂಗಲ ಸ್ವಾಗತಿಸಿದರು. ಅಬೂಬಕರ್ ಮದನಿ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಅಲಿ ವೇಣೂರು ಧನ್ಯವಾದ ಸಮರ್ಪಿಸಿದರು.