ಉಳ್ಳಾಲ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯು.ಟಿ.ಎಂ. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಪ್ರಯುಕ್ತ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಫೆಬ್ರವರಿ 25 ರಂದು ಮಂಜನಾಡಿ ಅಲ್ ಮದೀನದ ಶರಪುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು.
ಅಲ್ ಮದೀನ ದಅವಾ ಕಾಲೇಜ್ ಪ್ರಾಂಶುಪಾಲರಾದ ಸಯ್ಯಿದ್ ಉವೈಸ್ ತಂಗಳ್ ದುಆ ನೆರವೇರಿಸಿದರು. ಅಲ್ ಮದೀನಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಯುಟಿಎಂ ಅಧ್ಯಕ್ಷ ಹಾಜಿ ಫಾರೂಕ್ ಅಬ್ಬಾಸ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಅವರು; ಯುಟಿಎಂ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಚಿಕಿತ್ಸಾ ನೆರವು, ಬಡ ಕುಟುಂಬಗಳಿಗೆ ಮಾಸಿಕ ಆಹಾರ ಕಿಟ್ ವಿತರಣೆ ಹಾಗೂ ಅಪಘಾತ, ರೋಗ ಇತ್ಯಾದಿಗಳಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಅಸಹಾಯಕರಿಗೆ ವ್ಯಾಪಾರ ಮಾಡಿ ಜೀವಿಸಲು ಆರ್ಥಿಕ ಸಹಾಯ ಮಾಡುತ್ತ ಬರುತ್ತಿದೆ ಎಂದರು. ಟ್ರಸ್ಟ್ ಕಾರ್ಯದರ್ಶಿ ಮೊಯ್ದಿನ್ ಹಾಜಿ ಮಲಾಝ್ ಸ್ವಾಗತಿಸಿದರು. ಖಜಾಂಜಿ ಅಬ್ದಲ್ ಬಶೀರ್ ಉಳ್ಳಾಲ , ಇಬ್ರಾಹೀಮ್ ಹಮ್ಮಬ್ಬ ಉಳ್ಳಾಲ ಉಪಸ್ಥಿತರಿದ್ದರು. ಅಬ್ದುಲ್ ರಜಾಕ್ ಮಾಸ್ಟರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.