ಹಯಾತುಲ್ ಔಲಿಯಾ ದರ್ಗಾ ಶರೀಫ್ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ ಕಾಜೂರು ಅಧೀನದ ಮಜ್ಲಿಸು ಸ್ವಲಾತುಲ್ ಜಲಾಲಿಯ್ಯ ಸಮಿತಿಯ ವತಿಯಿಂದ ಮರ್ಹೂಂ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ರವರ 37ನೇ ಆಂಡ್ ನೇರ್ಚೆ ಕಾರ್ಯಕ್ರಮವು ಕಾಜೂರು ದರ್ಗಾ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.
ಸಯ್ಯಿದ್ ಝೈನುಲ್ ಆಬಿದೀನ್ ಕಾಜೂರು ತಂಙಳ್ ದುಆಗೆ ನೇತೃತ್ವ ವಹಿಸಿದ್ದರು. ದರ್ಗಾ ಶರೀಫ್ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ ಕಾಜೂರು ಅಧ್ಯಕ್ಷರಾದ ಕೆ ಯು ಇಬ್ರಾಹಿಂ ಉದ್ಘಾಟಿಸಿ, ಕಾಜೂರು ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಹಾಗೂ ಕಾಜೂರು ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಉಮರ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು.
ದರ್ಗಾ ಶರೀಫ್ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ ಕಾಜೂರು ಪ್ರಧಾನ ಕಾರ್ಯದರ್ಶಿ ಹಾಗೂ ದ. ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಜೆ ಹೆಚ್, ಆರ್ ಜೆ ಎಂ ಕೋಶಾಧಿಕಾರಿ ಕಮಾಲ್, ಮಾಜಿ ಅಧ್ಯಕ್ಷರಾದ ಯೂಸುಫ್ ಶರೀಫ್, ಮಾಜಿ ಕೋಶಾಧಿಕಾರಿ ಅಬ್ಬಾಸ್ ಜೆ ಹೆಚ್, ಮಜ್ಲಿಸು ಸ್ವಲಾತುಲ್ ಜಲಾಲಿಯ್ಯ ಸಮಿತಿಯ ಅಧ್ಯಕ್ಷರಾದ ಕೆ ಕೆ ಹಕೀಂ, ಉಸ್ತಾದರುಗಳಾದ ಅಬ್ದುರ್ರಹ್ಮಾನ್ ಸಅದಿ, ಜಾಬಿರ್ ಹಿಮಮಿ ಸಖಾಫಿ ಹಾಗೂ ವಿವಿಧ ಸಂಘಟನಾ ನಾಯಕರು, ಜಮಾಅತರು ಉಪಸ್ಥಿತರಿದ್ದರು.
ಸದರ್ ಉಸ್ತಾದರಾದ ರಹೀಂ ಹನೀಫಿ ಸ್ವಾಗತಿಸಿ, ಸ್ವಾದಿಕ್ ಮಾಸ್ಟರ್ ಧನ್ಯವಾದ ಸಲ್ಲಿಸಿದರು.