janadhvani

Kannada Online News Paper

ಎಸ್‌ವೈಎಸ್ ದೇರಳಕಟ್ಟೆ ಝೋನ್ :ನವ ಸಾರಥಿಗಳ ಆಯ್ಕೆ

ದೇರಳಕಟ್ಟೆ ; ಎಸ್‌ವೈಎಸ್ ದೇರಳಕಟ್ಟೆ ಝೋನ್ ಇದರ ಮಹಾಸಭೆಯು ಝೋನ್ ಅಧ್ಯಕ್ಷರಾದ ತೌಸೀಫ್ ಸ‌ಅದಿ ಹರೇಕಳ ರವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ತಾಜುಲ್ ಉಲಮಾ ವುಮೆನ್ಸ್ ಕಾಲೇಜಿನಲ್ಲಿ ನಡೆಯಿತು.

ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಸಭೆಯನ್ನು ಉದ್ಘಾಟಿಸಿದರು. ಹಾಫಿಳ್ ಯಾಕೂಬ್ ಸ‌ಅದಿ ಅಡ್ಯಾರ್ ಸಾಂಘಿಕ ತರಗತಿ ನಡೆಸಿದರು. ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ಕಾನೆಕೆರೆ, ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ, ಇಸ್ಮಾಈಲ್ ಸ‌ಅದಿ ಉರುಮಣೆ, ಕೆ.ಇ. ರಝ್ವಿ ಸಾಲೆತ್ತೂರು, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಮುತ್ತಲಿಬ್ ಸಖಾಫಿ ಬೆಳ್ಮ, ಪ್ರಧಾನ ಕಾರ್ಯದರ್ಶಿ -ಉಸ್ಮಾನ್ ಫಜೀರ್, ಕೋಶಾಧಿಕಾರಿ- ಹನೀಫ್ ಬದ್ಯಾರ್, ಸಂಘಟನಾ ವಿಭಾಗ ಉಪಾಧ್ಯಕ್ಷ- ಉಸ್ಮಾನ್ ಝುಹ್ರಿ ಕಿನ್ಯ, ಕಾರ್ಯದರ್ಶಿ – ಹೈದರ್ ಹಿಮಮಿ, ದ‌ಅ್‌ವಾ ವಿಭಾಗ ಉಪಾಧ್ಯಕ್ಷ – ಮುಸ್ತಫಾ ಸ‌ಅದಿ ಹರೇಕಳ, ಕಾರ್ಯದರ್ಶಿ – ಫಾರೂಕ್ ಸಖಾಫಿ ಕಿನ್ಯ, ಸಾಂತ್ವನ & ಇಸಾಬಾ ವಿಭಾಗ ಉಪಾಧ್ಯಕ್ಷ – ಅಬ್ದುಲ್ ಹಮೀದ್ ಕಿನ್ಯ, ಕಾರ್ಯದರ್ಶಿ – ಮುಬೀನ್ ಅಕ್ಷರನಗರ, ಮೀಡಿಯಾ & ಐಟಿ ವಿಭಾಗ ಕಾರ್ಯದರ್ಶಿ – ಶಾಫಿ ಮದನಿ ಹರೇಕಳ, ಸೋಶಿಯಲ್ & ಕಲ್ಚರಲ್ ವಿಭಾಗ ಕಾರ್ಯದರ್ಶಿ – ಇಬ್ರಾಹಿಂ ನ‌ಈಮಿ ಆಯ್ಕೆಯಾದರು.
ಮುಸ್ತಫಾ ಸ‌ಅದಿ ಸ್ವಾಗತಿಸಿ, ಉಸ್ಮಾನ್ ಫಜೀರ್ ಧನ್ಯವಾದವಿತ್ತರು.