ಬೋಳಂತೂರು:SMA ಬೊಳಂತೂರು ರೀಜನಲ್ ಇದರ ವತಿಯಿಂದ ದಿನಾಂಕ:- 21-2-2025 ರಂದು ರೀಜನಲ್ ವ್ಯಾಪ್ತಿಯ ಮದರಸ ಉಸ್ತಾದವರುಗಳಿಗೆ ಸಿ ಹೆಚ್ ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ರೇಷನ್ ಕಿಟ್ ವಿತರಿಸಲಾಯಿತು.ನಾರ್ಶ ಜುಮಾ ಮಸೀದಿ ಖತೀಬರಾದ ಅಲ್ ಹಾಜಿ ಸುಲೈಮಾನ್ ಮುಸ್ಲಿಯಾರ್ ನಾರ್ಶ ದುಃಅ ನೆರವೇರಿಸಿದರು.
SMA ರಾಜ್ಯ ಪ್ರಧಾನ ಕಾರ್ಯದರ್ಶಿ ಮುಫತ್ತಿಸ್ ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸಿದರು. ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ SMA ಸೌತ್ ಜಿಲ್ಲಾ ಕಾರ್ಯದರ್ಶಿ ಅಬ್ಬಾಸ್ ಸೆರ್ಕಳ, ಸದಸ್ಯರಾದ ಸಿ ಹೆಚ್ ಅಬೂಬಕ್ಕರ್ , ಮುತ್ತಲಿಬ್ ಹಾಜಿ ಕೆ ಪಿ ಬೈಲ್, SMA ಬೊಳಂತೂರು ರೀಜನಲ್ ಕ್ಷೇಮ ಉಪಾಧ್ಯಕ್ಷ ಇಬ್ರಾಹೀಂ ಕರೀಂ ಕದ್ಕಾರ್, ಕ್ಷೇಮ ಕಾರ್ಯದರ್ಶಿ ರಫೀಕ್ ಮಾಡದಬಳಿ, ವಕ್ಫ್ ಕಾರ್ಯದರ್ಶಿ ಹೈದರ್ ಕೆ ಪಿ ಬೈಲ್, ಸುಲೈಮಾನ್ ಸಖಾಫಿ ಬೊಳಂತೂರು ಹಾಗೂ ಉಮ್ಮರ್ ಸಖಾಫಿ ಸೆರ್ಕಳ ಭಾಗವಹಿಸಿದರು.
ನಂತರ ರೀಜನಲ್ ವ್ಯಾಪ್ತಿಯಲ್ಲಿ ಬರುವ 30 ಉಸ್ತಾದ್ ರವರಿಗೆ ಕಿಟ್ ವಿತರಿಸಲಾಯಿತು. SMA ಬೊಳಂತೂರು ರೀಜನಲ್ ಕಾರ್ಯದರ್ಶಿ ಕಬೀರ್ ಸಅದಿ ಸ್ವಾಗತಿಸಿ ವಂದಿಸಿದರು.