ಮಂಜನಾಡಿ: ಅಕ್ಷಯ ಬ್ಲಡ್ ಡೋನರ್ಸ್ ಇದರ 39ನೇ ರಕ್ತದಾನ ಶಿಬಿರವು ಮಹಮ್ಮದ್ ಕುಂಞ ಅಮ್ಜದಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಅಲ್ ಮದೀನ ಕ್ಯಾಂಪಸ್ ನಲ್ಲಿ ಫೆ.9 ರಂದು ನಡೆಸಲಾಯಿತು.
ರಕ್ತದಾನ ಶಿಬಿರದಲ್ಲಿ 41 ಮಂದಿ ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಅಲ್ ಮದೀನ ಸಾರಥಿ ಅಬ್ದುಲ್ ಖಾದರ್ ಸಖಾಫಿ ದುಃಅ ನೆರವೇರಿಸಿದರು, ಮುನೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅತಿಥಿಗಳಾಗಿ ಅಬ್ದುಲ್ ಖಾದರ್ ಝುಹುರಿ, ಅಬೂಸಾಲಿ ಅಝ್ಹರಿ ಎಜೆ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಇನ್ಚಾರ್ಜ್ ಗೋಪಾಲಕೃಷ್ಣ , ಓ ಖಾಲಿದ್ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಹಂಝ ಮಂಚಿ ಹಾಗೂ ರಫೀಕ್ ಬೋರ್ಕಳ ಭಾಗವಹಿಸಿದರು. ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು.