ಸುನ್ನೀ ಯುವಜನ ಸಂಘ (SჄS) ಕಿನ್ಯ ಸರ್ಕಲ್ ಸಮಿತಿಯ ಮಹಾಸಭೆಯು ಕೂಡಾರ ತಾಜುಲ್ ಫುಖಹಾಅ್ ಮದ್ರಸ ದಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ರವರ ದುಆ ದೊಂದಿಗೆ ಸರ್ಕಲ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ದೇರಳಕಟ್ಟೆ ಝೋನ್ ಸಮಿತಿ ಅಧ್ಯಕ್ಷ ತೌಸೀಫ್ ಸಅದಿ ಹರೇಕಳ ಸಾಂಘಿಕ ಕಾರ್ಯಾಚರಣೆಯ ಮಹತ್ವ ವನ್ನು ವಿವರಿಸಿ ಮಾತನಾಡಿ ಸಭೆಯನ್ನು ಉದ್ಘಾಟಿಸಿದರು.
ಸರ್ಕಲ್ ಸಮಿತಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಬಾಕಿಮಾರ್ ವರದಿ ಮಂಡನೆ ಹಾಗೂ ಅಯ್ಯೂಬ್ ಬೆಳರಿಂಗೆ ಲೆಕ್ಕ ಪತ್ರ ಮಂಡಿಸಿದರು
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್,ಕೋಶಾಧಿಕಾರಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ,SSF ಕಿನ್ಯ ಸೆಕ್ಟರ್ ಅಧ್ಯಕ್ಷ ಸಫ್ವಾನ್, ಮುಸ್ಲಿಂ ಜಮಾಅತ್ ಬೆಳರಿಂಗೆ ಸಮಿತಿ ಅಧ್ಯಕ್ಷ ಅಬ್ಬಾಸ್ ಹಾಜಿ ಎಲಿಮಲೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.ದೇರಳಕಟ್ಟೆ ಝೋನ್ ನಿಂದ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಅಲ್ತಾಫ್ ಫಾಳಿಲಿ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.
ನೂತನ ಸಾಲಿನ ಅಧ್ಯಕ್ಷರಾಗಿ ಉಮರುಲ್ ಫಾರೂಖ್ ಸಖಾಫಿ ಮೀಂಪ್ರಿ,ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯೂಬ್ ಬೆಳರಿಂಗೆ,ಕೋಶಾಧಿಕಾರಿಯಾಗಿ ಸಾಮಣಿಗೆ ಅಬ್ದುಲ್ ಮಜೀದ್ ರವರನ್ನು ಆಯ್ಕೆ ಮಾಡಲಾಯಿತು.
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮೀಂಪ್ರಿ (ಉಪಾಧ್ಯಕ್ಷರು) ಮುಹಮ್ಮದ್ ರಫೀಖ್ ಝುಹ್ರಿ (ಸಂಘಟನಾ ಕಾರ್ಯದರ್ಶಿ) ಮುಹಮ್ಮದ್ ಬಷೀರ್ ಲತೀಫಿ ಕುರಿಯ (ಇಸಾಬ & ಸಾಂತ್ವನ ಕಾರ್ಯದರ್ಶಿ) ಉಮರುಲ್ ಫಾರೂಖ್ ಝುಹ್ರಿ ಬದ್ರಿಯಾ ನಗರ (ದಅ್‌ವಾ & ಟ್ರೈನಿಂಗ್ ಕಾರ್ಯದರ್ಶಿ)
ಉಳಿದಂತೆ ಮಹ್ಬೂಬ್ ಸಖಾಫಿ ಕಿನ್ಯ,ಉಸ್ಮಾನ್ ಝುಹ್ರಿ ಕುರಿಯ,ಅಬ್ದುಸ್ಸಲಾಂ ಬಾಕಿಮಾರ್,ಅಬ್ದುಲ್ ಹಮೀದ್ ಮೀಂಪ್ರಿ,ಫಾರೂಖ್ ರಹ್ಮತ್ ನಗರ,ಮುಸ್ತಫಾ ರಹ್ಮತ್ ನಗರ,ಶರೀಫ್ ರಹ್ಮತ್ ನಗರ,ಅನ್ಸಾರ್ ಉಕ್ಕುಡ,ಖಲಂದರ್ ಶಾಫಿ ಉಕ್ಕುಡ,ಅಬೂ ಸ್ವಾಲಿಅ್ ಉಕ್ಕುಡ,ಹಾರಿಸ್ ಸಖಾಫಿ ಕೂಡಾರ,ಝುಬೈರ್ ಖುತುಬಿನಗರ,ಸ್ವಾದಿಖ್ ಬದ್ರಿಯಾ ನಗರ,ಹಸನ್ ಕುಂಞಿ ಖುತುಬಿನಗರ,ಕೌಸರ್ ಅಲಿ ಬದ್ರಿಯಾ ನಗರ, ಫಾರೂಖ್ ಖುತುಬಿನಗರ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ದೇರಳಕಟ್ಟೆ ಝೋನ್ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ವಾಲಿಅ್ ಬೆಳ್ಮ,ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್, ತಾಜುಲ್ ಫುಖಹಾಅ್ ಮದ್ರಸದ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ನಾಯಕ ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ ಉಪಸ್ಥಿತರಿದ್ದರು.
ಫಾರೂಖ್ ಸಖಾಫಿ ಮೀಂಪ್ರಿ ಸ್ವಾಗತಿಸಿ ಅಯ್ಯೂಬ್ ಬೆಳರಿಂಗೆ ಕೊನೆಯಲ್ಲಿ ವಂದಿಸಿದರು.