ಇಡ್ಕಿದು :ಸುನ್ನಿ ಸ್ಟೂಡೆಂಟ್ ಫೆಡರೇಷನ್ (SSF) ಸುನ್ನಿ ಯುವಜನ ಸಂಘ (SYS) ಕರ್ನಾಟಕ ಮುಸ್ಲಿಂ ಜಮಅತ್ (KMJ )ಕೋಲ್ಪೆ ಶಾಖೆ. ಇದರ ಆಶ್ರಯದಲ್ಲಿ SSF ಕೋಲ್ಪೆ ಶಾಖೆಯ ದಶವಾರ್ಷಿಕ ಸಂಭ್ರಮದ ಅಂಗವಾಗಿ ಬ್ರಹತ್ ಮದನಿಯಂ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ.
ಲಕ್ಷಾಂತರ ವಿಶ್ವಾಸಿಗಳು ಪಾಲ್ಗೊಳ್ಳುವ ಬಹು:ಅಬ್ದುಲ್ ಲತೀಫ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ “ಮದನಿಯಂ” ಆತ್ಮೀಯ ಮಜ್ಲೀಸ್ ಕಾರ್ಯಕ್ರಮವು ಫೆಬ್ರವರಿ 20 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಸಮಯ 6:30 ಕ್ಕೆ ಸರಿಯಾಗಿ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಅಲ್ ಹಾಜ್ ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ದುಃಅ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.
ಕಾರ್ಯಕ್ರಮವನ್ನು ಸ್ಥಳೀಯ ಜಮಾಅತ್ ಖತೀಬರಾದ ಬಹು| ನೌಶಾದ್ ಕಾಮಿಲ್ ಸಖಾಫೀ ಅಲ್ ಫುರ್ಖಾನಿ ಬೆಲ್ಮ ಉದ್ಘಾಟಿಸಲಿದ್ದು. ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಅಧ್ಯಕ್ಷ ಜನಾಬ್| ಶೇಖಬ್ಬ ಹಾಜಿ ಕೋಲ್ಪೆ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಧ್ವಜಾರೋಹಣವನ್ನು ಮದನಿಯಂ ಸಮಿತಿ ಅಧ್ಯಕ್ಷ ಜನಾಬ್| ಹಮೀದ್ ಕನ್ಯಾನ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಸಭೆಯ ಗೌರವಾನ್ವಿತ ಸಭಾಧ್ಯಕ್ಷರಾದ ಯು.ಟಿ ಖಾದರ್, ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಜನಪ್ರಿಯ ಗ್ರೂಪ್ ಚೇರ್ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ . ಹಾಗು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಮ್. ಎಸ್ ಮೊಹಮ್ಮದ್ ಸಹಿತ ಪ್ರಮುಖರು ಹಾಗೂ ಹಲವಾರು ಸಾದಾತ್ ಗಳು ಉಲಮಾ, ಉಮಾರಾ ನೇತಾರರು ಭಾಗವಹಿಸಲಿದ್ದಾರೆ.
ಅದೇ ದಿನ ಅಸರ್ ನಮಾಝಿನ ಬಳಿಕ ಮಾಸಿಕ ಮಲ್ಹರತುಲ್ ಬದ್ರಿಯ್ಯಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.