ರಿಯಾದ್: ಸೌದಿ ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟಿಯ ಚೇರ್ಮನ್ ಅಹ್ಮದ್ ಅಲ್ ಖತೀಬ್‌ರನ್ನು ಅಮಾನತುಗೊಳಿಸಿರುವುದಾಗಿ ಅಧಿಕೃತ ವಾರ್ತಾ ಏಜೆನ್ಸಿ ವರದಿಮಾಡಿದೆ
ರಾಜಧಾನಿ ರಿಯಾದ್ ನಲ್ಲಿ ಮಹಿಳೆಯರನ್ನು ಒಳಗೊಂಡು ನಡೆಸಿದ ಸರ್ಕಸ್ ಮೂಲಕ ಉಂಟಾದ ವಿವಾದವು ಅಧ್ಯಕ್ಷರ ಸ್ಥಾನ ಪಲ್ಲಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಟ್ವಿಟ್ಟರ್ ನಲ್ಲಿ ಸರ್ಕಸ್ ಗೆ ಸಂಬಂಧಿಸಿದ ವೀಡಿಯೋ ಬಿತ್ತರಿಸಲಾಗಿತ್ತು. ಇದು ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.
2016 ರಲ್ಲಿ ಸೌದಿ ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟಿಯ ಅಧ್ಯಕ್ಷರಾಗಿ ಅಹ್ಮದ್ ಅಲ್ ಖತೀಬ್ ನೇಮಕಗೊಂಡಿದ್ದರು.