ರಿಯಾದ್: ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಭಾರತೀಯನೊಬ್ಬನನ್ನು ಆತನ ಮಗ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸೇಫ್ಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಲಕ್ನೋ ಮೂಲದ ಶ್ರೀಕೃಷ್ಣ ಬೃಗ್ನಾಥ್ ಯಾದವ್ ಅವರನ್ನು ಅವರ ಮಗ ಕುಮಾರ್ ಯಾದವ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪ್ರಕರಣದಲ್ಲಿ ಮಗನನ್ನು ಬಂಧಿಸಲಾಗಿದೆ.
ದೇಶದಲ್ಲಿ ಓದುತ್ತಿರುವಾಗಲೇ ಮಗ ಕುಮಾರ್ ಯಾದವ್ ನನ್ನು ಮಾದಕ ವ್ಯಸನದಿಂದ ಪಾರು ಮಾಡಲು ಅವನ ತಂದೆ ಶ್ರೀಕೃಷ್ಣ ಒಂದೂವರೆ ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ಕರೆತಂದಿದ್ದರು. ಆದರೆ ಕುಡಿತದ ಚಟಕ್ಕೆ ಬಿದ್ದ ಮಗ ಕುಮಾರನಿಗೆ ಮದ್ಯ ಸಿಗದೇ ನಿದ್ದೆ ಬರದೇ ಮಾನಸಿಕ ಸ್ಥಿಮಿತ ಉಂಟಾಯಿತು. ತಂದೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಕಣ್ಣುಗಳನ್ನು ಕಿತ್ತೊಯ್ದು, ಇಡೀ ದೇಹವನ್ನು ಗಾಯಗೊಳಿಸಿ ಕೊಂದಿದ್ದಾನೆ ಎಂಬ ಮಾಹಿತಿ ಲಭಿಸಿದೆ.
ಮೃತದೇಹವನ್ನು ಜುಬೈಲ್ ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಘಟನೆ ಸಂಬಂಧ ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.