ದುಬೈ: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ದುಬೈಯನ್ನು ನೋಡಲು ಮತ್ತು ಪರಿಚಯಿಸಲು ಹೊಸ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ವಾಸ್ತವೀಕ ದುಬೈಯ ಅನುಭವವನ್ನು ಪ್ರಯಾಣಿಕರಿಗೆ ನೀಡಲು ‘ನನ್ನ ದುಬೈ ಅನುಭವ’ ಎಂಬ ಹೆಸರಿನೊಂದಿಗೆ ಹೊಸ ಡಿಜಿಟಲ್ ಸಿಸ್ಟಮ್ ಅನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಸ್ಥಾಪಿಸಲಾಗಿದೆ.
ಎಮಿರೇಟ್ ಬಗ್ಗೆ ತಿಳಿದುಕೊಳ್ಳಲು ಮತ್ತು ದುಬೈಗೆ ಭೇಟಿ ನೀಡಲು ಸ್ಫೂರ್ತಿ ನೀಡುವುದು ಇದರ ಉದ್ದೇಶವಾಗಿದೆ. ದುಬೈಗೆ ಭೇಟಿ ನೀಡುವ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಲಭ್ಯವಾಗುವಂತಹ ಕೊಡುಗೆಗಳನ್ನು ಈ ಮೂಲಕ ಪಡೆಯಲಿದ್ದಾರೆ. ದುಬೈ ಪ್ರವಾಸೋದ್ಯಮ ಇಲಾಖೆಯು ದುಬೈ ವಿಮಾನ ನಿಲ್ದಾಣ ಮತ್ತು ಎಮಿರೇಟ್ಸ್ ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಸ್ಥಾಪಿಸಿದೆ.
ದುಬೈಗೊಂದು ಹೊಸ ಬಾಗಿಲು:
ಐದು ಎಲ್ಇಡಿಗಳು 360 ಡಿಗ್ರಿ ಪ್ರದರ್ಶನ ಅನುಭವವನ್ನು ನೀಡಲಿವೆ. ಪ್ರತಿಯೊಂದರಲ್ಲೂ ಸಾಮಾಜಿಕ ಮಾಧ್ಯಮದಲ್ಲಿನ ಚಿತ್ರಗಳು, ದೃಶ್ಯಗಳನ್ನು ಮತ್ತು ಪೋಸ್ಟ್ ಗಳನ್ನು ತೋರಿಸಲ್ಪಡುತ್ತವೆ. ಇದರ ಕೆಳಗಡೆ 55 ಇಂಚಿನ ಏಳು ಒಎಲ್ಇಡಿ ಪರದೆಗಳು ಮತ್ತು 22 ಇಂಚಿನ ಟಚ್ ಸ್ಕ್ರೀನ್ ಇವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಬಯಸಿದಂತಹವುಗಳನ್ನು ಆಯ್ಕೆ ಮಾಡಬಹುದು. ಇದು ಎಮಿರೇಟ್‌ನ ಎಲ್ಲಾ ಪ್ರಮುಖ ಆಕರ್ಷಣೆಗಳು, ಮನರಂಜನಾ ಕೇಂದ್ರಗಳು, ನಕ್ಷೆಗಳು ಮತ್ತು ಸಮಯವನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ. ನಿಮ್ಮ ಸಮಯಾವಧಿಗಳು ಮತ್ತು ಹಿತಾಸಕ್ತಿಗಳ ಪ್ರಕಾರ ನಿಮ್ಮ ಪ್ರಯಾಣವನ್ನು ದುಬೈ ಯಾತ್ರೆಗೆ ಯೋಜನೆ ರೂಪಿಸಲು ಸಹಕಾರ ನೀಡಲಿದೆ.
ಈ ವಿವರಣೆಯನ್ನು ಎಂಟು ಭಾಷೆಗಳಲ್ಲಿ ತಯಾರಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ಬಯಸುವವರಿಗೆ ಇನ್ಸ್ಟಾಲೇಶನ್ ಮೂಲಕ ನೋಂದಾಯಿಸಿದ್ದಲ್ಲಿ ಈ-ಮೇಲ್ ಮೂಲಕ ಸಚಿತ್ರ ವಿವರಗಳನ್ನು ನೀಡಲಾಗುವುದು. ಈ ಮೂಲಕ ನೋಂದಾಯಿಸಿಕೊಳ್ಳುವವರು ಮಾಸಿಕ ಲಕ್ಕಿ ಡ್ರಾ ಸ್ಕೀಮ್‌ನಲ್ಲಿ ಭಾಗವಹಿಸಿ ದುಬೈ ಉಚಿತ ಸಂದರ್ಶನ ಭಾಗ್ಯ ಲಭಿಸಲಿದೆ.
ಇದು ಟ್ರಾನ್ಸಿಟ್ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ
ಕಳೆದ ವರ್ಷ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸುಮಾರು ಒಂಬತ್ತು ಕೋಟಿ ಜನರು ಪ್ರಯಾಣಿಸಿದ್ದಾರೆ. ಭಾರತ, ಸೌದಿ ಅರೇಬಿಯಾ, ಯುಕೆಯಿಂದ ಅತಿ ಹೆಚ್ಚು ಪ್ರವಾಸಿಗರು ದುಬೈ ಯಾತ್ರೆಯನ್ನು ಮೆಚ್ಚಿಕೊಂಡಿದ್ದಾರೆ. ಟ್ರಾನ್ಸಿಟ್ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದೆ.
ಹೊಸ ವೀಸಾ ಕಾನೂನಿನ ಪ್ರಕಾರ, ಮೊದಲ 48 ಗಂಟೆಗಳ ಟ್ರಾನ್ಸಿಟ್ ವೀಸಾ ಉಚಿತವಾಗಿ ಲಭಿಸುವುದರ. ಮೂಲಕ ಹೆಚ್ಚು ಪ್ರಯಾಣಿಕರ ನಿರೀಕ್ಷೆಯಿದೆ. ವಿಮಾನ ನಿಲ್ದಾಣದಲ್ಲಿನ ಡಿಜಿಟಲ್ ಸಿಸ್ಟಮ್ ಟ್ರಾನ್ಸಿಟ್ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಒದಗಿಸಲು ಮತ್ತು ಎರಡು ದಿನಗಳ ಟ್ರಿಪ್ ಅನ್ನು ನಿಖರವಾಗಿ ಯೋಜಿಸಲು ಬಹಳ ಉಪಯುಕ್ತವಾಗಿದೆ.
ಪ್ರಯಾಣಿಕರಿಗೆ ದುಬೈಯನ್ನು ವಿಶ್ರಾಂತಿ ಮತ್ತು ಮನರಂಜನಾ ತಾಣವಾಗಿ ಮಾರ್ಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ದುಬೈ ಪ್ರವಾಸೋದ್ಯಮದ ಕಾರ್ಯದರ್ಶಿ ಇಸಾಮ್ ಕಾಸಿಮ್ ಹೇಳಿದ್ದಾರೆ. ಸಂದರ್ಶಕರ ಹಿತಾಸಕ್ತಿ ಮತ್ತು ಬಜೆಟ್‌ಗೆ ಅನುಗುಣವಾಗಿ ಎಲ್ಲವೂ ದುಬೈನಲ್ಲಿ ಇದೆ ಎನ್ನುವ ಬಗ್ಗೆ ಸಂದರ್ಶಕರಿಗೆ ತಿಳಿಸುವುದು ಮತ್ತು ದುಬೈ ಪ್ರವಾಸವನ್ನು ಉತ್ತೇಜಿಸುವುದು ಡಿಜಿಟಲ್ ಅನುಸ್ಥಾಪನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.