janadhvani

Kannada Online News Paper

ಇಹ್ಸಾನೋತ್ಸವ ಗ್ರ್ಯಾಂಡ್ ಅಸೆಂಬ್ಲೇಜ್- ಐತಿಹಾಸಿಕ ಸಮಾಪ್ತಿ

'ಸುಶಿಕ್ಷಿತ ಸಮಾಜಕ್ಕೆ ಸುಸಂಸ್ಕೃತ ಮಕ್ಕಳು' ಎಂಬ ಘೋಷ ವಾಕ್ಯದಲ್ಲಿ ಹತ್ತು ಜಿಲ್ಲೆಗಳ 61 ಮದ್ರಸಗಳ ನಾಲ್ಕುಸಾವಿರಕ್ಕೂ ಮಿಕ್ಕ ಪ್ರತಿಭೆಗಳ ನಡುವೆ ನಡೆದ ಪ್ರತಿಭಾಗೋಷ್ಟಿ

ಕೊಪ್ಪಳ ; ಆಧ್ಯಾತ್ಮಿಕತೆ ಹಾಗೂ ಅರಿವು ಸಮೂಹವೊಂದರ ಸರ್ವತೋಮುಖ ಪ್ರಗತಿಗೆ ಅನಿವಾರ್ಯವಾಗಿದ್ದು, ಇವುಗಳ ಕೊರತೆಯು ಸಮೂಹವನ್ನು ವಿನಾಶದತ್ತ ಕೊಂಡೊಯ್ಯುತ್ತದೆ. ಈ ನಿಟ್ಟಿನಲ್ಲಿ ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣ ನೀಡುವಲ್ಲಿ ಇಹ್ಸಾನ್ ಕರ್ನಾಟಕ’ವು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ. ಹಂಝ ಸಖಾಫಿ ಹೇಳಿದರು.ಅವರು ಜ.19, 20 ದಿನಾಂಕಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಇಹ್ಸಾನೋತ್ಸವ-25 ಗ್ರ್ಯಾಂಡ್ ಅಸೆಂಬ್ಲೇಜ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡುತ್ತಿದ್ದರು.ಇಹ್ಸಾನ್ ಕರ್ನಾಟಕ ಅಧ್ಯಕ್ಷ ಹಫೀಳ್ ಸ‌ಅದಿ ಕೊಳಕೇರಿ ಸಭಾಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು, ಶಿಕ್ಷಣ ವಂಚಿತ ಉತ್ತರದ ಜನತೆಗೆ ಶಿಕ್ಷಣ ನೀಡುವ ಇಹ್ಸಾನ್ ನ ಕಾರ್ಯಾಚರಣೆಯು ಮೆಚ್ಚಬೇಕಾದದ್ದೇ ಎಂದರು.ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ವಖ್ಫ್ ಬೋರ್ಡ್ ಮಾಜಿ ರಾಜ್ಯಾಧ್ಯಕ್ಷ ಶಾಫಿ ಸ‌ಅದಿ ಬೆಂಗಳೂರು ಮಾತನಾಡಿ, ಹದಿನಾಲ್ಕು ವರ್ಷಗಳಲ್ಲಿ ಇಹ್ಸಾನ್ ಕ್ರಾಂತಿಕಾರಕ ಬದಲಾವಣೆ ಮಾಡುತ್ತಿದ್ದು, ಸಾಧಿಸಿದ್ದಕ್ಕಿಂತಲೂ ಇನ್ನೂ ಸಾಧಿಸಬೇಕಾದ ನಮ್ಮ ಮುಂದಿದ್ದು, ಸಾರ್ವತ್ರಿಕ ಸಾರ್ಥಕತೆಯ ಫಲ ಅನುಭವಿಸಲು ಎಲ್ಲರು ಜತೆಯಾಗೋಣ ಎಂದರು. ಸಂಘ ಕುಟುಂಬದ ಸೆಂಟ್ರಲ್ ಪ್ಲಾನಿಂಗ್ ಬೋರ್ಡ್ ಚೇರ್ಮೇನ್ ಪಿ.ಪಿ ಅಹ್ಮದ್ ಸಖಾಫಿ ಯವರು ಸಾಂಘಿಕ ಸಂದೇಶ ನೀಡಿ, ಜಂಇಯ್ಯತುಲ್ ಉಲಮಾ ಸಹಿತ, ಸಂಘಕುಟುಂಬದ ಬೆಂಬಲವು ಇಹ್ಸಾನಿಗಿದೆ ಎಂದರು. ಈ ಸಂದರ್ಭದಲ್ಲಿ ಇಹ್ಸಾನ್ ಕರ್ನಾಟಕ ಡೆವೆಲಪ್ಮೆಂಟ್‌ ಸಮಿತಿಗೆ ರೂಪು ನೀಡಲಾಯಿತು.‘ಸುಶಿಕ್ಷಿತ ಸಮಾಜಕ್ಕೆ ಸುಸಂಸ್ಕೃತ ಮಕ್ಕಳು’ ಎಂಬ ಘೋಷ ವಾಕ್ಯದಲ್ಲಿ ಹತ್ತು ಜಿಲ್ಲೆಗಳ 61 ಮದ್ರಸಗಳ ನಾಲ್ಕುಸಾವಿರಕ್ಕೂ ಮಿಕ್ಕ ಪ್ರತಿಭೆಗಳ ನಡುವೆ ನಡೆದ ಪ್ರತಿಭಾಗೋಷ್ಟಿಯಲ್ಲಿ ದಾವಣಗೆರೆ ಜಿಲ್ಲೆಯು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೊಪ್ಪಳ ಜಿಲ್ಲೆಯು ರನ್ನರ್ ಅಪ್ ಗೆ ತೃಪ್ತಿಪಟ್ಟಿತು. ಸಾಮಾಜಿಕ ಕ್ಷೇತ್ರದಲ್ಲಿ ಅಹರ್ನಿಶಿ ಸೇವೆ ಮಾಡುವವರಿಗೆ ‘ಇಹ್ಸಾನ್ ಯೂಜೆನ್-25’ ಅವಾರ್ಡ್ ನೀಡುವುದಾಗಿ ಘೋಷಿಸಲಾಯಿತು. ಇಹ್ಸಾನೋತ್ಸವ- 26 ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು, ದಾವಣಗೆರೆ ಜಿಲ್ಲಾ ನಾಯಕರಿಗೆ ಧ್ವಜ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಎಸ್.ಎಂ.ಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಈಲ್ ತಂಙಳ್ ಉಜಿರೆ, ಸಯ್ಯಿದ್ ಅಬೂಬಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ, ಕುಷ್ಟಗಿ ಮಾಜಿ ಶಾಸಕ ಹಸನ್ ದೋಟಿಯಾಲ್, ಅಖ್ತರ್ ಅನ್ಸಾರಿ, ಕೊಪ್ಪಳ ಮುನ್ಸಿಪಲ್ ಚೇರ್ಮೇನ್ ಅಮ್ಜದ್ ಪಟೇಲ್, ರಾಜ್ಯ ಬಾರ್ ಕೌನ್ಸಿಲ್ ಹಾಗೂ ವಖ್ಫ್ ಸದಸ್ಯ ಅಡ್ವಕೇಟ್ ಆಸಿಫ್ ಅಲಿ ಶೇಖ್, ವಖ್ಫ್ ಬೋರ್ಡ್ ಕೊಪ್ಪಳ ಜಿಲ್ಲಾಧ್ಯಕ್ಷ ಅಡ್ವಕೇಟ್ ಪೀರಾ ಹುಸೇನ್ ಹೊಸಳ್ಳಿ, ಬಳ್ಳಾರಿ ಜಿಲ್ಲಾ ವಖ್ಫ್ ಬೋರ್ಡ್ ಹಾಗೂ ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಮಾಯೂನ್ ಖಾನ್, ಕರ್ನಾಟಕ ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲಾಧ್ಯಕ್ಷ ಎಂ ಕಾಟನ್ ಭಾಷಾ, ಎಸ್ಸೆಸ್ಸೆಎಫ್ ಕೊಪ್ಪಳ ಜಿಲ್ಲಾಧ್ಯಕ್ಷ ಎಸ್ಸೆಸ್ಸೆಎಫ್ ಕೊಪ್ಪಳ ಜಿಲ್ಲಾಧ್ಯಕ್ಷ ಅಮೀರ್ ಖಾನ್ ಗಂಗಾವತಿ, ಖಾಝಿ ಮುಹಮ್ಮದ್ ಗುಲಾಂ ನೂರಿ ಬೂದುಗುಂಪ, ಅಶ್ರಫ್ ಸ‌ಅದಿ ಮಲ್ಲೂರು, ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ, ಯಾಕೂಬ್ ಹೊಸನಗರ, ಅಬ್ದುರ್ರಹ್ಮಾನ್ ತೀರ್ಥಹಳ್ಳಿ, ಹುಸೇನ್ ಹಾಜಿ ಸಾಬ್ ತುಂಗಭದ್ರಾ, ಎಂ.ಡಿಎಸ್ ಮುಲ್ಲಾ, ಬಶೀರ್ ಕಾಕಾ ಗಂಗಾವತಿ, ಕೆ.ಎಚ್ ಇಸ್ಮಾಈಲ್ ಸ‌ಅದಿ ಕಿನ್ಯ, ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ನವಾಝ್ ಸಖಾಫಿ ಅಡ್ಯಾರ್, ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಶ್ರಫ್ ಸಖಾಫಿ ಮೂಡಡ್ಕ, ಇಹ್ಸಾನ್ ವ್ಯವಸ್ಥಾಪಕ ಅನ್ವರ್ ಅಸ್‌ಅದಿ, ಅಶ್ರಫ್ ಕಿನಾರ, ಇಕ್ಬಾಲ್ ಕಾಜೂರು, ಸಲೀಂ ಕನ್ಯಾಡಿ, ಅಬ್ದುರ್ರಹ್ಮಾನ್ ಮೊಗರ್ಪಣೆ, ಕೆಸಿಎಫ್ ಸೌದಿ ಅರೇಬಿಯಾ ನಾಯಕರಾದ ಬಶೀರ್ ತಲಪಾಡಿ, ಇಸ್ಮಾಈಲ್ ಕನ್ನಂಗಾರ್, ಹಂಝ ಮೈಂದಾಲ, ತಮೀಮ್ ಕೂಳೂರು ಮುಂತಾದವರು ಉಪಸ್ಥಿತರಿದ್ದರು.ಇಹ್ಸಾನೋತ್ಸವ ಜನರಲ್ ಕನ್ವೀನರ್ ಡಾಕ್ಟರ್ ಹಾಜಿ ಶೇಖ್ ಬಾವ ಮಂಗಳೂರು ಸ್ವಾಗತಿಸಿ, ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಧನ್ಯವಾದವಿತ್ತರು.

error: Content is protected !! Not allowed copy content from janadhvani.com