janadhvani

Kannada Online News Paper

ಬ್ಯಾರಿ ಮಹಾಸಭಾ ನಿಯೋಗದಿಂದ ಅಲ್ಪ ಸಂಖ್ಯಾತ ಆಯೋಗ ಆಯುಕ್ತರ ಭೇಟಿ

ಪ್ರತಿ ತಾಲೂಕು ಕೇಂದ್ರಗಳಲ್ಲಿ ಐನೂರು ಜನ ಜಮಾವಣೆ ಸಾಮರ್ಥ್ಯದ ಸುಸಜ್ಜಿತ ಬ್ಯಾರಿ ಜನಾಂಗ ಭವನ ನಿರ್ಮಾಣ ವನ್ನು ಮಾಡಲು ಮನವಿ ಮಾಡಲಾಯಿತು.

ಮಂಗಳೂರು: ಅಖಿಲ ಭಾರತ ಬ್ಯಾರಿ ಮಹಾಸಭಾ ನಿಯೋಗದಿಂದ ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ಅಲ್ಪ ಸಂಖ್ಯಾತ ಆಯೋಗದ ಆಯುಕ್ತರಾದ ನಿಸಾರ್ ಅಹಮದ್ ರವರನ್ನು ಭೇಟಿ ಮಾಡಿ ಕರ್ನಾಟಕದಾದ್ಯಂತ ವಾಸಿಸುತ್ತಿರುವ ಸುಮಾರು ಇಪ್ಪತ್ತೈದು ಲಕ್ಷದಷ್ಟು ಜನ ಸಂಖ್ಯೆಯಲ್ಲಿರುವ ಅತಿಸೂಕ್ಷ್ಮ ಅಲ್ಪ ಸಂಖ್ಯಾತ ಮೂಲನಿವಾಸಿ ಬ್ಯಾರಿ ಭಾಷಿತ ಜನಾಂಗದ ಜನರಿಗೆ ವಿವಾಹ ಮತ್ತು ಇನ್ನಿತರ ಕಾರ್ಯಗಳಿಗೆ ಪ್ರಯೋಜನವಾಗುವಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಐನೂರು ಜನ ಜಮಾವಣೆ ಸಾಮರ್ಥ್ಯದ ಸುಸಜ್ಜಿತ ಬ್ಯಾರಿ ಜನಾಂಗ ಭವನ ನಿರ್ಮಾಣ ವನ್ನು ಮಾಡಲು ಮನವಿ ಮಾಡಲಾಯಿತು.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ, ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಯ ಜಂಟಿ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲು ಶಿಫಾರಸ್ಸು ಮಾಡಲು ಅಪೇಕ್ಷಿಸಲಾಯಿತು. ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದ ಈ ನಿಯೋಗದಲ್ಲಿ ಮೊಹಮ್ಮದ್ ಹನೀಫ್.ಯು, ಅಬ್ದುಲ್ ಜಲೀಲ್ ( ಅದ್ದು ) ಕೃಷ್ಣಾಪುರ, ಇಬ್ರಾಹಿಮ್ ಬಾವ ಬಜಾಲ್ ಮತ್ತು ಅಬ್ದುಲ್ ಖಾದರ್ ಇಡ್ಮ ರವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com