janadhvani

Kannada Online News Paper

ಅಲ್-ಖುಬಾ, ಮೀಕಾತ್ ಮಸೀದಿಗಳ ಪರಿಸರದಲ್ಲಿ ಪಾರ್ಕಿಂಗ್ ಶುಲ್ಕ- ಜನವರಿ 20 ರಿಂದ ಜಾರಿ

ಎರಡೂ ಮಸೀದಿಗಳಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ.

ರಿಯಾದ್: ಮದೀನಾದ ಪ್ರಮುಖ ಯಾತ್ರಾ ಕೇಂದ್ರಗಳಾದ ಮಸ್ಜಿದ್ ಅಲ್-ಖುಬಾ ಮತ್ತು ದುಲ್ ಹುಲೈಫಾ ಮೀಕಾತ್ ಮಸೀದಿಗಳ ನವೀಕರಣ ಮತ್ತು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ಇದರ ಭಾಗವಾಗಿ ಜನವರಿ 20 ರಿಂದ ಇಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲಾಗುವುದು ಎಂದು ಇಸ್ಲಾಮಿಕ್ ಸಚಿವಾಲಯ ತಿಳಿಸಿದೆ.

ಸಣ್ಣ ವಾಹನಗಳಿಗೆ 2 ರಿಯಾಲ್ ಮತ್ತು ಬಸ್‌ಗಳಿಗೆ 10 ರಿಯಾಲ್ ದರವಿದೆ. ಮೊದಲ 15 ನಿಮಿಷಗಳು ಉಚಿತವಾಗಿರುತ್ತದೆ. ಯೋಜನೆಯ ಭಾಗವಾಗಿ ಸ್ಮಾರ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಎರಡೂ ಮಸೀದಿಗಳಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಹವಾನಿಯಂತ್ರಣಗಳು, ಕುಡಿಯುವ ನೀರಿನ ಸೌಲಭ್ಯಗಳು, ವಿಶಾಲವಾದ ಪ್ರಾರ್ಥನಾ ಸೌಲಭ್ಯಗಳು ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ.

ಮದೀನಾ ಅಭಿವೃದ್ಧಿ ಪ್ರಾಧಿಕಾರವು ಕುಬಾ ಮಸೀದಿಯ ನಿರ್ವಹಣೆ ಮತ್ತು ಇತರ ಕೆಲಸಗಳ ಜವಾಬ್ದಾರಿಯನ್ನು ಹೊಂದಿತ್ತು. ಮಸ್ಜಿದುನ್ನಬವಿಯ ನಂತರ ಮದೀನಾದಲ್ಲಿ ಖುಬಾ ದೊಡ್ಡ ಮಸೀದಿಯಾಗಿದೆ. ಪ್ರತಿ ದಿನ ಸಾವಿರಾರು ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಾರೆ.

error: Content is protected !! Not allowed copy content from janadhvani.com