ಬೆಳ್ತಂಗಡಿ : ಮದನೀಸ್ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ 2025 ಜನವರಿ 14 ಮಂಗಳವಾರದಂದು ಬೆಳಿಗ್ಗೆ 9:15ಕ್ಕೆ ತುಕ೯ಳಿಕೆ ಮಿಫ್ತಾಉಲ್ ಉಲೂಮ್ ಮದ್ರಸದಲ್ಲಿ ತಾಜುಲ್ ಉಲಮಾ, ಭಾವ ಉಸ್ತಾದ್, ಬೈತಾರ್ ಉಸ್ತಾದ್, ಸೈದಾಲಿ ಉಸ್ತಾದ್, ತಾಯಕ್ಕೋಡು ಉಸ್ತಾದ್ ಮತ್ತು ಇನ್ನಿತರ ನಮ್ಮನಗಲಿದ ನೇತಾರರ ಅನುಸ್ಮರಣೆ, ಉಲಮಾ ಸಂಗಮದ ಪ್ರಚಾರ ಸಭೆ ಹಾಗೂ ಫಿಖ್ಹ್ ಸೆಮಿನಾರ್ ಜರಗಲಿದೆ.
ಕಾರ್ಯಕ್ರಮದಲ್ಲಿ ಮದನೀಸ್ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಪ್ರಾರ್ಥನೆ ನಡೆಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಮದನೀಸ್ ತಾಲೂಕು ಅದ್ಯಕ್ಷರಾದ ಖಲಂದರ್ ಮದನಿ ಕಲ್ಲೇರಿ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರು ನಿರ್ವಹಿಸಲಿದ್ದು, ತಾಲೂಕು ಮದನೀಸ್ ಕಾರ್ಯದರ್ಶಿ ಬಶೀರ್ ಮದನಿ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ.
ಅನುಸ್ಮರಣೆ ಭಾಷಣ ಮತ್ತು ದುವಾ ಮಜ್ಲಿಸ್ ಗೆ ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ಮದನಿ ನೇತ್ರತ್ವ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ಮೂಳೂರು ಉಪ ಖಾಝಿ ಅಬ್ದುರ್ರಹ್ಮಾನ್ ಮದನಿ ನಿಖಾಹ್ ಹಾಗೂ ಫಸ್ಕ್ ವಿಷಯದಲ್ಲಿ ತರಗತಿ ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಮದನಿ ತೀರ್ಥಹಳ್ಳಿ, ಅಸೈಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮದನಿ ಮನ್ಶರ್, ಅಸಯ್ಯಿದ್ ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಮದನಿ ಕಾಜೂರು, ಬದ್ರುದ್ದೀನ್ ತಂಙಳ್ ಮದನಿ ಪೊಮ್ಮಾಜೆ, ಅಬ್ದುಸಲಾಂ ತಂಙಳ್ ಮದನಿ ಪುಂಜಾಲ್ ಕಟ್ಟೆ, ಹಂಝ ತಂಙಳ್ ಝುಹ್ರಿ ಕಪಾ೯ಡಿ, ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹಿಂ ಮದನಿ ಕುಂಡಡ್ಕ, ಖಾಸಿಂ ಮದನಿ ಕರಾಯ, ಹೈದರ್ ಮದನಿ ಕರಾಯ, ಅಬುಸ್ವಾಲಿಹ್ ಮದನಿ ಕಿಲ್ಲೂರು, ಮುಹಮ್ಮದ್ ಸಅದಿ ವಳವೂರು, ಕೆಮ್ಮಾರ ಮುದರ್ರಿಸ್ ಆದಂ ಅಹ್ಸನಿ ತುಕ೯ಳಿಕೆ, ಉಪ್ಪಿನಂಗಡಿ ಕುಪ್ಪೆಟಿ ಮೂರುಗೋಳಿ ಬೆಳ್ತಂಗಡಿ ಮಡಂತ್ಯಾರ್ ರೇಂಜ್( SJM) ನಾಯಕರು, SJU ನೇತಾರರು, ಬೆಳ್ತಂಗಡಿ ತಾಲೂಕು ಮದನಿಗಳು, ಸಖಾಫಿಗಳು, ಸಅದಿಗಳು, ಲತೀಫಿಗಳು, ಉಲಮಾ ನೇತಾರರು ಭಾಗವಹಿಸಲಿದ್ದಾರೆ.
ಆದ್ದರಿಂದ ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಸುನ್ನಿ ಸಂಘ ಕುಟುಂಬದ ಎಲ್ಲಾ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಮದನೀಸ್ ತಾಲೂಕು ಸಮಿತಿ ಕಾರ್ಯದರ್ಶಿಯಾದ ಅಬ್ದುಲ್ ಬಶೀರ್ ಮದನಿ ಜೋಗಿಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಮುಕು
10.01.2025