ಬಳ್ಳಾರಿ : ಝೀಲ್ ಫೌಂಡೇಶನ್ ಪ್ರತೀ ವರ್ಷ ನಡೆಸಿಕೊಂಡು ಬರುವ ವಿದ್ಯಾರ್ಥಿಗಳ ಎಲೆಗೆನ್ಸ್ ಕಲಾಕಾರ್ಯಕ್ರಮಕ್ಕೆ ಇಂದು ಸಾಯಂಕಾಲ ನಗರದ ಖಾಸಿಂ ವಲೀ ಝಿಯಾರತ್ ಮೂಲಕ ಅದ್ದೂರಿ ಚಾಲನೆದೊರೆಯಲಿದೆ.
ಬಳಿಕ 5ಗಂಟೆಗೆ ಧ್ವಜಾರೋಹಣ ಮೂಲಕ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಔಸಾಫ್ ಸಅದಿ ಅಲ್ ಮಲ್ ಹರಿ ಸ್ವಾಗತಿಸಲಿದ್ದಾರೆ.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಬಳ್ಳಾರಿ ಜಿಲ್ಲಾಧ್ಯಕ್ಷರು ಆಸಿಫ್ ರಿಫಾಯಿ ಉದ್ಘಾಟಿಸುವಾಗ ಝೀಲ್ ಫೌಂಡೇಶನ್ ಕೊಶಾಧಿಕಾರಿ ಸಿದ್ದೀಕ್ ಸಖಾಫಿ ಅಲ್ ಮಲ್ಹರಿ ಪ್ರಾಸ್ಥಾವಿಕ ಮಾತುಗಳನ್ನಾಡಲಿದ್ದಾರೆ.
ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಝೀಲ್ ಫೌಂಡೇಶನ್ ಅಧ್ಯಕ್ಷರು ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಿರುಗುಪ್ಪ MLA ಬಿಎಂ ನಾಗರಾಜ್ ಉದ್ಘಾಟಿಸಲಿದ್ದಾರೆ.
ಬಳ್ಳಾರಿ ಜಿಲ್ಲಾ ವಕ್ಫ್ ಅಧ್ಯಕ್ಷರು ಉಮಯಾನ್ ಖಾನ್ ,ಸಿರುಗುಪ್ಪ ಮಾಜಿ ಕೌನ್ಸಿಲರ್ ಶಫಿ ಅಹ್ಮದ್ ,ವಕ್ಫ್ ಜಿಲ್ಲಾ ಸದಸ್ಯರು ಮೀರ್ ಹುಸೈನ್ ,ತೆಕ್ಕಲಕೋಟೆ ಟೌನ್ ಪಂಚಾಯಿತ್ ಅಧ್ಯಕ್ಷರು ಆನಂದ್,ಎ.ಪಿ.ಎಂ.ಸಿ ಮಾಜಿ ಸದಸ್ಯರು ನರೇಂದ್ರ ಸಿಂಹ ತೆಕ್ಕಲಕೋಟೆ ,
SAS ಚಾರಿಟೇಬಲ್ ಅಧ್ಯಕ್ಷರು ಚಿಟ್ಕಿ ಹಸೈನ್ ,ಹುಸೈನ್ ಪೀರ್ ರಾವಿಹಾಲ್,ತೆಕ್ಕಲಕೋಟೆ ಪಟ್ಟಣ ಪಂಚಾಯಿತ್ ಸ್ಥಾಯಿ ಅಧ್ಯಕ್ಷರು ಎಚ್.ಮಾಬುಸಾಬ್ ,3ನೇ ವಾರ್ಡ್ ಕೌನ್ಸಿಲರ್ ಮಾಬುಸಾಬ್ ,5ನೇ ವಾರ್ಡ್ ಕೌನ್ಸಿಲರ್ ನಸ್ರುದ್ದೀನ್ ,ಜಮಾಲ್ ಮದನಿ ಸಿಂಗಾಪುರ, ಇಲ್ಯಾಸ್ ಅಫಿಯಾನ್ ಗಂಗಾವತಿ,ಬದ್ರುದ್ದೀನ್ ಸಖಾಫಿ ,ಮಸ್ತೂರ್ ಹಝ್ರತ್,ಮುಹಮ್ಮದ್ ಸಖಾಫಿ ಅಲ್ ಮಳ್’ಹರಿ ,ಫಾರುಖ್ ಹಿಮಮಿ ಇಟಗಿ ಇನ್ನಿತರ ಹಲವಾರು ಸಮಾಜಿಕ ಧಾರ್ಮಿಕ ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
100ರಷ್ಟು ವಿದ್ಯಾರ್ಥಿಗಳು 50ರಷ್ಟು ಸ್ಪರ್ಧೆಗಳಲ್ಲಾಗಿ ವೈವಿಧ್ಯಮಯ ಯೋಜನೆಗಳೊಂದಿಗೆ ಎರಡು ದಿನಗಳಕಾಲ ಕಲಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ಪ್ರಯುಕ್ತ ನಾಳೆ ಸಾಯಂಕಾಲ ಡ್ರಗ್ಸ್ ವಿರುದ್ಧ ತೆಕ್ಕಿಲ್ ಕೋಟೆಯಿಂದ ಮಣಿಯರ ಮಸೀದಿಯವರೆಗೆ ಬೃಹತ್ ಜನಜಾಗೃತಿ ರ್ಯಾಲಿ ನಡೆಯಲಿದೆ.
ತ್ವಯ್ಯಿಬ್ ಸಖಾಫಿ
ಆಲ್ ಮಲ್ ಹರಿ ಮುಖ್ಯ ಭಾಷಣ ಮಾಡಲಿರುವರು.