ಬೆಂಗಳೂರು: ಕಾಸರಗೋಡು ಜಿಲ್ಲೆಯ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾ ಕೇಂದ್ರವಾದ ಮುಹಿಮ್ಮಾತುಲ್ ಮುಸ್ಲಿಮೀನ್ ಎಜ್ಯುಕೇಶನಲ್ ಸೆಂಟರ್ ಸಮ್ಮೇಳನ ಪ್ರಚಾರ ಹಾಗೂ ಸಯ್ಯದ್ ತ್ವಾಹಿರುಲ್ ಅಹ್ದಳ್ ತಂಙಳ್ ಅನುಸ್ಮರಣೆ ಹಾಗೂ ಇಶಲ್ ನೈಟ್ ಇಂದು(ಶುಕ್ರವಾರ) ರಾತ್ರಿ 09:00ಗಂಟೆಗೆ ಸರಿಯಾಗಿ ಹಲಸೂರು ಮರ್ಕಝುಲ್ ಹುದಾ ಮಸೀದಿಯಲ್ಲಿ ನಡೆಯಲಿದೆ.
ಮುಹಿಮ್ಮಾತ್ ಕೇಂದ್ರ ಕಮೀಟಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸ್ವಲಾಹುದ್ದೀನ್ ರಿಫಾಯಿ ತಿರುನಲ್ವೇಲಿ ತಮಿಳುನಾಡು ಉದ್ಘಾಟನೆ ಮಾಡಲಿದ್ದಾರೆ.
ಮೂಸ ಸಖಾಫಿ ಕಳತ್ತೂರ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಇಶಲ್ ನೈಟ್ ಗೆ ಅಶ್ರಫ್ ಪೆರುಮುಗಂ ಹಾಗೂ ಸಂಗಡಿಗರು ನೇತೃತ್ವ ವಹಿಸಲಿದ್ದಾರೆ. ಅಬ್ದುರ್ರಹ್ಮಾನ್ ಅಹ್ಸನಿ, ಬಶೀರ್ ಸಅದಿ ಪೀಣ್ಯ, ಅಬ್ದುಲ್ ನಾಸಿರ್ ಅಹ್ಸನಿ, ಜಾಫರ್ ನೂರಾನಿ, ಅನಸ್ ಸಿಧ್ಧೀಖಿ, ಅಬ್ಬಾಸ್ ನಿಝಾಮಿ, ಲತೀಫ್ ನಈಮಿ, ಹಕೀಂ ಆರ್ ಟಿ ನಗರ್, ಅಬ್ದುಲ್ ರಹಿಮಾನ್ ಹಾಜಿ, ಹಲಸೂರು, ಅಬ್ದುಲ್ ಖಾದರ್ ಹಾಜಿ ಬಳ್ಳೂರ್ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ. ಸಮಾರೋಪ ಪ್ರಾರ್ಥನೆಗೆ ಸಯ್ಯದ್ ಶೌಕತಲೀ ಹಿಮಮಿ ಸಖಾಫಿ ನೇತೃತ್ವ ನೀಡಲಿದ್ದಾರೆ