janadhvani

Kannada Online News Paper

ವಿವಾದಾತ್ಮಕ ಇಸ್ರೇಲ್ ನಕ್ಷೆ- ಸೌದಿ ವಿದೇಶಾಂಗ ಸಚಿವಾಲಯ ಖಂಡನೆ

ಇಸ್ರೇಲ್ ನಡೆಸುತ್ತಿರುವ ಉಲ್ಲಂಘನೆಗಳನ್ನು ತಡೆಗಟ್ಟುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಸೌದಿ ಅರೇಬಿಯಾವು ಕರೆ ನೀಡಿದೆ.

ರಿಯಾದ್ :ಜೋರ್ಡಾನ್, ಲೆಬನಾನ್, ಸಿರಿಯಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಭಾಗಗಳನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ಪೋಸ್ಟ್ ಮಾಡಿದ ನಕ್ಷೆಯ ವಿರುದ್ಧ ಸೌದಿ ಅರೇಬಿಯಾ. ಪ್ರದೇಶಗಳು ವಿಶಾಲ ಇಸ್ರೇಲ್‌ನ ಭಾಗವಾಗಿದೆ ಎಂದು ಹೇಳಿಕೊಂಡಿರುವ ಇಸ್ರೇಲಿ ನಡೆಯನ್ನು ಸೌದಿ ವಿದೇಶಾಂಗ ಸಚಿವಾಲಯವು ಖಂಡಿಸಿದೆ.

ಆಕ್ರಮಣವನ್ನು ಶಾಶ್ವತಗೊಳಿಸುವುದು, ಇತರ ದೇಶಗಳ ಸಾರ್ವಭೌಮತ್ವದ ಮೇಲೆ ನಿರಂತರ ದಾಳಿ ನಡೆಸುವುದು ಮತ್ತು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳನ್ನು ಉಲ್ಲಂಘಿಸುವುದನ್ನು ಇಸ್ರೇಲ್ ರೂಢಿಸಿಕೊಂಡಿದೆ ಎಂದು ಸೌದಿ ಆರೋಪಿಸಿದೆ. ಇಂತಹ ಭಯೋತ್ಪಾದನಾ ಕೃತ್ಯಗಳು ಆಕ್ರಮಿತ ಅಧಿಕಾರಿಗಳ ಉದ್ದೇಶವನ್ನು ಸಾಬೀತುಪಡಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಈ ಸಂದರ್ಭದಲ್ಲಿ, ಈ ವಲಯದ ದೇಶಗಳು ಮತ್ತು ಜನರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಉಲ್ಲಂಘನೆಗಳನ್ನು ತಡೆಗಟ್ಟುವಲ್ಲಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಸೌದಿ ಅರೇಬಿಯಾವು ಕರೆ ನೀಡಿದೆ.

ಹೇಳಿಕೆಯಲ್ಲಿ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳಿದೆ. ಮತ್ತು ಈ ಪ್ರದೇಶದಲ್ಲಿ ನ್ಯಾಯಯುತ ಮತ್ತು ಸಮಗ್ರ ಶಾಂತಿಯನ್ನು ಸಾಧಿಸುವ ಗುರಿಯನ್ನು ಇಸ್ರೇಲ್ ದುರ್ಬಲಗೊಳಿಸುತ್ತಿದೆ ಎಂದು ಹೇಳಿದೆ.

error: Content is protected !! Not allowed copy content from janadhvani.com