ದೋಹಾ: ಪ್ಯಾಲೆಸ್ತೀನ್, ಜೋರ್ಡಾನ್, ಲೆಬನಾನ್ ಮತ್ತು ಸಿರಿಯಾದ ಕೆಲವು ಭಾಗಗಳನ್ನು ಒಳಪಡಿಸಿ ಇಸ್ರೇಲ್ ಬಿಡುಗಡೆ ಮಾಡಿರುವ ವಿವಾದಾತ್ಮಕ ನಕ್ಷೆಯನ್ನು ಖತರ್ ತೀವ್ರವಾಗಿ ಖಂಡಿಸಿದೆ. ಇಸ್ರೇಲ್ ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯನ್ನು ಮಾಡುತ್ತಿದೆ ಎಂದು ಕತಾರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಗಾಜಾದಲ್ಲಿ ಇಸ್ರೇಲಿ ಆಕ್ರಮಣವನ್ನು ಮುಂದುವರೆಸುತ್ತಿರುವ ಸಂದರ್ಭದಲ್ಲಿ, ಈ ವಿವಾದವು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ನಾಶಪಡಿಸುತ್ತದೆ ಎಂದು ಕತಾರ್ ಗಮನಸೆಳೆದಿದೆ. ಅಂತರರಾಷ್ಟ್ರೀಯ ನಿರ್ಣಯಗಳು ಮತ್ತು ಕಾನೂನನ್ನು ಉಲ್ಲಂಘಿಸಿ ಅರಬ್ ಪ್ರದೇಶಗಳಲ್ಲಿ ಇಸ್ರೇಲ್ನ ಆಕ್ರಮಣ ಪ್ರಯತ್ನಗಳನ್ನು ತಡೆಯುವ ಹೊಣೆಗಾರಿಕೆಯನ್ನು ತೋರಿಸಲು ಅಂತರರಾಷ್ಟ್ರೀಯ ಸಮುದಾಯ ಮುಂದೆ ಬರಬೇಕೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒತ್ತಾಯಿಸಿದೆ.