janadhvani

Kannada Online News Paper

ಹಾಫಿಳ್ ಮಳಲಿ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಗಮ

ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಹಾಫಿಳ್ ಮಳಲಿ ಉಸ್ತಾದರ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ಮುಹ್ಯಿಸ್ಸುನ್ನ ದರ್ಸ್ ಇದರ ಪೂರ್ವ ವಿದ್ಯಾರ್ಥಿ ಸಂಘಟನೆ ವಾರ್ಷಿಕ ಮಹಾ ಸಭೆ ಹಾಗೂ ಆಧ್ಯಯನ ತರಬೇತಿ ನಿನ್ನೆ ಜಮಾ‌ಅತ್ ಮುಖಂಡರ ನೇತೃತ್ವದಲ್ಲಿ ನಡೆಯಿತು.

ಜಮಾ‌ಅತ್ ಮುಖಂಡರಾದ ಶರೀಫ್ ಉಕ್ಕುಡ, ಮುನೀರ್ ದರ್ಬೆ, ಫಿಶ್ ಶರೀಫ್ ಉಕ್ಕುಡ, ರಫೀಕ್ ಅಲಂಗಾರು, ಅಬೂಬಕ್ಕರ್ ಟೆಲಿಫೋನ್,ಅಬ್ದುಲ್ ಹಮೀದ್ ಉಕ್ಕುಡ, ಹೈದರ್ ಉಕ್ಕುಡ ಭಾಗವಹಿಸಿದ ಪ್ರಸ್ತುತ ಕಾರ್ಯಕ್ರಮಕ್ಕೆ ಸ್ಥಳೀಯ ಮದ್ರಸಾಧ್ಯಾಪಕರಾದ ಸಫ್‌ವಾನ್ ಸ‌ಅದಿ ಅಲ್‌ಅಫ್ಳಲಿ ಕೋಟ್ಯಾಡಿ ಉಸ್ತಾದರು ದುಆದ ಮೂಲಕ ಚಾಲನೆ ಕೊಟ್ಟರು.
ಪಳ್ಳಿ ದರ್ಸಿನ ಅನಿವಾರ್ಯತೆ ಕುರಿತು ಮಾತನಾಡುತ್ತಾ ಧಾರ್ಮಿಕ ಶಿಕ್ಷಣದ ಮೂಲಕ ಮಾತ್ರ ನೈತಿಕತೆಯನ್ನು ಹೊಂದಲು ಸಾಧ್ಯವೆಂದು ಹೇಳುತ್ತಾ ಸದರ್ ಉಸ್ತಾದ್ ಯಾಸಿನ್ ಸ‌ಅದಿ ವಿಟ್ಲ ಉದ್ಘಾಟನೆಗೈದರು.

ಆತ್ಮೀಯ ಗುರುವರ್ಯರಾದ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್-ಹಿಕಮಿ ಅಲ್-ಅರ್ಶದಿ ಮಳಲಿ ಮುದರ್ರಿಸ್ ಉಕ್ಕುಡ ಅವರು, ಸಮಕಾಲಿನ ಜಗತ್ತಿನಲ್ಲಿ ವಿತಂಡವಾದಗಳ ಮೂಲಕ ಈಮಾನ್ ಕಬಳಿಸಲು ಬರುವ ಮೊಂಡುವಾದಿಗಳ ಕುತುಂತ್ರವನ್ನು ಸವಿಸ್ತಾರವಾಗಿ ವಿವರಿಸುತ್ತಾ ಅದ್ಯಯನ ತರಗತಿಯನ್ನು ನಡೆಸಿಕೊಟ್ಟರು.

ಆನಂತರ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಫ್‌ವಾನ್ ಜೌಹರಿ ಅಲ್ ಹಿಕಮಿ ಅರಳ ಮುದರ್ರಿಸ್ ಬೈತಡ್ಕ ಮಾತನಾಡಿ ಸಕ್ರಿಯವಾಗಿ ಕಾರ್ಯಾಚರಣೆಗೈಯ್ಯುವಂತೆ ಪ್ರಚೋದಿಸುವ ಸಂದೇಶ ಭಾಷಣವನ್ನು ಮಾಡಿದರು,
ಅಧ್ಯಕ್ಷ ಭಾಷಣದಲ್ಲಿ ಇಸ್ಮಾಯಿಲ್ ಸಖಾಫಿ ಅಲ್-ಹಿಕಮಿ ಒಗ್ಗಟ್ಟಿನ ಕಾರ್ಯಾಚರಣೆಯಿಂದ ಮಾತ್ರ ಯಶಸ್ವಿಯಾಗಿ ಮುನ್ನುಗ್ಗಲು ಸಾಧ್ಯ ಎಂದರೆ ಆಧ್ಯಾತ್ಮಿಕ ಶಕ್ತಿ ಇದ್ದರೆ ಮಾತ್ರ ಯಾವುದೇ ಕಾರ್ಯಾಚರಣೆಯಲ್ಲಿ ಫಲವತ್ತಾದ ಫಲಿತಾಂಶ ಸಿಗುವುದು ಎಂದು ನೂತನ ಉಪಾಧ್ಯಕ್ಷ ಇರ್ಫಾನ್ ಸಖಾಫಿ ಅಲ್-ಹಿಕಮಿ ವೇಣೂರು ಮುದರ್ರಿಸ್ ಸುಳ್ಯ ಸಂದೇಶ ಭಾಷಣದಲ್ಲಿ ನೆನಪಿಸಿದರು.
ಕೊನೆಯಲ್ಲಿ ಸುಲ್ತಾನ್ ಹಾಶಿಮಿ ಅಳಕೆ ಧನ್ಯವಾದ ಹೇಳುವ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

ಹಾಫಿಳ್ ಮಳಲಿ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆ

ನೂತನ ಸಾರಥ್ಯ 2025-2026

ಗೌರವಾಧ್ಯಕ್ಷರು: ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್-ಹಿಕಮಿ ಅಲ್-ಅರ್ಶದಿ ಮಳಲಿ

ಅಧ್ಯಕ್ಷರು:- ಇಸ್ಮಾಯಿಲ್ ಸಖಾಫಿ ಅಲ್-ಹಿಕಮಿ ಮಳಲಿ

ಉಪಾಧ್ಯಕ್ಷರು:- ಇರ್ಫಾನ್ ಸಖಾಫಿ ಅಲ್-ಹಿಕಮಿ ವೇಣೂರು

ಕಾರ್ಯಾಧ್ಯಕ್ಷರು:- ಸಯ್ಯಿದ್ ಶಹೀರ್ ಹಾಶಿಮಿ ಅಲ್-ಹಿಕಮಿ ಪುತ್ತಿಗೆ

ಪ್ರಧಾನ ಕಾರ್ಯದರ್ಶಿ:- ಸಫ್‌ವಾನ್ ಜೌಹರಿ ಅಲ್-ಹಿಕಮಿ ಅರಳ

ಜೊತೆ ಕಾರ್ಯದರ್ಶಿ:- ಅಹ್ಮದ್ ಮನ್ಸೂರ್ ಸಖಾಫಿ ಕಬಕ
ಸುಲ್ತಾನ್ ಹಾಶಿಮಿ ಅಳಕೆ

ಕೋಶಾಧಿಕಾರಿ:-ಮಿಖ್ದಾದ್ ಹಾಶಿಮಿ ಪಾಟ್ರಕೋಡಿ

ಐಡ್ಯೋಲಜಿ ವಿಭಾಗ:- ಝಾಹಿದ್ ಫಾಳಿಲಿ ಅಲ್-ಹಿಕಮಿ ಅಡ್ಯಾರ್ ಪದವು,ರಿಝ್ವಾನ್ ಸಖಾಫಿ ಅಲ್-ಹಿಕಮಿ ಬೋಂದೆಲ್,ಸಫ್‌ವಾನ್ ಮು‌ಈನಿ ಮೆಲ್ಕರ್,ಯಾಸಿರ್ ಉಕ್ಕುಡ, ಸಿನಾನ್ ತೆಕ್ಕಾರ್.

ದ‌ಅ್‌ವಾ ವಿಭಾಗ:ಇರ್ಫಾನ್ ಸಖಾಫಿ ಅಲ್-ಹಿಕಮಿ ಅಲ್-ಅರ್ಶದಿ ವೇಣೂರು,ಮುರ್ಶಿದ್ ಹಾಶಿಮಿ ಅಲ್-ಹಿಕಮಿ ಅಲ್-ಅರ್ಶದಿ ಲಾಡಿ,ಶಫೀಖ್ ಹಾಶಿಮಿ ಕಾವಳಕಟ್ಟೆ,ಅನ್ಸಾರ್ ಸಖಾಫಿ ಅಲ್-ಹಿಕಮಿ ಮೂಡುಗೋಪಾಡಿ.

ಮೀಡಿಯಾ ವಿಭಾಗ: ಮುಹಮ್ಮದ್ ಅಲ್ ಹಿಕಮಿ ಮಳಲಿ,ಅನೀಸ್ ಹಾಶಿಮಿ ಅಡ್ಯಾರ್ ಪದವು, ಮಹ್ಮೂದ್ ಮಂಜೇಶ್ವರ, ಇರ್ಫಾನ್ ಲಾಡಿ, ಆಸಿಫ್ ಗಂಡಿಬಾಗಿಲು.

ಇವೆಂಟ್ ಮ್ಯಾನೇಜ್ಮೆಂಟ್ ವಿಭಾಗ:- ನಿಝಾರ್ ಸಾಜ,ಸಿ.ಯಂ ಸಿದ್ದೀಖ್ ಹಾಶಿಮಿ, ಫಹದ್ ಫಾಳಿಲಿ ಬಂಗ್ಲಗುಡ್ಡೆ,ಸಲಾಂ ಹನೀಫಿ ಕಸ್ಕೆಬೈಲ್.

ಪಬ್ಲಿಶಿಂಗ್ ವಿಭಾಗ:- ಸುಲ್ತಾನ್ ಹಾಶಿಮಿ ಅಳಕೆ,ರಿಳ್ವಾನ್ ಫಾಳಿಲಿ ಅಳಿಕೆ,ಮುಸ್ತಫಾ ಕನ್ಯಾರಕೋಡಿ,ಮುಹಮ್ಮದ್ ಪಕ್ಷಿಕೆರೆ.

ಅಕಾಡೆಮಿಕ್ ಕೋಡಿನೇಷನ್ ವಿಭಾಗ:-ಕಬೀರ್ ಹನೀಫಿ ಇಡ್ಯ, ಅಹ್ಮದ್ ಮನ್ಸೂರ್ ಸಖಾಫಿ ಕಬಕ,ಯೂನುಸ್ ಬೆಳಂದೂರು.

ಪಿ.ಆರ್.ಒ:- ಹಾಫಿಳ್ ಝುಬೈರ್ ನಾವೂರು.

ಖಾತೆ ಉಸ್ತುವಾರಿ:- ಶಾಹುಲ್ ಫಾಳಿಲಿ, ನಿಝಾಂ ಹಾಶಿಮಿ ಬಜ್ಪೆ.