ಕುವೈತ್ ಸಿಟಿ: ಖಾಸಗಿ ಕಂಪನಿಗಳಿಗೆ ಮಿತಿಗಿಂತ ಹೆಚ್ಚಿನ ಜನರನ್ನು ಕರೆತರಲು ಅನುಮತಿಸಲಾಗಿದೆ. ಹೆಚ್ಚುವರಿಯಾಗಿ 250 ದಿನಾರ್‌ನಂತೆ ಅಧಿಕ ಪೀಸ್ ನೀಡಿದರೆ ನಿಶ್ಚಿತ ಕ್ವಾಟಾಗಿಂತ ಹೆಚ್ಚುವರಿ ಜನರನ್ನು ಕರೆತರಬಹುದು. ಭಾರತೀಯರು ಸೇರಿದಂತೆ, ಸ್ವದೇಶೀಕರಣದಿಂದಾಗಿ ಉದ್ಯೋಗ ನಷ್ಟ ಹೊಂದಿರುವವರಿಗೆ ಕುವೈತ್‌ನ ಈ ನಿರ್ಧಾರ ಸಹಾಯವಾಗಲಿದೆ.
ಪ್ರಸ್ತುತ, ಶೇ. 75 ರಷ್ಟು ದೇಶೀಯ ಮಾರುಕಟ್ಟೆಯಿಂದ ಮತ್ತು ವಿದೇಶದಿಂದ 25 ಶೇ. ಕಾರ್ಮಿಕರನ್ನು ಕರೆತರಬೇಕು ಎಂಬುದು ಅಲ್ಲಿನ ಕಾನೂನಾಗಿದೆ.ದೇಶೀಯ ಮಾರುಕಟ್ಟೆಯ ಸ್ಥಿರತೆಯ ಖಾತರಿಗಾಗಿ ಈ ನಿರ್ಧಾರವನ್ನು ಕೆಲವು ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.
ಇದರಿಂದಾಗಿ ಕುವೈತ್ ನಲ್ಲಿ ವಿದೇಶಿಗರಿಗೆ ಉತ್ತಮ ಉದ್ಯೋಗಗಳನ್ನು ಪಡೆಯುವುದು ಸುಲಭವಾಗುತ್ತಿದೆ.
25% ಕ್ಕಿಂತ ಹೆಚ್ಚಿನ ಕೆಲಸದ ಪರವಾನಗಿಯಲ್ಲಿ 50% ರಷ್ಟು ಕೆಲಸಗಾರರನ್ನು ವಿದೇಶದಿಂದ ನೇರವಾಗಿ ತರಲು ಹೊಸ ನಿರ್ಧಾರದಿಂದ ಸಾಧ್ಯವಾಗಲಿದೆ.ಪ್ರತಿ ಹೆಚ್ಚುವರಿ ಕೆಲಸದ ಪರವಾನಗಿಗೆ, 250 ದಿನಾರ್ ಹೆಚ್ಚುವರಿ ಶುಲ್ಕವಾಗಿ ನೀಡುವ ಅಗತ್ಯವಿದೆ.