janadhvani

Kannada Online News Paper

ಎಸ್ ಎಸ್ ಎಫ್ ಜಯನಗರ ಡಿವಿಷನ್ ಸಾಹಿತ್ಯೋತ್ಸವ: ಯಾರಬ್ ನಗರ ಶಾಖೆ ಪ್ರಥಮ

ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಜಯನಗರ ಡಿವಿಷನ್ ಸಾಹಿತ್ಯೋತ್ಸವ ಸ‌ಅದಿಯ ಫೌಂಡೇಶನ್ ಯಾರಬ್ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ಸ್ಥಳೀಯ ಮುದರ್ರಿಸ್ ಅಬ್ದುಲ್ ಲತೀಫ್ ಸ‌ಅದಿ ಕೊಟ್ಟಿಲ ದ್ವಜಾರೋಹಣಗೈದರು.ಸಲೀಮ್ ನ‌ಈಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಾಹಿತ್ಯೋತ್ಸವದ ಜಿಲ್ಲಾಧ್ಯಕ್ಷರಾದ ಫಾರೂಖ್ ಅಮಾನಿ ಉದ್ಘಾಟಿಸಿದರು .

ಎಸ್ ಎಸ್ ಎಸ್ ಎಫ್ ಬೆಂಗಳೂರು ಜಿಲ್ಲಾಧ್ಯಕ್ಷರಾದ ಲತೀಫ್ ನ‌ಈಮಿ ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಯನಗರ ಡಿವಿಷನ್‌ಗೆ ಒಳಪಟ್ಟ ವಿವಿಧ ಶಾಖೆಗಳ ಇನ್ನೂರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಪ್ರಥಮ ಸ್ಥಾನವನ್ನು ಯಾರಬ್ ನಗರ ಶಾಖೆ ತನ್ನದಾಗಿಸಿಕೊಂಡರೆ ಬನ್ನೇರುಘಟ್ಟ ಶಾಖೆ ಮತ್ತು ಅರೆಕೆರೆ ಶಾಖೆ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆಯಿತು. ಅರಕೆರೆ ಶಾಖೆಯ ಮಹಮ್ಮದ್ ಅಲಿ ಸ್ಟಾರ್ ಆಫ್ ದಿ ಫೆಸ್ಟ್ ಗೌರವ ಹಾಗೂ ಬನ್ನೇರುಘಟ್ಟ ಶಾಖೆಯ ಅಹ್ಮದ್ ಕಬೀರ್ ಪೆನ್ ಆಫ್ ಫೆಸ್ಟ್ ಗೌರವಕ್ಕೆ ಪಾತ್ರರಾದರು.

ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಅನ್ಸಾರ್ ಪಾಶ ನಾಯಕರಾದ ಶಿಹಾಬ್ ಮಡಿವಾಳ ಸಿದ್ದೀಖ್ ಕಾಜೂರು ಸಂಶುದ್ದೀನ್ ಅಝ್ಹರಿ ಶಂಸುಕ್ಕ ಕಬಾಬ್ ಮಹಲ್ ಇಸ್ಮಾಯಿಲ್ ಸ‌ಅದಿ ಕಿನ್ಯ ಜಮಾಲ್ ಸಖಾಫಿ ಜಮಾಲ್ ಸಖಾಫಿ ಉಸ್ತಾದ್ ರವೂಫ್ ಜಯನಗರ ಸಹಿತ ಸಂಘ ಕುಟುಂಬದ ಪ್ರಮುಖರು ಭಾಗಹಿಸಿದ್ದರು ಜಯನಗರ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಶ್ತಾಕ್ ಅಹಮದ್ ಸ್ವಾಗತಿಸಿ ಜಯನಗರ ಡಿವಿಷನ್ ಸಾಹಿತ್ಯೋತ್ಸವದ ಅಧ್ಯಕ್ಷರಾದ ಫಝಲುರ್ರಹ್ಮಾನ್ ಧನ್ಯವಾದವಿತ್ತರು.

error: Content is protected !! Not allowed copy content from janadhvani.com