ಕೇರಳೀಯ ಪ್ರಯಾಣಿಕರನ್ನು ಪ್ರತ್ಯೇಕ ಗಮನಿಸುವಂತೆ ಸೌದಿ ಆರೋಗ್ಯ ಸಚಿವಾಲಯ

ರಿಯಾದ್: ಕೇರಳದಿಂದ ಸೌದಿ ಅರೇಬಿಯಾಕ್ಕೆ ಬರುವ ಪ್ರಯಾಣಿಕರನ್ನು ಪ್ರತ್ಯೇಕ ಗಮನಿಸುವಂತೆ ಸೌದಿ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ. ನಿಪ್ಹಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಎನ್ನಲಾಗಿದೆ.

ಕೇರಳೀಯರು ವಾಸವಿರುವ ವಸತಿ ಪ್ರದೇಶದ ಸಮೀಪದಲ್ಲಿರುವ ಆಸ್ಪತ್ರೆಗಳಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವಾಲಯ ತಿಳಿಸಿದೆ. ಸಂಶಯಾಸ್ಪದ ಸಂದರ್ಭಗಳಲ್ಲಿ ಶಂಕಿತರನ್ನು ಆಸ್ಪತ್ರೆಗೆ ಸೇರಿಸಿ 14 ದಿನಗಳ ಕಾಲ ನಿಗಾ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ಈ ಹಿಂದೆ, ಆರೋಗ್ಯ ಸಚಿವಾಲಯವು ಕೇರಳದ ಪ್ರಯಾಣಿಕರು ಆಹಾರ ಪದಾರ್ಥ ತರುವುದನ್ನು ನಿಷೇಧಿಸಿತ್ತು. ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಬಗ್ಗೆ ನಿರೀಕ್ಷಣೆ ಮಾಡುತ್ತಿದೆ ಎಂದು ಹೇಳಿದೆ.

One thought on “ಕೇರಳೀಯ ಪ್ರಯಾಣಿಕರನ್ನು ಪ್ರತ್ಯೇಕ ಗಮನಿಸುವಂತೆ ಸೌದಿ ಆರೋಗ್ಯ ಸಚಿವಾಲಯ

Leave a Reply

Your email address will not be published. Required fields are marked *

error: Content is protected !!