ಅಬುಧಾಬಿ: ಕಾರ್ಮಿಕರ ಮಧ್ಯಾಹ್ನ ವಿಶ್ರಾಂತಿಯನ್ನು ಕಡ್ಡಾಯವಾಗಿಯೂ ನೀಡಲು ಮತ್ತು ಬಿಸಿಲಿನ ತಾಪದಲ್ಲಿ ಸುರಕ್ಷತೆಯನ್ನು ಖಾತರಿಪಡಿಸಲು ಅಬುಧಾಬಿ ನಗರ ಪುರಸಭೆಯು ಪ್ರಚಾರ ಅಭಿಯಾನವನ್ನು ಆರಂಭಿಸಿದೆ. 15 ರಿಂದ ಜಾರಿಗೆ ಬರುವ ಮೂರು ತಿಂಗಳ ಅವಧಿಯ ಮಧ್ಯಾಹ್ನ ವಿಶ್ರಾಂತಿ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದು ಪುರಸಭೆಯು ತಿಳಿಸಿದೆ.
ಮುನ್ಸಿಪಲ್ ನೌಕರರು ಕಾರ್ಮಿಕರ ಸುರಕ್ಷತೆ ಮತ್ತು ನಿರ್ಮಾಣ ಸ್ಥಳಗಳು, ಕೆಲಸ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಹೆಚ್ಚಿನ ತಾಪಮಾನ ಮತ್ತು ಆರ್ದ್ರ ವಾತಾವರಣವು ಹೊರಗೆ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ಉಂಟು ಮಾಡುವ ಅಪಾಯಗಳು ಮತ್ತು ಸುರಕ್ಷತೆಯ ಕುರಿತು ಸಹ ಜಾಗೃತಿ ಕಾರ್ಯಕ್ರಮದಲ್ಲಿ ನೆನಪಿಸಲಾಗುತ್ತದೆ.
ಅಬುಧಾಬಿ ನಗರದಲ್ಲಿನ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಪ್ರತಿಕೂಲ ವಾತಾವರಣದಲ್ಲಿ ನೌಕರರ ಸಮರ್ಥನೀಯ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ನಗರ ಯೋಜನಾ ಮತ್ತು ಅಬುಧಾಬಿ ನಗರ ಮುನಿಸಿಪಾಲಿಟಿಯ ಮುನಿಸಿಪಲ್ ವ್ಯವಹಾರಗಳ ಇಲಾಖೆಯ ಸಾರಥ್ಯದಲ್ಲಿ ಈ ಕ್ಯಾಂಪೇನ್ ನಡೆಯಲಿದೆ.
ಪುರಸಭೆಯ ಪರಿಸರ ಆರೋಗ್ಯ ವಿಭಾಗದ ಅಡಿಯಲ್ಲಿ ಎಲ್ಲಾ ನಿರ್ಮಾಣ ಸೈಟ್ಗಳಲ್ಲಿ ಉತ್ತಮ ಉದ್ಯೋಗ ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಯುಎಇ ಮಾನವ ಸಂಪನ್ಮೂಲ ಸಚಿವಾಲಯವು ಪ್ರಕಟಿಸಿದ ಮಧ್ಯಾಹ್ನ ವಿಶ್ರಾಂತಿ ಕಾನೂನಿನ ಭಾಗವಾಗಿ ಪುರಸಭೆಯ ಜಾಗೃತಿ ಅಭಿಯಾನವನ್ನು ಜಾರಿಗೊಳಿಸಲಾಗಿದೆ. ಯುಎಇ ಎಮಿರೇಟ್ ಜೂನ್ 15 ರಿಂದ ಸೆಪ್ಟಂಬರ್ 15 ರವರೆಗೆ ಮಧ್ಯಾಹ್ನ 12:30 ರಿಂದ ಅಪರಾಹ್ನ 3 ಗಂಟೆ ವರೆಗೆ ಮಧ್ಯಾಹ್ನ ವಿಶ್ರಾಂತಿ ಕಾನೂನು ಯುಎಇ ಯಲ್ಲಿ ಜಾರಿಗೆ ಬರಲಿದೆ.