janadhvani

Kannada Online News Paper

SSF ಮಾರ್ತಹಳ್ಳಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಸಮಾಪ್ತಿ

ಬೆಂಗಳೂರು:- ದೇಶದೆಲ್ಲೆಡೆ ಎಸ್ಸೆಸ್ಸೆಫ್ ಕಾರ್ಯಕರ್ತರ ಮೂರನೇ ಹಬ್ಬವಾದ ಸಾಹಿತ್ಯೋತ್ಸವದ ಸಡಗರ ಸಂಭ್ರಮದಲ್ಲಿದ್ದಾರೆ. ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಮಾರ್ತಹಳ್ಳಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕೆ.ಎಂ.ಪಿ ಚರ್ಚ್ ಶಾಲೆ ಎಚ್ ಎ ಎಲ್ ನಲ್ಲಿ 27/10/2024 ಭಾನುವಾರ ಬಹಳ ಯಶಸ್ವಿಯಾಗಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಐದು ಯೂನಿಟ್ ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, ನಾಲ್ಕು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು. ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಸ್ವಾಗತ ಸಮೀತಿ ಚೆಯರ್ಮಾನ್ ಉಮ್ಮರ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ಜರುಗಿತು, ಪ್ರಸ್ತುತ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯೋತ್ಸವದ ಕನ್ವೀನರ್ ಅಲ್ತಾಫ್ ಅಲಿ ಉದ್ಘಾಟಿಸಿದರು,

ಜಿಲ್ಲಾ ಚೆಯರ್ಮಾನ್ ಫಾರೂಕ್ ಅಮಾನಿ ಮುಖ್ಯ ಭಾಷಣ ಮಾಡಿದರು, ಡಿವಿಷನ್ ಅಧ್ಯಕ್ಷರಾದ ಸಫ್ವಾನ್ ಹನೀಫಿ ಅಶ್ಅರೀ ಪ್ರಾಸ್ತಾವಿಕ ಭಾಷಣ ಮಾಡಿದರು. ಡಿವಿಷನ್ ಮಟ್ಟದಲ್ಲಿ ಚಾಂಪಿಯನ್ ಶಿಪ್ ಪಡೆದ ಎಚ್.ಎ.ಎಲ್ ಯೂನಿಟ್ ಗೆ ರಾಜ್ಯ ನಾಯಕರಾದ ಅಬೂಬಕ್ಕರ್ ಅಹ್ಸನಿ, ಬೆಂಗಳೂರು ಜಿಲ್ಲಾ ನೇತಾರರಾದ ಅಖ್ತರ್ ಹುಸೈನ್, ಖಲೀಲ್, ಮಜೀದ್, ಫಿರ್ಧೌಸ್, ಹಾಗೂ ಇನ್ನಿತರ ನಾಯಕರು ಸೇರಿ ಚಾಂಪಿಯನ್ ಟ್ರೋಫಿ ನೀಡಿದರು, ಸುಹೈಳ್ ಖುತುಬಿ ಸ್ವಾಗತಿಸಿ, ಸ್ವಾಗತ ಸಮೀತಿ ಕನ್ವೀನರ್ ನಿಸಾಮುದ್ದೀನ್ ಸಖಾಫಿ ಧನ್ಯವಾದ ಸಲ್ಲಿಸಿದರು ಎಂದು ಡಿವಿಷನ್ ಪ್ರದಾನ ಕಾರ್ಯದರ್ಶಿ ನೌಶಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.