ಅಬುಧಾಬಿ: ಕೆ.ಸಿ.ಎಫ್. (ಕರ್ನಾಟಕ ಕಲ್ಚರಲ್ ಫೌಂಡೇಶನ್) ಅಬುಧಾಬಿ ಝೋನ್ ವತಿಯಿಂದ ಆಯೋಜಿಸಲ್ಪಡುವ ವಿಶ್ವ ಪ್ರವಾದಿ ಪೈಗಂಬರ್ ಸ.ಅ.) ರ 1499ನೇ ಮೀಲಾದ್ ಸಮಾವೇಶ ಇದೇ ಬರುವ ಸೆಪ್ಟೆಂಬರ್ 8, 2024 ನೇ ಬಾನುವಾರ ಸಂಜೆ 7:00 ಗಂಟೆಗೆ ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಸಲಾಗುತ್ತಿದೆ.
“ಮುತ್ತು ನಬಿ ಮನುಕುಲದ ಮಾರ್ಗದರ್ಶಿ” ಎಂಬ ಶೀರ್ಷಿಕೆಯೊಂದಿಗೆ ನಡೆಯುವ ಪ್ರಸ್ತುತ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇರಳದ ಪ್ರಮುಖ ಸಯ್ಯದ್ ಹಾಗೂ ವಿದ್ವಾಂಸರಾದ “ಸಯ್ಯದ್ ಅಬುರಹ್ಮಾನ್ ಆಟ್ಟೀರಿ ತಂಗಳ್” ಆಗಮಿಸಲಿದ್ದಾರೆ. ICF ಮತ್ತು KCF ನ ನಾಯಕರೂ ಸಾವಿರಾರು ಕಾರ್ಯಕರ್ತರೂ ಭಾಗವಹಿಸಲಿದ್ದಾರೆ.
ಆಗಸ್ಟ್ 03-08-2024 ರಂದು ನಡೆದ ಸಭೆಯಲ್ಲಿ ಚೇರ್ಮ್ಯಾನ್: ಅಬ್ದುಲ್ ರಝಾಕ್ ಹಾಜಿ ಜೆಲ್ಲಿ ಹಾಗೂ ಕನ್ವಿನರ್:ಉಮ್ಮರ್ ಈಶ್ವರಮಂಗಲ ಒಳಗೊಂಡ ಮೀಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಕಳೆದ ಒಂದು ದಶಕಳಿಂದ ಕನ್ನಡದ ಮಣ್ಣಿನಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗು ಸೇವಾ ಕ್ಷೇತ್ರದಲ್ಲಿ ಶ್ಲಾಘನೀಯ ಕ್ರಾಂತಿಯನ್ನು ಮಾಡುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟ ಒಕ್ಕೂಟವಾದ KCF, ಇವತ್ತು ಗಲ್ಫ್ ರಾಷ್ಟ್ರಗಳನ್ನೂ ದಾಟಿ ವಿವಿಧ ದೇಶಗಳನ್ನೂ, ಖಂಡಗಳನ್ನೂ ತಲುಪಿದ್ದು, ಈ ವರ್ಷದ ಸದಸ್ಯತ್ವ ಅಭಿಯಾನವನ್ನೂ ಯಶಸ್ವಿಯಾಗಿ ನಡೆಸಬೇಕೆಂದು ನಾಯಕರು ಕರೆಕೊಟ್ಟರು.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು