janadhvani

Kannada Online News Paper

ಸಂಕಷ್ಟದಲ್ಲಿ ಗುಲ್ಬರ್ಗದ ಸೂರ್ಯಕಾಂತ್; ತಾಯ್ನಾಡಿಗೆ ತೆರಳಲು ಸಹಕರಿಸಿದ ಕೆಸಿಎಫ್

ರಿಯಾದ್ ದವಾದ್ಮಿಯಲ್ಲಿ ಆರು ವರ್ಷಗಳಿಂದ ಮನೆ ಡ್ರೈವರ್ ಕೆಲಸ ಮಾಡುತ್ತಿದ್ದ ಗುಲ್ಬರ್ಗದ ಮೂಲದ ಸೂರ್ಯಕಾಂತ್ ಎಂಬವರು ಚಿಕ್ಕ ಪುಟ್ಟ ವಿಷಯದಲ್ಲಿ ತನ್ನ ಸ್ಪೋನ್ಸರ್ (ಕಫೀಲ್) ಉರೂಬ್ ಮಾಡಿದ್ದು, ಊರಿಗೆ ಹೋಗಲು ಸಾಧ್ಯವಿಲ್ಲದೇ ಕೆಲಸವೂ ಇಲ್ಲದೆ ಸಂಕಷ್ಟ ದಲ್ಲಿ ಇದ್ದ ಸೂರ್ಯಕಾಂತ್ ಗೆ ಗುಲ್ಬರ್ಗದ ಯೂಸುಫ್ ರವರು ಒಂದೂವರೆ ತಿಂಗಳು ಊಟ ವಸತಿ ಕೊಟ್ಟು ಸಹಕರಿಸಿದರು.

ಯೂಸುಫ್ ರವರು ಕೆಸಿಎಫ್ ಕಾರ್ಯಕರ್ತ ರಾದ ಹಬೀಬ್ ರಹ್ಮಾನ್ ಅಡ್ಡೂರು ರವರನ್ನು ಸಂಪರ್ಕಿಸಿ ಊರಿಗೆ ಕಲಿಸಲು ಸಹಾಯ ಕೇಳಿದ ಕಾರಣ ಹುಸೈನ್ ಮುಖಾಂತರ ರ ಭಾರತೀಯ ರಾಯಭಾರ ಕಛೇರಿ ಸಂಪರ್ಕಿಸಿ ಊರಿಗೆ ತೆರಳಲು ಫೈನಲ್ ಎಕ್ಸಿಟ್ ದಾಖಲೆ ಎಲ್ಲಾ ರೆಡಿ ಮಾಡಿ ಸಹಕರಿಸಿದರು.

ಟಿಕೆಟ್ ಹಾಗೂ ಇನ್ನಿತರ ಹಣದ ವ್ಯವಸ್ಥೆಯು ಸೂರ್ಯಕಾಂತ್ ಅವರ ಅಣ್ಣ ಚಂದ್ರಕಾಂತ್ ಊರಿನಿಂದ ಕಲಿಸಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ತನ್ನ ಸಂಕಷ್ಟದಲ್ಲಿ ಸಹಕರಿಸಿದ ಕೆಸಿಎಫ್ ಸಂಘಟನೆಯ ಕಾರ್ಯವನ್ನು ಶ್ಲಾಂಘಿಸಿದರು.

error: Content is protected !! Not allowed copy content from janadhvani.com