janadhvani

Kannada Online News Paper

ಚಿಕ್ಕಮಗಳೂರು ಬಡಾ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆ

ಚಿಕ್ಕಮಗಳೂರು ಜೂನ್ 17 ಚಿಕ್ಕಮಗಳೂರು ಬಡಾ ಈದ್ಗಾ ಮೈದಾನದಲ್ಲಿ ಸುಮಾರು 15 ಸಾವಿರಕ್ಕೊ ಹೆಚ್ಚು ಮುಸ್ಲಿಂ ಬಾಂಧವರು ಬಕ್ರೀದ್ ಆಚರಣೆಯನ್ನು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರಾದ ಹೆಚ್. ಡಿ ತಮ್ಮಯ್ಯ ರವರು ಮಾತನಾಡಿ ಶುಭಾಶಯಗಳನ್ನು ಸಲ್ಲಿಸುತ್ತ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ರವರ ಆದರ್ಶಗಳನ್ನು ಪಾಲಿಸುವ ಮೂಲಕ ಬಕ್ರೀದ್ ಹಬ್ಬದಲ್ಲಿ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸಿ ಸುದೀರ್ಘವಾದ ಸಾರಾಂಶವನ್ನು ನೀಡಿದರು ನಂತರ ಭಾಗವಹಿಸಿದ್ದ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಮಾತನಾಡಿ ಜಿಲ್ಲೆಗೆ ಕೇವಲ ಒಂದು ವರ್ಷದ ಅವಧಿಯಲ್ಲಿ ಶಾಸಕರ ಶ್ರಮದಿಂದ ವಕ್ಫ್ ಆಸ್ತಿಗಳ ಜೀರ್ಣೋದ್ಧಾರಕ್ಕೆ 8 ಕೋಟಿಗೂ ಹೆಚ್ಚು ಅನುದಾನವನ್ನು ಸರ್ಕಾರದಿಂದ ಬಿಡುಗಡೆಯಾಗಿದೆ .

ಹೆಚ್ಚುವರಿಯಾಗಿ ಕ್ಷೇತ್ರದ ವಕ್ಫ್ ಸಂಸ್ಥೆಗಳ ಅಭಿವೃದ್ಧಿಗಾಗಿ 1.70 ಕೋಟಿ ಹಣವನ್ನು ಮಂಜೂರು ಮಾಡಿಸಲಾಗಿದೆ ಹಾಗು ಇನ್ನೂ ಹಲವಾರು ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನವನ್ನು ಒದಗಿಸಿಕೊಡುವ ವಿಶ್ವಾಸವಿದೆ ಎಂದು ಮಾನ್ಯ ಶಾಸಕರಿಗೆ ಮತ್ತು ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು ಹಾಗು ಜಿಲ್ಲಾಡಳಿತ ಪರವಾಗಿ ಆಗಮಿಸಿದ್ದ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಮೀನ ನಾಗರಾಜ್ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ! ವಿಕ್ರಂ ಅಮಟೆ ರವರು ನೆರೆದಿದ್ದ ಎಲ್ಲಾ ಮುಸ್ಲಿಂ ಬಾಂಧವರಿಗೆ ಶುಭಾಶಯವನ್ನು ಕೋರುತ್ತ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು ಇವರೊಂದಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರಾದ ಹಾಜಿ ಫೈರೋಜ್ ಅಹಮದ್ ರಜ್ವಿ, ಜಾಮಿಯ ಮಸೀದಿ ಅಧ್ಯಕ್ಷರಾದ ಮುದಸೀರ್ ಪಾಷಾ
ಹಾಫಿಜ್ ರಿಯಾಜ್ ಇನ್ನಿತರೆ ದಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com