ಮಂಗಳೂರಿನ ಕಂಕನಾಡಿ ಒಳ ರಸ್ತೆಯಲ್ಲಿರುವ ಮಸೀದಿಗೆ ತಾಗಿಕೊಂಡಿರುವ ಬಡಾವಣೆಯ ಸಾರ್ವಜನಿಕ ರಸ್ತೆಯ ಒಂದು ಭಾಗದಲ್ಲಿ ನಮಾಜ್ ನಿರ್ವಹಿಸಿದರು ಎನ್ನುವ ಕಾರಣಕ್ಕೆ ಸುಮಟೊ ಕೇಸು ದಾಖಲಿಸಿರುವುದು ಖಂಡನೀಯ.
ಕೇವಲ ಮೂರು ನಿಮಿಷದ ನಮಾಝಿನಿಂದ ಸಾರ್ವಜನಿಕರಿಗೆ ಯಾವುದೇ ತೊದರೆಯಾಗಿರುವುದಿಲ್ಲ. ಆದರೂ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ಹಾಕಿರುವುದು ಸುಮಟೊ ಕೇಸಿನ ದುರ್ಬಳಕೆ ಎತ್ತಿ ತೋರಿಸುತ್ತಿವೆ.
ಈ ಕುರಿತು ಸರಕಾರವು ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸುವಂತೆ SKSSF ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಮುಖ್ಯ ಮಂತ್ರಿಗೆ ಈ ಮೇಲ್ ಮೂಲಕ ಪತ್ರ ಬರೆದಿದ್ದಾರೆ.
ರಸ್ತೆಯಲ್ಲಿ ನಮಾಜ್ ನಿರ್ವಹಿಸುವುದಕ್ಕೆ ನಾವು ಪ್ರೋತ್ಸಾಹಿಸುವುದಿಲ್ಲ. ಆದರೆ ಕೇವಲ ಮೂರು ನಿಮಿಷದ ಪ್ರಾರ್ಥನೆಗೆ ಕೇಸು ದಾಖಲಿಸಿರುವ ವರದಿ ಕೇಳಿ ಗಾಬರಿಗೊಂಡಿದ್ದೇವೆ.
ಮಂಗಳೂರಿನ ನಗರದ ಪ್ರಮುಖ ರಸ್ತೆ, ಟ್ರಾಫಿಕ್ ಜಾಮ್ ಎಂದೆಲ್ಲಾ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ನೀಡಿ ರಾಜ್ಯದ ಜನರನ್ನು ಕೆರಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕೇಸು ದಾಖಲೆ ಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.
ಈ ಮಸೀದಿ ಇರುವುದು ಕಂಕನಾಡಿಯಿಂದ 100 ಮೀಟರ್ ಒಳಗಿನ ಬಡಾವಣೆಯಲ್ಲಿ.
ಅದರಲ್ಲೂ ಇಲ್ಲಿ ವಾಸವಾಗಿರುವುದು ಹೆಚ್ಚು ಮುಸ್ಲಿಮರೇ ಆಗಿರುತ್ತಾರೆ.
ಈ ಒಳ ರಸ್ತೆಯಲ್ಲಿ ಕೇವಲ 3ರಿಂದ 5 ನಿಮಿಷ ಮಾತ್ರ ನಮಾಜ್ ನಿರ್ವಹಿಸಲು ಉಪಯೋಗಿಸಿದ್ದಾರೆ. ಅದರಲ್ಲಿ ರಸ್ತೆಯ ಅರ್ಧ ಭಾಗ ತೆರೆದುಕೊಂಡಿತ್ತು.
ಯಾವುದೇ ಟ್ರಾಫಿಕ್ ಸಮಸ್ಯೆ ಉದ್ಭವಿಸಿಲ್ಲ.
ಮಂಗಳೂರಿನ ಪ್ರಮುಖ ರಸ್ತೆಯಲ್ಲೇ ಧಾರ್ಮಿಕ ಕಾರ್ಯ ನಡೆಸುವ ಹಲವು ಕಾರ್ಯಕ್ರಮಗಳಿವೆ.
ಕೇಸು ದಾಖಲಿಸುವುದಾದರೆ ಎಲ್ಲವನ್ನು ಪರಿಗಣಿಸಲಿ.
ತಕ್ಷಣ ಕೇಸನ್ನು ಹಿಂಪಡೆಯುವ ಮೂಲಕ ದ್ವಿಮುಖ ದೋರಣೆಗೆ ಕಡಿವಾಣ ಬೀಳಲಿ ಎಂದು ಪತ್ರದಲ್ಲಿ ತಿಳಿಸಿರುತ್ತಾರೆ.