ಪತ್ನಿಯರು ಪತಿಯ ಮೇಲೆ ಕೌಟುಂಬಿಕ ಹಿಂಸಾಚಾರ ಕುರಿತು ಸುಳ್ಳು ಪ್ರಕರಣ ದಾಖಲಿಸುವ ಪ್ರಕ್ರಿಯೆಗೆ ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ಮಹತ್ವದ ತೀರ್ಪು ಎಲ್ಲಾ ವರ್ಗದ ಸಾಮಾನ್ಯ ಜನರಿಗೆ ಹಾಗು ಮಾನವ ಹಕ್ಕುಗಳ ರಕ್ಷಣೆಗೆ.ನಾಂದಿಯಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ನ ಜಿಲ್ಲಾಧ್ಯಕ್ಷರಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಅಭಿಪ್ರಾಯಪಟ್ಟಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿ.
ಇನ್ನುಮುಂದೆ ಪತ್ನಿಯರು ಗಂಡನ ವಿರುದ್ಧ ಸುಳ್ಳು ಕೇಸ್ ಹಾಕುವಂತಿಲ್ಲ, ಗಂಡನ ವಿರುದ್ಧ ಕೇಸ್ ಹಾಕುವ ಮಹಿಳೆಯರಿಗೆ ಹೈಕೋರ್ಟ್ ನಿಂದ ನೀತಿ ಪಾಠಮತ್ತು ಪರಿಪಾಲನೆಗೆ ನಿರ್ದೇಶನ ನೀಡಿರುವುದು ಸಮಾಜಕ್ಕೆ ಮಾದರಿ ಎಂದು ತಿಳಿಸಿದ್ದಾರೆ.
ನಮ್ಮ ದೇಶವು ಉತ್ತಮ ಸಂವಿಧಾನವನ್ನು ಹೊಂದಿದೆ. ಅದರಂತೆ ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಬಲಿಷ್ಠವಾಗಿದೆ. ನಮ್ಮ ದೇಶದ ನ್ಯಾಯಾಂಗದ ಪ್ರಕಾರ 100 ಅಪರಾಧಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾದಿಗೆ ಶಿಕ್ಷೆ ಆಗಬಾರದು ಎಂಬುದಾಗಿದೆ. ಆ ನಿಟ್ಟಿನಲ್ಲಿ ಕೊಲಂಕುಷ ತನಿಖೆ ಮಾಡಿ ಶಿಕ್ಷೆ ವಿಧಿಸುವ ಕಾನೂನು ನಮ್ಮದಾಗಿದೆ.
ದೇಶದಲ್ಲಿ ಪತಿ ಪತ್ನಿಯರಿಗೆ ಸಂಬಂಧಿಸಿದಂತೆ ಹಲವು ಕೇಸ್ ಗಳು ಇನ್ನು ಕೂಡ ಹಾಗೆ ಉಳಿದುಕೊಂಡಿರುವುದನ್ನ ನಾವು ಗಮನಿಸಬಹುದು. ಪತಿಯ ವಿರುದ್ಧವಾಗಿ ಪತ್ನಿಯರು ಹಲವು ರೀತಿಯಲ್ಲಿ ದೂರು ನೀಡಬಹುದು. ಸದ್ಯ ಇದನ್ನ ಕೆಲವು ಮಹಿಳೆಯರು ದುರುಪಯೋಗ ಮಾಡಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಈಗ ಹೈಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಸ್ವಾಗತಾರ್ಹ.
ಹೆಚ್ಚಾಗಿ ಪತಿ ಪತ್ನಿಗಳ ನಡುವೆ ಭಿನ್ನಾಪ್ರಾಯ ಬಂದರೆ ಅದು ಕೋರ್ಟ್ ಮೆಟ್ಟಿಲೇರಿದರೆ ಪತಿಯ ಕುಟುಂಬದ ಮೇಲೆ ಸುಮ್ಮನೆ ಸುಳ್ಳು ಆರೋಪಗಳನ್ನು ಹೇರುವಂತಿಲ್ಲ ಎಂದು ನ್ಯಾಯ ಮೂರ್ತಿಗಳು ಹೇಳಿಕೆ ನೀಡಿದ್ದಾರೆ. ಅಂದರೆ ಪತಿಯ ಮೇಲಿನ ಕೋಪದಿಂದ ಪತ್ನಿಯರು ಪತಿ ಮತ್ತು ಆತನ ಕುಟುಂಬದ ವಿರುದ್ಧವಾಗಿ ಇಲ್ಲಸಲ್ಲದ ಆರೋಪಗಳನ್ನ ಮಾಡುವ ಸಾಧ್ಯತೆ ಇರುತ್ತದೆ.
ಈ ರೀತಿ ಸುಳ್ಳು ಆರೋಪ ಹೇರುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ ಎಂದು ನ್ಯಾಯ ಮೂರ್ತಿಗಳಾದ ಸುರೇಶ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ರವರು ಅಭಿಪ್ರಾಯ ತಿಳಿಸಿದರೆ. ಈ ರೀತಿಯಲ್ಲಿ ಸುಳ್ಳು ಆರೋಪ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧ ಆಗಿದ್ದು ಇನ್ನುಮುಂದೆ ಈ ರೀತಿ ಸುಳ್ಳು ದೂರು ದಾಖಲು ಮಾಡುವಂತೆ ಇಲ್ಲ ಎಂದು ಹೈಕೋರ್ಟ್ ನಲ್ಲಿ ವಾದ ಮಂಡಿಸಲಾಗಿದೆ.
ಪತಿ ಕುಟುಂಬದ ಮೇಲೆ ಪತ್ನಿ ನೀಡುವ ದೂರುಗಳು ಸುಳ್ಳು ಎಂದು ಸಾಭೀತಾದರೆ ಇದು ಕ್ರೌರ್ಯ ಕೃತ್ಯವಾಗಿರುತ್ತದೆ. ಯಾರಾದ್ರೂ ಹೀಗೆ ಮಾಡಿದರೆ ಅವರು ಕ್ಷಮಾದಾನಕ್ಕೆ ಅರ್ಹರಲ್ಲ ಎಂದು ದೆಹಲಿ ಹೈ ಕೋರ್ಟ್ ಪತಿ ಪತ್ನಿಯ ವಿವಾದದ ವಿಚಾರಣೆಯ ಸಂದರ್ಭದಲ್ಲಿ ಆದೇಶ ನೀಡಿದೆ.
ವಾಸ್ತವವಾಗಿ ಕುಟುಂಬ ನ್ಯಾಯಾಲಯವು ತನ್ನ ಆದೇಶದಲ್ಲಿ ಹಿಂದೂ ವಿವಾಹ ಕಾಯಿದೆ 1955 ರ ಸೆಕ್ಷನ್ 13 (1) (IA) ಅಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ಪತಿ ತನ್ನ ಪತ್ನಿಗೆ ವಿಚೇದನ ನೀಡಲು ಅರ್ಹನಾಗಿರುತ್ತಾನೆ ಎಂಬ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ
ನ್ಯಾಯಾಂಗದ ಇಂತಹ ಮಹತ್ವದ ತೀರ್ಪುಗಳು ಸಮಾಜ ಸುಧಾರಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಪರಿಸ್ಥಿತಿ ನಿರ್ಮಾಣವಾಗುವ ಸನ್ನಿವೇಶಗಳು ಕಂಡುಬರುವುದಿಲ್ಲ ಎಂದು ತಿಳಿಸಿದ್ದಾರೆ.