ರಿಯಾದ್: ದಟ್ಟಣೆಯಿಲ್ಲದೆ ಉಮ್ರಾವನ್ನು ನಿರ್ವಹಿಸಲು ಹಜ್ ಉಮ್ರಾ ಸಚಿವಾಲಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಉಮ್ರಾ ಯಾತ್ರಾರ್ಥಿಗಳಿಗೆ ಸೌಲಭ್ಯಗಳನ್ನೂ ಹೆಚ್ಚಿಸಲಾಗಿದೆ. ಈ ಕ್ರಮವು ಉಮ್ರಾಗೆ ಹೆಚ್ಚಿನ ಯಾತ್ರಿಕರನ್ನು ಕರೆತರುವ ಭಾಗವಾಗಿದೆ.
ಉಮ್ರಾ ನಿರ್ವಹಿಸಲು ಉತ್ತಮ ಸಮಯವೆಂದರೆ, ಬೆಳಿಗ್ಗೆ ಆರರಿಂದ ಎಂಟರವರೆಗೆ. ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಮತ್ತು ಬೆಳಗಿನ ಜಾವ 2 ರಿಂದ 4 ರ ಮಧ್ಯೆ. ಈ ಸಮಯದಲ್ಲಿ, ಯಾತ್ರಿಕರ ದಟ್ಟಣೆ ಕಡಿಮೆ ಹೊಂದಿರುವುದರಿಂದ ಅನಾಯಾಸವಾಗಿ ಉಮ್ರಾ ನಿರ್ವಹಿಸಬಹುದಾಗಿದೆ. ತವಾಫ್ ಮತ್ತು ಸಅ್ ಯ್ ಎಂಬೀ ಪ್ರಮುಖ ಕರ್ಮಗಳಿಗೆ ಈ ಸಮಯದಲ್ಲಿ ತುಲನಾತ್ಮಕವಾಗಿ ಕಡಿಮೆ ಜನಸಂದಣಿಯನ್ನು ಹೊಂದಿರುತ್ತವೆ.
ಉಮ್ರಾ ವೀಸಾ ಅವಧಿಯನ್ನು 30 ದಿನಗಳಿಂದ 90 ದಿನಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ, ವೈಯಕ್ತಿಕ ವೀಸಾ, ಭೇಟಿ ವೀಸಾ ಮತ್ತು ಪ್ರವಾಸೋದ್ಯಮ ವೀಸಾ ಬಳಸಿ ಉಮ್ರಾವನ್ನು ಮಾಡಬಹುದು. ಇ-ಅಪಾಯಿಂಟ್ಮೆಂಟ್ ಮೂಲಕ, ಈಗ ಸುಲಭವಾಗಿ ಮದೀನಾದ ಪ್ರವಾದಿ ಮಸೀದಿಗೆ ಭೇಟಿ ನೀಡಬಹುದು. ಈ ವರ್ಷ 130 ಲಕ್ಷ ವಿಶ್ವಾಸಿಗಳು ಉಮ್ರಾ ನಿರ್ವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದಿನ ವರ್ಷ ಇದನ್ನು 150ಕ್ಕೆ ಹೆಚ್ಚಿಸಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.