ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಕರ್ನಾಟಕ (ರಿ) ಸಂಸ್ಥೆಯ ಹೊಸ ಯೋಜನೆಯಾದ ಗಂಡು ಮಕ್ಕಳ ದಅವಾ ಕಾಲೇಜು ಮತ್ತು ಬಾಯ್ಸ್ ಇಸ್ಲಾಮಿಕ್ ಸ್ಕೂಲ್ ಅನ್ನು ಪುತ್ತೂರು ತಾಲೂಕಿನ ಬುಳ್ಳೇರಿಕಟ್ಟೆ ಮಂಜ ಎಂಬಲ್ಲಿ ಪ್ರಸಿದ್ಧ ದರ್ಗಾದ ಸಮೀಪವಿರುವ ಅನ್ಸಾರಿಯ ಜುಮಾ ಮಸ್ಜಿದ್ ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಬೆಳ್ಳಿಹಬ್ಬ ‘ಸಿಲ್ವರಿಯಮ್’ ಪ್ರಯುಕ್ತ ಹಮ್ಮಿ ಕೊಳ್ಳಲಾದ ಇಪ್ಪತ್ತೈದು ಅಂಶ ಕಾರ್ಯಕ್ರಮಗಳಲ್ಲಿ ದಾವಾ ಕಾಲೇಜು ಪ್ರಮುಖವಾಗಿದೆ.
ಈ ಕಳೆದ ಇಪ್ಪತ್ತ ಮೂರು ವರ್ಷಗಳಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟು ಕಾರ್ಯಾಚರಿಸಿದ ಕುಂಬ್ರ ಮರ್ಕಝ್, ಈ ಮೂಲಕ
ಗಂಡು ಮಕ್ಕಳ ವಿದ್ಯಾಭ್ಯಾಸ ಕ್ಷೇತ್ರಕ್ಕೂ ಕಾಲಿಟ್ಟಿದೆ.
‘ಮರ್ಕಝ್ ಅಕಾಡೆಮಿ ಆಫ್ ಥಿಯೋಲಜಿ’ ಎಂಬ
ಈ ಸಂಸ್ಥೆಯಲ್ಲಿ, ಶಾಲೆಯಲ್ಲಿ ಎಂಟು, ಒಂಬತ್ತು ಮತ್ತು ಪ್ರಥಮ ಪಿಯುಸಿ ತರಗತಿಗಳಿಗೆ ಪ್ರವೇಶ ನೀಡಲಾಗುವುದು.

ಪ್ರಸಿದ್ಧ ವಿದ್ವಾಂಸರಾಗಿದ್ದ ಮರ್ಹೂಮ್ ಪಿಎಂಕೆ ಮದನಿ ಪರ್ಲಡ್ಕ ದಶಕಗಳ ಹಿಂದೆ ಸ್ಥಾಪಿಸಿದ ಸದರಿ ಮಸೀದಿಯಲ್ಲಿ ಈ ಹಿಂದೆ ಹಲವು ಪ್ರಮುಖ ಅಲಿಂಗಳು ದರ್ಸಿಗೆ ನೇತೃತ್ವ ವಹಿಸಿದ್ದರು.
ಏಪ್ರಿಲ್ ಇಪ್ಪತ್ತಾರು ಶುಕ್ರವಾರ ನೂತನ ದಾವಾ ಕಾಲೇಜಿನ ಉದ್ಘಾಟನೆ ನಡೆಯಲಿದ್ದು ಪ್ರಾಂಶುಪಾಲರಾಗಿ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಕಾರ್ಯ ನಿರ್ವಹಿಸಲಿದ್ದಾರೆ. ಇದು ಮರ್ಕಝುಲ್ ಹುದಾ ಕರ್ನಾಟಕ (ರಿ) ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸಲಿದೆ.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ