janadhvani

Kannada Online News Paper

ಚೀನಾ ಮುಸ್ಲಿಮರ ಕುರಿತ ಅಧ್ಯಯನಕ್ಕೆ ಭೇಟಿ ನೀಡಿದ ಖತಾರ್ ವಿದ್ಯಾರ್ಥಿಗಳು

ದೋಹಾ: ಕತಾರ್ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಚೀನಾದ ಇಸ್ಲಾಂ ಮತ್ತು ಅಲ್ಲಿನ ಮುಸ್ಲಿಮರ ಇತಿಹಾಸವನ್ನು ಕಲಿಯಲು ಭೇಟಿ ನೀಡಿದರು.

ಅಧ್ಯಯನದ ಭಾಗವಾಗಿ 12 ದಿನಗಳಲ್ಲಿ 14 ವಿದ್ಯಾರ್ಥಿಗಳು ಚೀನಾದ ಐದು ನಗರಗಳಿಗೆ ಭೇಟಿ ನೀಡಿದ್ದರು.ಬೀಜಿಂಗ್, ಇನ್ ಜುವಾನ್, ಲನ್‌ಸೋವು, ಝಿನಿಂಗ್, ಲಿನ್ ಜಿಯಾ ಮತ್ತಿತರ ಸ್ಥಳಗಳಲ್ಲಿರುವ ವಿವಿಧ ಸ್ಥಳಗಳಿಗೆ ಬೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಮಸೀದಿಗಳು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.ಇದರೊಂದಿಗೆ, ದೇಶದ ಮೂರು ವಿಶ್ವವಿದ್ಯಾನಿಲಯಗಳ ಮುಸ್ಲಿಂ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಭೇಟಿಯಾದವು.

ಭೇಟಿಗೆ ಮುಂಚಿತವಾಗಿ ವಾರದಲ್ಲಿ ಎರಡು ತರಗತಿಗಳಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಅಂತಹ ತರಗತಿಗಳ ಮುಖಾಂತರ ಚೀನಾದಲ್ಲಿನ ಇಸ್ಲಾಮಿಕ್ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳು ಅರ್ಥೈಸಿಕೊಂಡಿದ್ದರು.ಇದಲ್ಲದೆ, ವಿದ್ಯಾರ್ಥಿಗಳು ಭೇಟಿ ಸಂಬಂಧಿಸಿದ ಪತ್ರವನ್ನು ಮಂಡಿಸಬೇಕಾಗಿತ್ತು.ಚೀನಾ ಮುಸ್ಲಿಮರ ಸಾಹಿತ್ಯ ಮತ್ತು ಸಾಂಸ್ಕೃತಿಕ ಶೈಲಿಗಳು, ಆರ್ಥಿಕ ಮತ್ತು ರಾಜಕೀಯ ದೃಷ್ಟಿಕೋನಗಳನ್ನು ವಿದ್ಯಾರ್ಥಿಗಳು ಮಂಡಿಸಬೇಕು.

ಚೀನಾದ ಆರ್ಥಿಕ ನೀತಿಗಳು ಮತ್ತು ಅದರ ಪೂರ್ವಾಭ್ಯಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿ ಮುದಾಸಿರ್ ರಾಝಾ ಶಾಕಿರ್ ಮಾತನಾಡಿ, ಚೀನೀ ಮುಸ್ಲಿಮರು ತಮ್ಮ ದೇಶದೊಂದಿಗೆ ತೋರುವ ಪ್ರೀತಿಯನ್ನು ಅರ್ಥಮಾಡಿಕೊಂಡಾಗ ಬಹಳಷ್ಟು ಆಶ್ಚರ್ಯ ಉಂಟಾಗಿದೆ ಎಂದರು.ಚೀನಾಕ್ಕೆ ಪ್ರಯಾಣಿಸಿದಾಗ ಅಲ್ಲಿನ ಮುಸ್ಲಿಮರ ಕುರಿತ ನನ್ನ ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದೆ ಎಂದರು.ಮುಸ್ಲಿಮರು ಅವರ ಧಾರ್ಮಿಕ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗಿದ್ದಾರೆ. ಚೀನಾ ಬಗ್ಗೆ ನಾನು ಬಲ್ಲವನಾಗಿರುವ ಕಾರಣ ಮುಂದಿನ ತರಗತಿಯಲ್ಲಿ ಚೀನಾದ ಕುರಿತು ಹೆಚ್ಚು ಸ್ಪಷ್ಟತೆಯನ್ನು ರೂಪೀಕರಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.

ಕತಾರ್ ನಲ್ಲಿ 2007 ರಲ್ಲಿ ಪ್ರಾರಂಭವಾದ ಸಂಘರ್ಷ ಪ್ರದೇಶಗಳು,ಸಮಾಧಾನ ಪ್ರದೇಶಗಳು ಎಂಬ ಅಧ್ಯಯನದ ಭಾಗವಾಗಿ ಜಾರ್ಜ್ ಟೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚೀನಾಕ್ಕೆ ಭೇಟಿ ನೀಡಿದ್ದರು.

error: Content is protected !! Not allowed copy content from janadhvani.com