janadhvani

Kannada Online News Paper

ಯು.ಎ.ಇ KCF ದಶಮಾನೋತ್ಸವ- ಫೆ.11ರಂದು ಶಾರ್ಜಾದಲ್ಲಿ ‘ಮಹಬ್ಬ’ ಫ್ಯಾಮಿಲಿ ಫೆಸ್ಟ್-24

ಶಾರ್ಜಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ 10ನೇ ದಶಮಾನೋತ್ಸವ ಪ್ರಯುಕ್ತ ಫೆಬ್ರವರಿ 11 ರಂದು ಶಾರ್ಜಾದ ಅಲ್ ಬತಾಯಿಹ್ ಪಾರ್ಕ್ ನಲ್ಲಿ ನಡೆಸುವ ಮಹಬ್ಬ ಫ್ಯಾಮಿಲಿ ಫೆಸ್ಟ್ -24 ಕಾರ್ಯಕ್ರಮಕ್ಕೆ ಯು.ಎ.ಇ ಯಲ್ಲಿರುವಂತಹ ಹಾಗೂ ಊರಿನಲ್ಲಿರುವಂತಹ ಉದ್ಯಮಿಗಳನ್ನು
ನಫೀಸ್ ಗ್ರೂಪ್ ನ ಚೈರ್ಮನ್ ರಾದ ಜನಾಬ್ ಅಬುಸ್ವಾಲಿ ಹಾಜಿಯವರ ನಿವಾಸದಲ್ಲಿ ಕೆ.ಸಿ.ಫ್ ನಾಯಕರಿಂದ ಅದ್ದೂರಿಯಾಗಿ ಆಮಂತ್ರಿಸಲಾಯಿತು.

ಸಭೆಯಲ್ಲಿ ಕೆ.ಸಿ.ಎಫ್ ಯು.ಎ.ಇ ಮಹಬ್ಬ ಸ್ವಾಗತ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ
ಕೆ.ಸಿ.ಎಫ್ ನ ಯು.ಎ.ಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸಹಾಜಿ ಬಸರ, ಕೆ.ಸಿ.ಎಫ್ ಮಹಬ್ಬ ಸ್ವಾಗತ ಸಮಿತಿ ಫೈನಾನ್ಸಿಯಲ್ ಕನ್ವಿನರ್ ಶುಕೂರ್ ಹಾಜಿ ಉಳ್ಳಾಲ, ಉದ್ಯಮಿಗಳಾದ ಜನಾಬ್ ಅಬುಸ್ವಾಲಿ ಹಾಜಿ, ಜನಾಬ್ ಮನ್ಸೂರ್ ಅಝದ್, ಜನಾಬ್ ಮಮ್ತಾಜ್ ಆಲಿ, ಬ್ಯಾರೀ ಕಲ್ಚರಲ್ ಫ್ರೋರಂ ಅಧ್ಯಕ್ಷರಾದ ಡಾಕ್ಟರ್ ಯೂಸುಫ್, ಜನಾಬ್ ಲತೀಫ್ ಮುಲ್ಕಿ, ಜನಾಬ್ ಇಬ್ರಾಹಿಂ ಹಾಜಿ ಗಡಿಯಾರ್, ಜನಾಬ್ ಅಬ್ದುಲ್ ಸಮದ್ ಹಾಜಿ, ಜನಾಬ್ ಜಾವೀದ್ ಹಾಜಿ ಉಪಸ್ಥಿತರಿದ್ದರು.

ಖಯಿರತ್ ಅಲ್ ಶಮ್ಸ್ ಕಾಂಟ್ರಾಕ್ಟ್ಯಿಂಗ್ ಕಂಪನಿ ದುಬೈ ಇದರ ಮಾಲೀಕರಾದ ಜನಾಬ್ ಆಶ್ರಫ್ ಶಾ ಮಂತೂರ್ ಹಾಗೂ ಇನ್ನೂ ಹಲವು ಉಲಮಾ ಹಾಗೂ ಉಮಾರ ನೇತಾರರುಗಳನ್ನು ಆಮಂತ್ರಿಸಲಾಯಿತು.
ಫೆಬ್ರವರಿ 11ರಂದು ನಡೆಯುವ ಮಹಬ್ಬ ಫ್ಯಾಮಿಲಿ ಫೆಸ್ಟ್ ಕಾರ್ಯಕ್ರಮವನ್ನು ವಿಜಯಗೊಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com