janadhvani

Kannada Online News Paper

ಸೌದಿಯಲ್ಲಿ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಿಗೆ ನಿಯಂತ್ರಣ

ರಿಯಾದ್: ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಿಗೆ ಸೌದಿ ಅರೇಬಿಯಾದಲ್ಲಿ ನಿಯಂತ್ರಣ  ಜಾರಿಗೆ ಬರಲಿದೆ.

ದೇಶದ ಮೌಲ್ಯಗಳನ್ನು ರಕ್ಷಿಸುವುದು ಮತ್ತು ವಾಣಿಜ್ಯ ಹಿತಾಸಕ್ತಿಗಳ ಪೋಸ್ಟ್ ಗಳನ್ನು ನಿಯಂತ್ರಿಸುವುದು ಮುಂತಾದ ಗುರಿಯನ್ನು ಈ ನಿಯಂತ್ರಣ ಹೊಂದಿದೆ.ಸಾಮಾಜಿಕ ಮಾಧ್ಯಮದಲ್ಲಿ ಹಸ್ತಕ್ಷೇಪ ಮಾಡಲು ನಿರ್ದಿಷ್ಟ ನಿಯಮಗಳನ್ನು ತರಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಿಂತನೆ ನಡೆಸಿದೆ.

ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಗಳು ದೇಶ ಇರಿಸಿಕೊಂಡಿರುವ ಮೌಲ್ಯಗಳನ್ನು ಕಾಪಾಡುವಂತಿರಬೇಕು.ಪೋಸ್ಟ್ ಮಾಡುವಾಗ ಮತ್ತು ಹಂಚಿಕೊಳ್ಳುವಾಗ ಧಾರ್ಮಿಕ ಮತ್ತು ಸಾಮಾಜಿಕ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಇದನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನನ್ನು ಜಾರಿಗೊಳಿಸಲಾಗುವ ಬಗ್ಗೆ ಕಡತ ತಯಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಉದ್ದೇಶಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತಿನ ಪೋಸ್ಟ್ ಮಾಡಲು ವಿಶೇಷ ಪರವಾನಗಿ ನೀಡಲಾಗುತ್ತದೆ.ಈ ಪರವಾನಗಿಯನ್ನು ಪ್ರತೀ ವರ್ಷ ನವೀಕರಿಸುವ ಆಯ್ಕೆಯನ್ನು ಹೊಂದಿರುತ್ತದೆ.

ದೇಶ, ಸಮಾಜ ಮತ್ತು ವ್ಯಕ್ತಿಗಳ ಪ್ರಯೋಜನಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವಂತೆ ರೂಪಿಸುವುದು ಈ ಕ್ರಮದ ಉದ್ದೇಶವಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳಿರುವ  ಖಾತೆ ಹೊಂದಿರುವ ಹಲವಾರು ಸ್ವದೇಶಿಗಳು ಇದ್ದಾರೆ.ವಾಣಿಜ್ಯ ಆಸಕ್ತಿಯಲ್ಲಿ ಅನೇಕ ಸಂಸ್ಥೆಗಳು ಮತ್ತು ಸಂಘಟನೆಗಳಿಗಾಗಿ  ತಮ್ಮ ಖಾತೆಗಳನ್ನು ಅವರು ಬಳಸುತ್ತಾರೆ.

ಇದಕ್ಕೆ  ಸ್ಪಷ್ಟ ಚೌಕಟ್ಟನ್ನು ರಚಿಸುವುದು ಹೊಸ ಕಾನೂನಿನ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

error: Content is protected !! Not allowed copy content from janadhvani.com