ಕೊಳ್ನಾಡು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳ ಇಲ್ಲಿಗೆ ಬೆಂಚು ಮತ್ತು ಡೆಸ್ಕ್ ನ ಕೊರತೆಯಿರುವುದರಿಂದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರ ಮನವಿಗೆ ಸ್ಪಂಧಿಸಿ ದಿನಾಂಕ:- 10 -12-2023 ರಂದು ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ವತಿಯಿಂದ ಸೆರ್ಕಳ ಶಾಲೆಗೆ ಬೆಂಚು ಮತ್ತು ಡೆಸ್ಕ್ ನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೊಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ
ಯಂ. ಎಸ್ ಮಹಮ್ಮದ್ ದ.ಕ. ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಬ್ಬಾಸ್ ಅಲಿ, ಗ್ರಾಮ ಪಂಚಾಯತ್ ಸದಸ್ಯರಾದ ಎ.ಬಿ ಅಬ್ದುಲ್ಲಾ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಜಿಲ್ಲಾ ಇದರ ಅಧ್ಯಕ್ಷರಾದ ಝಕರಿಯಾ ನಾರ್ಶ , ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ , ಪರ್ತಿಪ್ಪಾಡಿ ಜುಮಾ ಮಸೀದಿಯ ಉಪಾಧ್ಯಕ್ಷರಾದ ಲತೀಫ್ ಪರ್ತಿಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲ್, ರಝಾಕ್ ಸಿ.ಹೆಚ್, ಲಯನ್ಸ್ ಕ್ಲಬ್ ಚಾರ್ಟರ್ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಲಯನ್ಸ್ ಕ್ಲಬ್ ಬಪ್ಪನಾಡು ವಲಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ವಲಯ ಕೋಶಾಧಿಕಾರಿ ಶಿವಪ್ರಸಾದ್ ಮುಲ್ಕಿ , ಶಾಲಾ ಶಿಕ್ಷಕಿ ಸವಿತಾ, ಕೊಲ್ನಾಡು ವಲಯ ಕಾಂಗ್ರೆಸ್ ಉಪಾಧ್ಯಕ್ಷ ರಝಾಕ್ ಸುರಿಬೈಲ್, ಕೊಳ್ನಾಡು ಪಂಚಾಯತ್ ಮಾಜಿ ಅಧ್ಯಕ್ಷರಾದ ನೆಬಿಸಾ ಖಾದರ್ , ಪಂಚಾಯತ್ ಸದಸ್ಯರಾದ ಜಯಂತಿ ಗೌಡ ಇವರು ಉಪಸ್ಥಿತಿದ್ದರು.
ಪ್ರಕಟನೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಅಶ್ರಫ್ ಎಸ್.ಕೆ ತಿಳಿಸಿದ್ದಾರೆ.