ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಸದಸ್ಯತ್ವ ಅಭಿಯಾನವು ಡಿಸೆಂಬರ್ 1 ರಿಂದ 20 ರ ತನಕ ನಡೆಯಲಿದ್ದು ಅದರ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮವು ಸೂರಿಕುಮೇರು ಜಂಕ್ಷನ್ ಬಳಿ ನಡೆಯಿತು.
-ನಮ್ಮ ಮಕ್ಕಳು ಮನೆಗೂ ಮಾರಿ ಊರಿಗೂ ಮಾರಿಯಾಗಬಾರದು,
-ನಮ್ಮ ಮಕ್ಕಳು ತಂದೆ ತಾಯಿಗೂ ಊರಿನವರಿಗೂ ತಲೆ ನೋವಾಗಬಾರದು
-ನಮ್ಮ ಮಕ್ಕಳು ಪಾಶ್ಚಾತ್ಯ ವಸ್ತ್ರ ಸಂಹಿತೆ ಪಾಲಿಸುವವರಾಗಬಾರದು
-ನಮ್ಮ ಮಕ್ಕಳು ವಿಕೃತವಾಗಿ ತಲೆಕೂದಲು ಬೆಳೆಸುವವರಾಗಬಾರದು
-ನಮ್ಮ ಮಕ್ಕಳು ಗಾಂಜಾ ವ್ಯಸನಿಗಳಾಗಬಾರದು
-ನಮ್ಮ ಮಕ್ಕಳು ನಮಾಝ್ ಮಾಡದ ಜಾಹಿಲ್ ಗಳಾಗಬಾರದು
-ನಮ್ಮ ಮಕ್ಕಳು ಮರಣಹೊಂದಿದ ತಂದೆ ತಾಯಿಯನ್ನು ಮುಶ್ರಿಕ್ ಆಗಿ ಮರಣಹೊಂದಿದವರು ಎಂದು ನಂಬುವ ನೂತನವಾದಿಗಳಾಗಬಾರದು
-ನಮ್ಮ ಮಕ್ಕಳು ಆಲಿಂಗಳನ್ನು ನಿಂದಿಸುವ,ಅಹ್ಲ್‌ಬೈತ್ ಕುಟುಂಬದ ತಂಙಳ್ ಗಳ ನಿಂದಕರಾಗಬಾರದು
-ನಮ್ಮ ಮಕ್ಕಳು ಚಾಲಿಪೋಲಿ ಕ್ರಿಮಿನಲ್ ಗಳಾಗಬಾರದು
-ನಮ್ಮ ಮಕ್ಕಳು ಅಹ್ಲ್ ಸುನ್ನತ್ ವಲ್ ಜಮಾಅತ್ ನಲ್ಲಿ ಗಟ್ಟಿಯಾಗಿ ನೆಲೆಯೂರಿ ಈಮಾನ್ ಕಾಪಾಡಿಕೊಳ್ಳುವ ಸಜ್ಜನ ವ್ಯಕ್ತಿಯಾಗಬೇಕು ಅದಕ್ಕಿರುವ ಏಕೈಕ ದಾರಿ ಎಸ್ಸೆಸ್ಸೆಫ್ ನಲ್ಲಿ ಸದಸ್ಯತನ ಪಡೆದು ಉಲಮಾ ಪರಂಪರೆಯಲ್ಲಿ ತರಬೇತುಗೊಳ್ಳುವುದು ಎಂಬ ಘೋಷವಾಕ್ಯಗಳೊಂದಿಗೆ ಪೋಸ್ಟರ್ ಪ್ರದರ್ಶನ ನಡೆಸಲಾಯಿತು,ಕಾರ್ಯಕ್ರಮದಲ್ಲಿ ನಾಯಕರುಗಳಾದ ಹನೀಫ್ ಸಂಕ,ಅಝೀಂ ಸೂರಿಕುಮೇರು, ಕರೀಂ ಸೂರಿಕುಮೇರು, ಫಾರೂಕ್ ಸೂರಿಕುಮೇರು, ಶೆರೀಫ್ ಬರಿಮಾರು,ಅಬ್ದುಲ್ ಖಾದರ್ ಬರಿಮಾರು,ಇಬ್ರಾಹಿಂ ಮಾಣಿ,ಸಲೀಂ ಮಾಣಿ,ಆಶಿಕ್ ಸೂರಿಕುಮೇರು, ಮಿದ್ಲಾಜ್ ಸೂರಿಕುಮೇರು ಉಪಸ್ಥಿತರಿದ್ದರು.