janadhvani

Kannada Online News Paper

ಫ್ರೆಂಡ್ಸ್ ಮದನಿನಗರ ಅಸೋಸಿಯೇಶನ್ (ರಿ) ವತಿಯಿಂದ ಕಿರಾ’ಅತ್ ಸ್ಪರ್ಧೆ , ಬೃಹತ್ ಬುರ್ದಾ ಹಾಗೂ ಜಲಾಲಿಯ್ಯ ರಾತೀಬ್ ಕಾರ್ಯಕ್ರಮದ ಯಶಸ್ವಿಗೆ ಕರೆ

ಕುತ್ತಾರ್ : ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ (ರಿ) ಇದರ ಒಂದನೇ ವಾರ್ಷಿಕೋತ್ಸದ ಭಾಗವಾಗಿ ಮರ್ಹೂಂ ಶೈಖುನಾ ಬೈತಾರ್ ಉಸ್ತಾದ್ ಅನುಸ್ಮರಣೆ, ಮದ್ರಸಾ ಮಕ್ಕಳ ಕಿರಾಅತ್ ಸ್ಫರ್ಧೆ, ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಜಲಾಲಿಯ್ಯ ರಾತೀಬ್ ಮಜ್ಲಿಸ್ ಇದೇ‌ ನವೆಂಬರ್ 28, 29 ಗುರುವಾರ & ಶುಕ್ರವಾರದಂದು
ಕುತ್ತಾರ್ ಸ್ವಲಾತ್ ನಗರ ಮೈದಾನದಲ್ಲಿ 2 ದಿನಗಳ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.

ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ (ರಿ) ಇದರ ಅಧ್ಯಕ್ಷರಾದ ಶಿಹಾಬುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಎರಡು ದಿನದ ಕಾರ್ಯಕ್ರಮದ ಯಶಸ್ವಿಗೆ ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ (ರಿ) ಸಮಿತಿಯು ಕರೆಯನ್ನು ನೀಡುತ್ತಿದೆ.


ಮರ್ಹೂಂ ಬೈತಾರ್ ಉಸ್ತಾದ್ ರವರ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಈ ಎರಡು ದಿನದ ಕಾರ್ಯಕ್ರಮದಲ್ಲಿ ಗುರುವಾದದಂದು ಅಸರ್ ನಮಾಝಿನ ಬಳಿಕ ಸ್ಥಳೀಯ 5 ಜಮಾತಿಗೆ ಒಳಪಟ್ಟ ಮದ್ರಸಾ ಮಕ್ಕಳ ಕಿರಾಅತ್ ಸ್ಫರ್ಧೆಯು ನಡೆಯಲಿದ್ದು ನಂತರ ಮಗ್ರಿಬ್ ನಮಾಝಿನ ಬಳಿಕ ಸಭಾ ಕಾರ್ಯಕ್ರಮ ಮತ್ತು ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ದುವಾ ನೇತೃತ್ವ ನೀಡಲಿರುವ ಮಲ್ಹರ್ ಸ್ಥಾಪನೆಯ ಪ್ರಿನ್ಸಿಪಾಲ್ ಆದ ಸಯ್ಯಿದ್ ಮುಹಮ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಪೋಸೋಟ್ ಮತ್ತು ದಾರುಸ್ಸಖಾಫ್ ಚಾರಿಟಿಯ ಚೇರ್ಮಾನ್ ಆದ ಸಿ‌.ಟಿ.ಎಂ. ಸಯ್ಯದ್ ಮುಹಮ್ಮದ್ ಅಸ್ಸಖಾಫ್ ತಂಙಳ್ ರವರು ನೇತೃತ್ವ ನೀಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಸ್ವಲಾತ್ ‌ನಗರ ರಹ್ಮಾನಿಯಾ ಜುಮಾ ಮಸೀದಿಯ ಖತೀಬರಾದ ಕೆ‌.ಎಚ್ ಇಬ್ರಾಹಿಂ ಮದನಿ ಉಸ್ತಾದರು ಮಾಡಲಿದ್ದು, ಬುರ್ದಾ ಮಜ್ಲಿಸ್ ಗೆ ಸ್ವಾದಿಖ್ ಅಲಿ ಅಲ್ ಫಾಳಿಲಿ ಗೂಡಲ್ಲೂರ್ ಮತ್ತು ಅವರ ತಂಡ ಅಲಾಪನೆ ಮಾಡಲಿದ್ದಾರೆ ಹಾಗೂ ಪ್ರವಾದಿ (ಸ.ಅ) ಪ್ರಕೀರ್ತನೆಯ ಮೂಲಕ ನಮ್ಮೆಲ್ಲರನ್ನು ಮದೀನಾದ ಕಡೆ ಕೊಂಡೊಯ್ಯಲು ಪ್ರಖ್ಯಾತ ನ’ಅತೇ ಶರೀಫ್ ಗಾಯಕ ಮುಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ಇವರು ಆಗಮಿಸಲಿದ್ದಾರೆ.
ಎರಡನೇ ದಿನವಾದ ಶುಕ್ರವಾರದಂದು ಸಯ್ಯಿದ್ ಜ’ಅಫರ್ ಸ್ವಾದಿಖ್ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ ಆಧ್ಯಾತ್ಮಿಕ ಬೃಹತ್ ಜಲಾಲಿಯ್ಯ ರಾತೀಬ್ ಮಜ್ಲಿಸ್ ನಡೆಯಲಿದೆ. ಸಯ್ಯಿದ್ ಮುಹಮ್ಮದ್ ಜಲಾಲುದ್ದೀನ್ ತಂಙಳ್ ಅಲ್ ಹಾದಿ ಕುತ್ತಾರ್ ರವರ ನೇತೃತ್ವದಲ್ಲಿ ದುವಾ ಮೂಲಕ ಚಾಲನೆ ನೀಡಲಿದ್ದು ಉದ್ಘಾಟನೆಯನ್ನು ಸ್ಥಳೀಯ ಮದನಿ ನಗರ ಜಮಾತಿನ ಖತೀಬರಾದ ಪಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ ಅಲ್ ಫುರ್ಖಾನಿಯವರು ಮಾಡಲಿದ್ದು ಹಾಗೂ ಕರ್ನಾಟಕ ಉಲಮಾ ಒಕ್ಕೂಟ ‌ಮುಶಾವರದ ಸದಸ್ಯರಾದ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದವರು ಪ್ರಾಸ್ತಾವಿಕ ಭಾಷಣವನ್ನು ನುಡಿಯಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಬಿ‌.ಜಿ ಹನೀಫ್ ಹಾಜಿ, ಯು.ಟಿ. ಇಫ್ತಿಕಾರ್, ಮೈಸೂರ್ ಬಾವ, ಸ್ಥಳೀಯ ಜಮಾತಿನ ಅಧ್ಯಕ್ಷರಾದ AP ಅಬ್ದುಲ್ ಅಝೀಝ್, HH ಅಝೀಝ್ ಹಾಜಿ ಹಾಗೂ ಇನ್ನಿತರ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು
ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ (ರಿ) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

error: Content is protected !! Not allowed copy content from janadhvani.com