ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ವತಿಯಿಂದ ಡಿಸೆಂಬರ್ 3 ಮಂಗಳವಾರದಂದು ಸಂಘಟನೆಯ ಮುಂದಿನ ಅವಧಿಯ ಸದಸ್ಯತ್ವ ಹಾಗೂ ಪುನರ್ರಚನೆ ಪ್ರಕ್ರಿಯೆ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮ ದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು, ಝೋನ್ ಸಮಿತಿಯ ಕ್ಯಾಬಿನೆಟ್ ಸದಸ್ಯರು, ಸರ್ಕಲ್ ಸಮಿತಿಯ ಅಧ್ಯಕ್ಷ ,ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಭಾಗವಹಿಸಲಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್
ರಾಜ್ಯಾಧ್ಯಕ್ಷ ಹಝ್ರತ್ ಮುಹಮ್ಮದ್ ಪಾಝಿಲ್ ರಝ್ವಿ ಕಾವಳ್ ಕಟ್ಟೆ ಅಧ್ಯಕ್ಷ ತೆಯಲ್ಲಿ ನಡೆಯುವ ಕಾರ್ಯಕ್ರಮ ವನ್ನು ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ ಉದ್ಘಾಟಿಸುವರು.ರಾಜ್ಯ ಉಪಾಧ್ಯಕ್ಷ ಮೌಲಾನ ಶಾಫಿ ಸಅದಿ ಬೆಂಗಳೂರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ . ಎಸ್ ಪಿ ಹಂಝ ಸಖಾಫಿ , ಡಾ ಝೈನೀ ಕಾಮಿಲ್, ತೋಕೆ ಕಾಮಿಲ್ ಸಖಾಫಿ,ಅಬ್ದುಲ್ ಹಮೀದ್ ಬಜಪೆ ವಿವಿಧ ವಿಷಯಗಳಲ್ಲಿ ತರಗತಿಗಳನ್ನು ನಡೆಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಪಿಪಿ ಅಹ್ಮದ್ ಸಖಾಫಿ , ಇಸ್ಮಾಯಿಲ್ ತಂಙಲ್ ಉಜಿರೆ ,ರಾಜೇಶ್ ಮುಹಮ್ಮದ್ ಹಾಜಿ ,ಜಿ ಎಂ ಕಾಮಿಲ್ ಸಖಾಫಿ, ಯೂಸುಫ್ ಹಾಜಿ ಉಪ್ಪಳ್ಳಿ, ಅಬ್ದುಲ್ ಲತೀಫ್ ಸೂಂಠಿಕೊಪ್ಪ, ಅಶ್ರಫ್ ಸ ಅದಿ ಮಲ್ಲೂರು ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಳ್ ಸ ಅದಿ,ಪ್ರಧಾನ ಕಾರ್ಯದರ್ಶಿ ಎಂ ಬಿ ಮುಹಮ್ಮದ್ ಸಾದಿಕ್ ಮಲೆಬೆಟ್ಟು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.