ಬೊಳಂತೂರು :- ದಾರುಲ್ ಅಶ್ ಅರಿಯ್ಯ ವಾರ್ಷಿಕ ಬುರ್ದಾ ಮಜ್ಲಿಸ್ ಹಾಗೂ ದಫ್ ರಾತೀಬ್ ಕಾರ್ಯಕ್ರಮವು ದಿನಾಂಕ 24-11-2023 ನೇ ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.
ಸಂಜೆ 6.30 ಕ್ಕೆ ಬಾಳೆಪುಣಿ ಉಮ್ಮರ್ ಹಾಜಿ ನೇತೃತ್ವದಲ್ಲಿ ದಫ್ ರಾತೀಬ್ ಹಾಗೂ ರಾತ್ರಿ ಗಂಟೆ 8 ಕ್ಕೆ ರಶೀದ್ ಹನೀಫಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಅಶ್ ಅರಿಯ್ಯ ಮಸೀದಿಯಲ್ಲಿ ನಡೆಯಲಿದೆ.
ಶೈಖುನಾ ವಾಲೆಮುಂಡೋವು ಉಸ್ತಾದ್ ಅಧ್ಯಕ್ಷತೆಯಲ್ಲಿ ಶೈಖುನಾ ಬೊಳ್ಮಾರ್ ಉಸ್ತಾದ್ ಉದ್ಘಾಟಿಸಲಿದ್ದಾರೆ.
ಅಸ್ಸಯ್ಯಿದ್ ಮದಕ ತಂಙಳ್ ದುಃಅ ಆಶೀರ್ವಚನಗೈಯಲಿದ್ದಾರೆ.
ದಾರುಲ್ ಅಶ್ ಅರಿಯ್ಯ ಮೆನೇಜರ್ ಸಿ. ಹೆಚ್ ಮುಹಮ್ಮದಲಿ ಸಖಾಫಿ ಸ್ವಾಗತ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್, ಅಕ್ಬರ್ ಅಲಿ ಮದನಿ ಮಂಚಿಬೈಲು, ಬುರ್ದಾ ಮಜ್ಲಿಸ್ ಅಧ್ಯಕ್ಷ ರಫೀಕ್ ಮಾಡದಬಳಿ , ಇಬ್ರಾಹೀಂ ನಾರ್ಶ, ಅಬ್ದುಲ್ಲಾ ನಾರಂಕೋಡಿ, ಉಮ್ಮರ್ ಹಾಜಿ ಬೊಳಂತೂರು, ಅಶ್ರಫ್ ನಾರ್ಶ, ಹಂಝ ಮಂಚಿ, ರಫೀಕ್ ಝುಹ್ರಿ ಮಂಚಿ, ಹೈದರ್ ಕುಡುಂಬಕೋಡಿ, ಹನೀಫ್ ನಿರ್ಭೈಲ್ , ಝಕರಿಯಾ ನಾರ್ಶ, ಹಮೀದ್ ಮುಸ್ಲಿಯಾರ್ ಕೆ.ಪಿ ಬೈಲ್ , ಸಿ.ಹೆಚ್ ಅಬೂಬಕ್ಕರ್, ಲತೀಫ್ ಪರ್ತಿಪ್ಪಾಡಿ, ಬಾವುಚ್ಚ ಮೆದು ಹಾಗೂ ಇನ್ನಿತರ ಉಲಮಾ ಉಮರಗಳು ಭಾಗವಹಿಸಲಿದ್ದಾರೆ ಎಂದು ಕೋ ಅರ್ಡಿನೇಟರ್ ಇಬ್ರಾಹೀಂ ಕರೀಂ ಕದ್ಕಾರ್ ಪ್ರಕಟನೆಗೆ ತಿಳಿಸಿದ್ದಾರೆ.