ವಿಟ್ಲ: ಇಲ್ಲಿನ ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿ ಜಮಾಅತ್‌ನ ಖಾಝಿಯಾಗಿ ಶೈಖುನಾ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ ಬುಖಾರಿ ಕೂರತ್ ರವರನ್ನು ಜಮಾಅತಿನ ಸರ್ವ ಸದಸ್ಯರ ಸಮ್ಮುಖದಲ್ಲಿ ಜಮಾಅತಿನ ಅಧ್ಯಕ್ಷರಾದ ಬಹು ಅಬೂಬಕರ್ ಪಿ ರವರು ಬೈಅತ್ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಲಾಯಿತು.
ಜಮಾಅತಿನ ವತಿಯಿಂದ ಗೌರವ ವಸ್ತ್ರವನ್ನು ತೊಡಿಸಲಾಯಿತು, ಶಿರೋವಸ್ತ್ರವನ್ನು ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೊವು ಉಸ್ತಾದ್ ನೇರವೇರಿಸಿದರು, ಖಾಝಿ ಸ್ವೀಕಾರ ಅಂಗೀಕಾರ ಪತ್ರವನ್ನು ಖಾಝಿಯವರ ಪವಿತ್ರ ಹಸ್ತದಿಂದ ಜಮಾಅತಿನ ಪ್ರತಿನಿಧಿಗಳು ಸ್ವೀಕರಿಸಿದರು.ಪವಿತ್ರ ಇಸ್ಲಾಮಿನ ಖಾಝೀ ಸ್ಥಾನದ ಗೌರವರ ಕುರಿತು ಬಹು ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೊವು ಉಸ್ತಾದ್ ವಿವರಿಸಿದರು.
ಖಾಝೀ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದ ಶೈಖುನಾ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ರವರು, ಖಾಝಿ ಎಂಬುವುದು ಅತೀ ಜವಾಬ್ದಾರಿಯುತವಾದ ಒಂದು ಹುದ್ದೆಯಾಗಿದ್ದು ಅದರ ಪಾವಿತ್ರ್ಯತೆಗೆ ಚ್ಯುತಿ ಬಾರದಂತೆ ನಡೆದು ಕೊಳ್ಳುವುದು ಜಮಾಅತಿನ ಸರ್ವರ ಬಾಧ್ಯತೆಯಾಗಿದೆ ಎಂದರು. ಖಾಝಿಯವರ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವುದು ಸರಿಯಲ್ಲ, ಆದುದರಿಂದ ಯಾವುದೇ ಕಾರ್ಯಕ್ರಮ ನಡೆಸುವಾಗಲೂ ಖಾಝಿಯವರ ಅನುಮತಿಯನ್ನು ಪಡೆಯುವುದು ಕಡ್ಡಾಯ ಎಂದರು.
ಖಾಝಿಯ ಅಧೀನದಲ್ಲಿರುವ ಒಬ್ಬ ಖತೀಬ್ ಸಯ್ಯಿದರಾದರೂ ಅವರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರ ಖಾಝಿಗೆ ಇದೆ, ಎಂಬಂತಹ ಖಾಝಿಯವರ ಉನ್ನತ ಜವಾಬ್ದಾರಿ ಹಾಗೂ ಅದರ ಅನುಷ್ಠಾನಗೊಳ್ಳಿಸುವಿಕೆಯ ಕಡ್ಡಾಯದ ಕುರಿತು ಸಲಹೆ ನೀಡಿದರು.
ಸಹಾಯಕ ಖಾಝಿಯಾಗಿ ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೊವು ಉಸ್ತಾದನ್ನು ಖಾಝಿಯವರು ನಿಯಮಿಸಿ ಘೋಷಿಸಿದರು.ಸಹಾಯಕ ಖಾಝಿಯವರನ್ನು ಜಮಾಅತಿನ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಸ್ಥಳೀಯ ಖತೀಬರಾದ ಬಹು ಉನೈಸ್ ಸಖಾಫಿ ಅಲ್ ಅಫ್ಲಲಿ ರವರು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಬಹು ಹುಸೈನ್ ಸಅದಿ ಕುಕ್ಕಿಲ, ಅಧ್ಯಕ್ಷರಾದ ಅಬೂಬಕರ್ ಪಿ, ಉಮರಾ ನೇತಾರ ಬಹು ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಕೋಶಾಧಿಕಾರಿ ಮುಹಮ್ಮದ್, ಉಪಾಧ್ಯಕ್ಷರಾದ ಶಬೀರ್ ಸಾಹಿಬ್, ಬಶೀರ್ ಮದನಿ, ಮದ್ರಸಾ ಉಸ್ತುವಾರಿಗಳಾದ ಅದ್ರಾಮಚ್ಚ ಕೊಪ್ಪಳ, ಹಸೈನಾರ್, ಕಾರ್ಯದರ್ಶಿಗಳಾದ ಖಾದರ್ ಫಾತಿಮಾ ಸ್ಟೋರ್, ಹಂಝತ್, ಇಬ್ರಾಹಿಂ ಹಾಜಿ, ಝುಬೈರ್ ಪೆರ್ಲಂಪಾಡಿ, ಕುಂಞಿ ಮೊನುಚ್ಚ, ಯಾಕುಬ್ ಸಾಹಿಬ್, ಹಸೈನಾರ್ಚ, ಹನೀಫ್ ಎನ್ ಕೆ, ರಫೀಕ್ ಹಿಮಮಿ, ರಫೀಕ್ ಮುಸ್ಲಿಯಾರ್, ಹಕೀಂ ಮುಸ್ಲಿಯಾರ್ ಮೊದಲಾದ ನೇತಾರರು ಜಮಾಅತಿನ ಸದಸ್ಯರು ಭಾಗವಹಿಸಿ , ಕಾರ್ಯದರ್ಶಿ ಮುಸ್ತಕ್ ಬೇಗ್ ವಂದಿಸಿದರು.